ಮಂಡ್ಯ: ಕೃಷಿ ತೋಟಕ್ಕೆ ಕುರಿಗಳು ಹೋಗಿದ್ದಕ್ಕೆ ಅಪ್ರಾಪ್ತ ಬಾಲಕನನ್ನು ಮರಕ್ಕೆ ಕಟ್ಟಿ ಥಳಿತ!

ಕೃಷಿ ಭೂಮಿಯಲ್ಲಿ  ಕುರಿ ಮೇಯಿಸಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಕೃಷಿ ಭೂಮಿಯಲ್ಲಿ  ಕುರಿ ಮೇಯಿಸಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮುದ್ದೇನಹಳ್ಳಿಯ 13 ವರ್ಷದ ನಾಗೇಶ್ (ಹೆಸರು ಬದಲಾಯಿಸಲಾಗಿದೆ). ಬೆಳಗೊಳದ ಕರಾವಳಿ ಫುಡ್ ಕೋರ್ಟ್ ಬಳಿ ನಾಗೇಶ್ ಭಾನುವಾರ ಕುರಿ ಮೇಯಿಸುತ್ತಿದ್ದ. ಈ ವೇಳೆ ಕೆಲವು ಕುರಿಗಳು ಸ್ಥಳೀಯ ನಿವಾಸಿ ಹರ್ಷ ಎಂಬುವರಿಗೆ ಸೇರಿದ ಜಮೀನಿಗೆ ತೆರಳಿದ್ದವು.

ಕುರಿಗಳನ್ನು ಹಿಂಬಾಲಿಸುತ್ತಿದ್ದ ನಾಗೇಶ್ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಕೆಲವು ಕುರಿಗಳು ಕೃಷಿ ಭೂಮಿಗೆ ಹೋಗಿದ್ದವು. ಈ ವೇಳೆ ಹರ್ಷ ಎಂಬಾತ ನಾಗೇಶ್ ನನ್ನು ಹಿಡಿದಿದ್ದ. ಕೃಷಿ ಭೂಮಿಗೆ ಕುರಿಗಳನ್ನು ಬಿಟ್ಟಿದ್ದಕ್ಕೆ ಪ್ರಶ್ನಿಸಿದ್ದಾರೆ. 

ನಾಗೇಶ್ ನನ್ನು ತೆಂಗಿನ ಮರಕ್ಕೆ ಕಟ್ಟಿ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಜೊತೆಗೂಡಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾಲಕನ ಕೂಗಾಟ ಕೇಳಿ ಕರಾವಳಿ ಫುಡ್ ಕೋರ್ಟ್ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಮಗನನ್ನು ಹುಡುಕಿಕೊಂಡು ಬಂದ ನಾಗೇಶ್ ತಂದೆ ತೋಟಕ್ಕೆ ಬಂದಿದ್ದಾರೆ. ಮರಕ್ಕೆ ಮಗನನ್ನು ಕಟ್ಟಿರುವುದನ್ನು ನೋಡಿ ಆತನನ್ನು ಬಿಡುವಂತೆ ಮನವಿ ಮಾಡಿದ್ದಾರೆ. ಗೊತ್ತಿಲ್ಲದೆ ಮಗ ತೋಟಕ್ಕೆ ಪ್ರವೇಶಿಸಿದ್ದಾನೆ, ಆತನನ್ನು ಬಿಟ್ಟು ಬಿಡುವಂತೆ ಕೋರಿದ್ದಾಗಿ ನಾಗೇಶ್ ತಂದೆ ಮಂಜುನಾಥ್ ಆರೋಪಿಸಿದ್ದಾರೆ.

ಮಂಜುನಾಥ್ ಮತ್ತು ಅವರ ಕುಟುಂಬವು ತಮ್ಮ ಕುರಿಗಳಿಗೆ ಹುಲ್ಲುಗಾವಲು ಹುಡುಕುತ್ತಾ ಬಹಳ ದೂರ ಪ್ರಯಾಣಿಸುತ್ತಾರೆ. ಅವರು ಸಿರಾದಿಂದ ಬಂದಿದ್ದರು ಮತ್ತು ಪ್ರಾಣಿಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com