ನೆಲಮಂಗಲ: ದೋಷ ನಿವಾರಣೆಗೆ ಅಪ್ರಾಪ್ತ ಬಾಲಕಿಯ 'ನರಬಲಿ'ಗೆ ಯತ್ನ, ಮಾಂತ್ರಿಕ ಸೇರಿ ಐವರು ಅರೆಸ್ಟ್

ನೆಲಮಂಗಲ ಗ್ರಾಮೀಣ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಒಬ್ಬ ಮಾಂತ್ರಿಕ ಸೇರಿದಂತೆ ಐವರ ತಂಡವನ್ನು ಭಾನುವಾರ ಬಂಧಿಸಿದ್ದಾರೆ. ಈ ತಂಡ  10 ವರ್ಷದ ಬಾಲಕಿಯನ್ನು 'ನರಬಲಿ' ನೀಡಲು ಯತ್ನಿಸಿದ್ದಾಗಿ ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನೆಲಮಂಗಲ ಗ್ರಾಮೀಣ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಒಬ್ಬ ಮಾಂತ್ರಿಕ ಸೇರಿದಂತೆ ಐವರ ತಂಡವನ್ನು ಭಾನುವಾರ ಬಂಧಿಸಿದ್ದಾರೆ. ಈ ತಂಡ  10 ವರ್ಷದ ಬಾಲಕಿಯನ್ನು 'ನರಬಲಿ' ನೀಡಲು ಯತ್ನಿಸಿದ್ದಾಗಿ ಹೇಳಲಾಗಿದೆ.

ನೇಲಮಂಗಲ ಬಳಿಯ ಗಾಂಧಿ ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದಾಗ ಆರೋಪಿಗಳು 10 ವರ್ಷದ ಬಾಲಕಿಯನ್ನು ಅಪಹರಿಸಿದ್ದಾರೆ. ವಿವರವಾದ ತನಿಖೆ ನಡೆಸಿದ ನಂತರ ನೆಲಮಂಗಲ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ಅಮಾನವೀಯ ದುಷ್ಟ ಅಭ್ಯಾಸಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ತಡೆಗಟ್ಟುವಿಕೆ ಮಸೂದೆ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆಗಡಿಯಲ್ಲಿ  ಎಫ್ಐಆರ್ ದಾಖಲಿಸಲಾಗಿದೆ.

ಈ ಘಟನೆ ಜೂನ್ 14 ರಂದು ನಡೆದಿದ್ದು, ಬಾಲಕಿ ಅಜ್ಜಿಯೊಂದಿಗೆ ಉಳಿದು ಸರ್ಕಾರಿ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದಾಳೆ. ಕೂಲಿ  ಕಾರ್ಮಿಕರಾಗಿರುವ ಬಾಲಕಿಯ ಪೋಷಕರು ಮಾಗಡಿಯಲ್ಲಿ ವಾಸವಿದ್ದರು.

ದೂರಿನಲ್ಲಿ ಪೋಷಕರು ತಮ್ಮ ನೆರೆಮನೆಯ  ಸಾವಿತ್ರಮ್ಮ ಮತ್ತು ಅವರ ಮಗಳು ಸೌಮ್ಯಾ ಪ್ರಸಾದವನ್ನು ನೀಡುವ ನೆಪದಲ್ಲಿ ಬಾಲಕಿಯನ್ನು ಕರೆದೊಯ್ದರು ಮತ್ತು ಮಾಟ ಮಂತ್ರದಂತಹಾ ಆಚರಣೆಗಳನ್ನು ಮಾಡಲು ಹಾರವನ್ನು ಧರಿಸಲು ಒತ್ತಾಯಿಸಿದರು. ಆಕೆಯ ಅಜ್ಜಿ ಮಗು ಮನೆಯ ಸುತ್ತ ಮುತ್ತ ಕಾಣುವುದಿಲ್ಲ ಎಂದು ಗಮನಿಸಿದರು ಮತ್ತು ಹುಡುಕಾಟಕ್ಕೆ ತೊಡಗಿದ್ದಾರೆ. ಆಕೆ ಪಕ್ಕದ ಮೈದಾನದಲ್ಲಿ ಆರೋಪಿಗಳೊಂದಿಗೆ ಮಗು ಇರುವುದನ್ನು ಕಂಡಿದ್ದಾರೆ. ಆ ವೇಳೆ ಮಗು ಕಿರುಚುತ್ತಿತ್ತು.

ಆಕೆಯನ್ನು ರಕ್ಷಿಸಲಾಯಿತು ಮತ್ತು ನಂತರ ಬಾಲಕಿ ಈ ಘಟನೆಯನ್ನು ವಿವರಿಸಿದ್ದು, ಆರೋಪಿಗಳು ಅವಳನ್ನು ಕೊಲ್ಲಲು ಯತ್ನಿಸುತ್ತಿದ್ದಾರೆಂದು ಹೇಳಿದ್ದಾಳೆ. ಸುರೇಶನ ಅಪ್ರಾಪ್ತ ಮಗಳು ಸಾವನ್ನಪ್ಪಿದ ದೋಷ ನಿವಾರಿಸಲು ಬಾಲಕಿಯನ್ನು ನರಬಲಿ ಕೊಡಲು ಬಯಸಿದ್ದರೆಂದು ಕುಟುಂಬ ಆರೋಪಿಸಿದೆ.

ಪೋಲೀಸರು ಪ್ರಶ್ನಿಸಿದಾಗ ಆರೋಪಿಗಳು ತಮ್ಮ ಹೊಲದಲ್ಲಿ ಚಾಮುಂಡಿ ಮತ್ತು ಮುನೇಶ್ವರ ದೇವಸ್ಥಾನವನ್ನು ನಿರ್ಮಿಸಲು ನಿರ್ಧರಿಸಿದ್ದರು ಎಂದು ಸ್ಪಷ್ಟಪಡಿಸಿದರು ಮತ್ತು ಅದಕ್ಕೆ ಶಿಲಾನ್ಯಾಸ ಮಾಡುವ ಸಮಾರಂಭಕ್ಕಾಗಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಬಲಿ ಕೊಡಲು ಮಾಂತ್ರಿಕ ಸೂಚಿಸಿದ್ದರು ಎಂದು ವಿವರಿಸಿದ್ದಾರೆ. ಪೊಲೀಸರು ಹೇಳಿಕೆ ದಾಖಲಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ

ಏತನ್ಮಧ್ಯೆ, ಪ್ರಕರಣವನ್ನು ಹಿಂಪಡೆಯುವಂತೆ ಆರೋಪಿಗಳು ದಂಪತಿಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಮತ್ತು ವಿಚಾರಣೆಯ ನಂತರ ಪ್ರತಿದಿನ ಆರೋಪಿಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆಎಂದು ಆರೋಪಿಸಲಾಗಿದೆ.ಈ ಹಿಂದೆ ಪ್ರಕರಣ ದಾಖಲಿಸದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.

ಶನಿವಾರ ಈ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡ ಕೂಡಲೇ ಪೊಲೀಸರು ಶೀಘ್ರವಾಗಿ ಕ್ರಮ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com