ಕರ್ನಾಟಕ ವೈದ್ಯಕೀಯ ಮಂಡಳಿಗೆ ನಡೆದ ಚುನಾವಣೆಯನ್ನು ರದ್ದುಪಡಿಸಿದ ಹೈಕೋರ್ಟ್: ಆರ್‌ಒ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಆದೇಶ

ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ವೈದ್ಯಕೀಯ ಮಂಡಳಿಗೆ (ಕೆಎಂಸಿ) ನಡೆದ ಚುನಾವಣೆಯನ್ನು ರದ್ದುಪಡಿಸಿ ಇನ್ನು ಆರು ತಿಂಗಳಲ್ಲಿ ಮತ್ತೆ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ಮಂಡಳಿಗೆ ಆದೇಶಿಸಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ವೈದ್ಯಕೀಯ ಮಂಡಳಿಗೆ (ಕೆಎಂಸಿ) ನಡೆದ ಚುನಾವಣೆಯನ್ನು ರದ್ದುಪಡಿಸಿ ಇನ್ನು ಆರು ತಿಂಗಳಲ್ಲಿ ಮತ್ತೆ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ಮಂಡಳಿಗೆ ಆದೇಶಿಸಿದೆ.

ಹೈಕೋರ್ಟ್‌ನ ಕಲಬುರಗಿ ನ್ಯಾಯಪೀಠದಲ್ಲಿ ಕಲಬುರಗಿಯ 70 ವರ್ಷದ ವೈದ್ಯ ಗಚ್ಚಿನಮನಿ ನಾಗನಾಥ  ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ  ಈ ಆದೇಶ ನೀಡಿದೆ.

ಇದರ ಪರಿಣಾಮವಾಗಿ, ಜನವರಿ 23, 2020 ರಂದು ಕೆಎಂಸಿಗೆ ನಡೆದ ಚುನಾವಣೆ ಮತ್ತು ಜನವರಿ 25, 2020 ರಂದು ಘೋಷಿಸಲಾದ ಫಲಿತಾಂಶ ರದ್ದಾಗಿದೆ.

ಕೌನ್ಸಿಲ್ ಒದಗಿಸಿದಂತೆ ಕೆಎಂಸಿಯ ಸದಸ್ಯರ ಪಟ್ಟಿಗೆ ಅನುಗುಣವಾಗಿ ಕಾರ್ಯನಿರ್ವಹಿಸದಂತೆ ಸಹಕಾರಿ ಸಂಘಗಳ ಜಂಟಿ ರಿಜಿಸ್ಟ್ರಾರ್ ಆಗಿರುವ ಆರ್‌ಒಗೆ ನಿರ್ದೇಶನ ಕೋರಿ ಅರ್ಜಿದಾರರು ನ್ಯಾಯಾಲಯವನ್ನು ಕೇಳಿದ್ದರು. ಚುನಾವಣಾ ಪಟ್ಟಿ ತಯಾರಿಕೆ ಮತ್ತು ಕಾನೂನಿನ ಪ್ರಕಾರ ಚುನಾವಣೆ ನಡೆಸಲು ನಿರ್ದೇಶನ ಕೋರಿದ್ದರು. ಅದಕ್ಕೆ ಒಪ್ಪಿದ ನ್ಯಾಯಾಲಯ, ಕರ್ನಾಟಕ ವೈದ್ಯಕೀಯ ನೋಂದಣಿ ಕಾಯ್ದೆ ಮತ್ತು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಹಂತದಿಂದ ಬಂದ ನಿಯಮಗಳನ್ನು ಅನುಸರಿಸಿ ಕಟ್ಟುನಿಟ್ಟಾಗಿ ಕೆಲಸ ಮಾಡಲು ಮತ್ತು ಮರುಚುನಾವಣೆಯನ್ನು ನಡೆಸುವಂತೆ ರಾಜ್ಯ ಮತ್ತು ಕೆಎಂಸಿಗೆ ನಿರ್ದೇಶನ  ನೀಡಿದೆ.

ಆರ್‌ಒ ಅನ್ನು ಸರ್ಕಾರವು ರಕ್ಷಿಸುವ ಸಾಧ್ಯತೆಗಳನ್ನು ತಪ್ಪಿಸಲು ರಿಟರ್ನಿಂಗ್ ಆಫೀಸರ್ ಡಿ ಪಾಂಡುರಂಗ್ ಗರಗ್ ವಿರುದ್ಧದ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳುವ ಕೆಲಸ  ಲೋಕಾಯುಕ್ತಕ್ಕೆ ವಹಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು, ಏಕೆಂದರೆ ರಾಜ್ಯ ಮತ್ತು ಆರ್‌ಒ ಎರಡೂ ಒಗ್ಗಟ್ಟಿನಿಂದ ಒಪ್ಪಂದ ಮಾಡಿಕೊಂಡಿವೆ ಅಲ್ಲದೆ ಇಬ್ಬರೂ ಪರಸ್ಪರ ಸಮರ್ಥಿಸಿಕೊಂಡಿವೆ.

ಲೋಕಾಯುಕ್ತರು ವಿಚಾರಣೆಯನ್ನು ನಡೆಸುತ್ತಾರೆ ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತಾರೆ, ಅದು ಪರಿಗಣಿಸಿ ಸೂಕ್ತ ಆದೇಶಗಳನ್ನು ರವಾನಿಸುತ್ತದೆ. ಈ ಪ್ರಕ್ರಿಯೆಯು ಒಂಬತ್ತು ತಿಂಗಳಲ್ಲಿ ಮುಕ್ತಾಯಗೊಳ್ಳಬೇಕು ಎಂದು ನ್ಯಾಯಾಲಯವು ತಿಳಿಸಿದೆ, ಕೆಎಂಸಿ ಮತದಾರರ ಪಟ್ಟಿಯಲ್ಲಿ 37,298 ವೈದ್ಯರಿದ್ದು, ಇವರಲ್ಲಿ ಸಾಕಷ್ಟು ಮೃತ ವೈದ್ಯರ ಹೆಸರುಗಳಿದೆ ಎಂದು ನ್ಯಾಯಾಉಲಯ ಗಮನಿಸಿದೆ. "ಇದು ಆರ್‌ಒ ಕಾನೂನನ್ನು ಅನುಸರಿಸಿ ನಿರಪರಾಧಿ ಅಧಿಕಾರಿ ಎಂದು ವಾದಿಸಲು ಮುಂದಾಗುವುದು ಅವರ ಮೋಸದ ಚಟುವಟಿಕೆಯನ್ನು ಮುಚ್ಚಿಹಾಕುವ ಕಾರ್ಯತಂತ್ರ ಮಾತ್ರ.. ಈ ನ್ಯಾಯಾಲಯವು ಇಂತಹ ಮೋಸದ ಕೃತ್ಯಗಳಿಗೆ ದೃಷ್ಟಿ ಕುರುಡಾಗಿಸಿಕೊಳ್ಲಲು ಸಾಧ್ಯವಿಲ್ಲ. ವಂಚನೆ ಎಲ್ಲವನ್ನು ಬಿಚ್ಚಿಡುತ್ತದೆ ಮತ್ತು ಪ್ರತಿ ಗಂಭೀರ ಕೃತ್ಯವನ್ನು ಕಾನಿಸುತ್ತದೆ”ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com