ಕೊಲೆ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
ಕೊಲೆ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ

ವಿಜಯಪುರದಲ್ಲೊಂದು ಮರ್ಯಾದಾ ಹತ್ಯೆ?: ಏಕಾಂತದಲ್ಲಿದ್ದ ಪ್ರೇಮಿಗಳ ಕೊಚ್ಚಿ ಕೊಲೆ!

ಪರಸ್ಪರ ಪ್ರೀತಿ, ಪ್ರೇಮದಾಟದಲ್ಲಿ ನಿರತರಾಗಿದ್ದ ಜೋಡಿಯನ್ನು ಹಾಡಹಗಲೇ ಬರ್ಬರವಾಗಿ ಹತ್ಯೆಗೈದ ಘಟನೆ ಸಿಂದಗಿ ತಾಲೂಕಿನ ಸಲಾದ ಹಳ್ಳಿಯಲ್ಲಿ ನಡೆದಿದ್ದು, ಮೇಲ್ನೋಟಕ್ಕೆ ಇದು ಮರ್ಯಾದೆ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.
Published on

ವಿಜಯಪುರ:  ಪರಸ್ಪರ ಪ್ರೀತಿ, ಪ್ರೇಮದಾಟದಲ್ಲಿ ನಿರತರಾಗಿದ್ದ ಜೋಡಿಯನ್ನು ಹಾಡಹಗಲೇ ಬರ್ಬರವಾಗಿ ಹತ್ಯೆಗೈದ ಘಟನೆ ಸಿಂದಗಿ ತಾಲೂಕಿನ ಸಲಾದ ಹಳ್ಳಿಯಲ್ಲಿ ನಡೆದಿದ್ದು, ಮೇಲ್ನೋಟಕ್ಕೆ ಇದು ಮರ್ಯಾದೆ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

ದೇವರಹಿಪ್ಪರಗಿ ತಾಲೂಕಿನ ಗಡಿ ಗ್ರಾಮ ಸಲಾದಹಳ್ಳಿಯಲ್ಲಿ ಘಟನೆ ನಡೆದಿದೆ. ಗ್ರಾಮದ ಯುವಕ ಬಸವರಾಜ ಬಡಿಗೇರ (19) ಹಾಗೂ ಪಕ್ಕದ ಗ್ರಾಮ ಖಾನಾಪುರದ ದಾವಲ್ಗಿ ತಂಬದ್ (18) ಕೊಲೆಯಾದವರು.

ಯುವತಿ ತನ್ನ ಪ್ರಿಯಕರ ಬಸವರಾಜ ಬಡಿಗೇರ ಭೇಟಿಯಾಗಿದ್ದ ವೇಳೆ ಇಬ್ಬರನ್ನೂ ಒಟ್ಟಿಗೆ ಕಂಡ ಯುವತಿಯ ಕುಟುಂಬಸ್ಥರು ಇಬ್ಬರನ್ನೂ ಕೊಲೆ ಮಾಡಿ ಪರಾರಿಯಾಗಿದ್ದಾರೆ. ನ್ಯಾಯಕೊಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಸಿಂಧಗಿಯ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ..

ಅನ್ಯಕೋಮಿನ ಈ ಜೋಡಿಗಳು ಕಳೆದ 6 ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದು ಯುವತಿಯ ಪೋಷಕರಿಗೆ ಗೊತ್ತಾದ ಬಳಿಕ  ಕುಟುಂಬದವರು ಯುವಕನಿಗೆ ಆಕೆಯಿಂದ ದೂರ ಇರುವಂತೆ ತಾಕೀತು ಮಾಡಿದ್ದರು.

ಆದರೆ ಅವರಿಬ್ಬರೂ ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು. ಮಂಗಳವಾರ ಮಧ್ಯಾಹ್ನ ಯುವಕ ಹಾಗೂ ಹೊಲದಲ್ಲಿ ಪ್ರೀತಿ, ಪ್ರೇಮದಲ್ಲಿ ನಿರತರಾಗಿದ್ದು ಯುವತಿಯ ತಂದೆಗೆ ಗೊತ್ತಾಗಿದೆ. ತಕ್ಷಣ ಇಬ್ಬರನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಬಳಿಕ ಯುವತಿ ತಂದೆ ಮತ್ತೆ ಕೆಲವರ ಸಹಾಯದೊಂದಿಗೆ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಡಿವೈಎಸ್ ಪಿ ಶ್ರೀಧರ ರೆಡ್ಡಿ ತಿಳಿಸಿದ್ದಾರೆ.

ಇದುವರೆಗೂ ನಾವು ಯಾರನ್ನೂ ಕಸ್ಟಡಿಗೆ ತೆಗೆದುಕೊಂಡಿಲ್ಲ, ಯುವತಿಯ ತಂದೆ ಸೇರಿದಂತೆ ಐವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅವರಿಗಾಗಿ ಶೋಧ ನಡೆಸಿದ್ದೇವೆ,  ಯುವತಿಯ ಸಂಬಂಧಿಕರು ಮತ್ತು ಗ್ರಾಮಸ್ಥರನ್ನು ವಿಚಾರಣೆಗೊಳಪಡಿಸಿದ್ದು, ಮುಂದಿನ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ, ಸ್ಥಳಕ್ಕೆ ಎಸ್ ಪಿ ಅನುಪಮ್ ಆಗರ್ ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com