ಹುಬ್ಬಳ್ಳಿ-ಧಾರವಾಡದಲ್ಲಿ ಕೋವಿಡ್ ರೋಗಿಗಳ ಅಂತ್ಯಸಂಸ್ಕಾರಕ್ಕೆ ಸ್ವಯಂಸೇವಾ ಸಂಸ್ಥೆಗಳ ನೆರವು

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಕೋವಿಡ್-19 ರ ಶವಸಂಸ್ಕಾರಕ್ಕಾಗಿ ಸಂತ್ರಸ್ತರಿಗೆ ಸಹಾಯ ಮಾಡಲು ಯುವಕರ ಗುಂಪು ಒಂದಾಗಿದೆ. ಸಾಂಕ್ರಾಮಿಕ ರೋಗ ಬಡ ಕುಟುಂಬಗಳಲ್ಲಿ ಭೀತಿಯನ್ನುಂಟು ಮಾಡಿದ್ದು ಇದನ್ನು ಹೋಗಲಾಡಿಸುವ ಸಲುವಾಗಿ ಯುವಕರು ಕೈಜೋಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಕೋವಿಡ್ ರೋಗಿಗಳ ಅಂತ್ಯಸಂಸ್ಕಾರಕ್ಕೆ ಸ್ವಯಂಸೇವಾ ಸಂಸ್ಥೆಗಳ ನೆರವು
ಹುಬ್ಬಳ್ಳಿ-ಧಾರವಾಡದಲ್ಲಿ ಕೋವಿಡ್ ರೋಗಿಗಳ ಅಂತ್ಯಸಂಸ್ಕಾರಕ್ಕೆ ಸ್ವಯಂಸೇವಾ ಸಂಸ್ಥೆಗಳ ನೆರವು
Updated on

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಕೋವಿಡ್-19 ರ ಶವಸಂಸ್ಕಾರಕ್ಕಾಗಿ ಸಂತ್ರಸ್ತರಿಗೆ ಸಹಾಯ ಮಾಡಲು ಯುವಕರ ಗುಂಪು ಒಂದಾಗಿದೆ. ಸಾಂಕ್ರಾಮಿಕ ರೋಗ ಬಡ ಕುಟುಂಬಗಳಲ್ಲಿ ಭೀತಿಯನ್ನುಂಟು ಮಾಡಿದ್ದು ಇದನ್ನು ಹೋಗಲಾಡಿಸುವ ಸಲುವಾಗಿ ಯುವಕರು ಕೈಜೋಡಿಸಿದ್ದಾರೆ.

ಕೊರೋನಾವೈರಸ್ ಹರಡಬಹುದೆಂಬ ಭಯ, ಜನರು ಮುಂದೆ ಬಂದು ಕೊರೋನಾದಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡಲು ಹೆದರುವಂತೆ ಮಾಡಿದೆ. ಅಲ್ಲದೆ ಇದಕ್ಕಾಗಿ ಯಾರೊಬ್ಬರನ್ನು ಸಂಪರ್ಕಿಸಲು ಸಹ ಅವರಿಗೆ ಆಗುತ್ತಿಲ್ಲ. ಅದಕ್ಕಾಗಿ ಅವರು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆಗಳನ್ನು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಧಾರವಾಡದ ಎತಿಹಾದ್ ಫೌಡೇಶನ್ ತನ್ನದೇ ಆದ ಸಂಪನ್ಮೂಲಗಳನ್ನು ಬಳಸಿಕೊಂಡು ಕೋವಿಡ್ 19 ಮೊದಲ ಅಲೆಯ ಅವಧಿಯಲ್ಲಿ ಹಲವಾರು ಸಂತ್ರಸ್ತರ ಅಂತ್ಯಸಂಸ್ಕಾರ ಮಾಡಿತ್ತು.

ಎರಡು ಮೂರು ಆರು ಸದಸ್ಯರ ತಂಡಗಳು ಗುಂಡಿಗಳನ್ನು ತೋಡಲು ಅರ್ಥ್ ಮೂವರ್‌ಗಳನ್ನು ನೇಮಿಸಿಕೊಳ್ಳುತ್ತಿವೆ.ದೇಹಗಳನ್ನು ಸ್ಥಳಾಂತರಿಸಲು ಮತ್ತು ಹೂಳಲು ಸ್ವಯಂಸೇವಕರಿರುತ್ತಾರೆ. ಧಾರವಾಡದಲ್ಲಿನ ಪ್ರತಿಷ್ಠಾನವು ನಿರ್ದಿಷ್ಟ ಧರ್ಮದ ಆಚರಣೆಗಳ ಪ್ರಕಾರ ಎಲ್ಲಾ ಸಮುದಾಯಗಳ ಅಂತಿಮ ವಿಧಿಗಳಿಗೆ ನೆರವಾಗಿದೆ. ಈ ವರ್ಷ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಕೋವಿಡ್ ನಿಂದ ಮೃತಪಟ್ಟ ಎಲ್ಲರ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿದೆ.

ಎತಿಹಾದ್ ಫೌಡೇಶನ್ ಮತ್ತು ಲಜ್ನಾತುಲ್ ಉಲೆಮಾ ಫೌಂಡೇಶನ್ ಎಚ್‌ಡಿಎಂಸಿಯೊಂದಿಗೆ ಕೈಜೋಡಿಸಿದ್ದು ಕೋವಿಡ್ ಗೆ ಬಲಿಯಾದವರ ಅಂತ್ಯಕ್ರಿಯೆ ಮಾಡಲು ಸಹಾಯ ಮಾಡುತ್ತದೆ. ಕೋವಿಡ್19 ಸಾವುಗಳನ್ನು ನಿಭಾಯಿಸಲು ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಇತ್ತೀಚೆಗೆ ಪ್ರತಿಷ್ಠಾನದ 12 ಸದಸ್ಯರಿಗೆ ತರಬೇತಿ ನೀಡಿತು. ಎಚ್‌ಡಿಎಂಸಿಯೊಂದಿಗೆ ಸಮನ್ವಯ ಸಾಧಿಸಲು ಮತ್ತು ಧಾರವಾಡ ನಗರದಲ್ಲಿ ಅಂತ್ಯಕ್ರಿಯೆ ನಡೆಸಲು ಎರಡು ತಂಡಗಳನ್ನು ರಚಿಸಲಾಗಿದೆ.

ಪ್ರತಿಷ್ಠಾನವು 18 ಸದಸ್ಯರನ್ನು ಹೊಂದಿದೆ ಎಂದು ಮೊಹಮ್ಮದ್ ಜುಬೈರ್ ಗಿಡದಣ್ಣನವರ್ ಹೇಳಿದರು. ಶವಸಂಸ್ಕಾರಕ್ಕಾಗಿ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಈ ಬಾರಿ, ಎಚ್‌ಡಿಎಂಸಿ ಗುಂಡಿಗಳನ್ನು ಅಗೆಯಲು ತನ್ನ ಅರ್ಥ್ ಮೂವರ್ಸ್ ಗಳನ್ನು ನಿಯೋಜಿಸಲಿದೆ ಮತ್ತು ಸಮುದಾಯದ ಆಚರಣೆಯ ಪ್ರಕಾರ ಮೃತ ದೇಹಗಳನ್ನು ಅಂತ್ಯಕ್ರಿಯೆ ಮಾಡಲು ಪ್ರತಿಷ್ಠಾನದ ಸದಸ್ಯರು ಸಹಾಯ ಮಾಡುತ್ತಾರೆ. "ನಮ್ಮ ಯುವ ಸ್ವಯಂಸೇವಕರ ಸುರಕ್ಷತೆಗಾಗಿ, ಎಲ್ಲಾ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಅವರಿಗೆ ಲಸಿಕೆ ನೀಡಲಾಗುತ್ತಿದೆ. ಇದರ ಜೊತೆಗೆ, ಪ್ರತಿ ಸ್ವಯಂಸೇವಕರಿಗೆ ಪ್ರತಿಷ್ಠಾನವು ಜೀವ ವಿಮಾ ಪಾಲಿಸಿ ಸೌಲಭ್ಯ ಕಲ್ಪಿಸಿದೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com