ರೆಮಿಡಿಸ್ವಿಯರ್ ಸರಿಯಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ

ಒಂದುಕಡೆ ಕೊರೋನಾ ವೈರಸ್ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದ್ದರೆ ಅದಕ್ಕೆ ಅಗತ್ಯವಾಗಿರುವ ರೆಮಿಡಿಸ್ವಿಯರ್ ಇಂಜೆಕ್ಷನ್ ಕೊರತೆಯಾಗುತ್ತಿದೆ. ಅಲ್ಲದೇ ಕಾಳಸಂತೆಯಲ್ಲಿ ರೆಮಿಡಿಸ್ವಿಯರ್ ಮಾರಾಟವಾಗುತ್ತಿದ್ದು....
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಒಂದುಕಡೆ ಕೊರೋನಾ ವೈರಸ್ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದ್ದರೆ ಅದಕ್ಕೆ ಅಗತ್ಯವಾಗಿರುವ ರೆಮಿಡಿಸ್ವಿಯರ್ ಇಂಜೆಕ್ಷನ್ ಕೊರತೆಯಾಗುತ್ತಿದೆ. ಅಲ್ಲದೇ ಕಾಳಸಂತೆಯಲ್ಲಿ ರೆಮಿಡಿಸ್ವಿಯರ್ ಮಾರಾಟವಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಗಳವಾರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ, ರಾಜ್ಯದಲ್ಲಿ ರೆಮಿಡಿಸಿವಿರ್
ಬ್ಲಾಕ್ ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಇಂದು ಕೊರೋನಾ ಸೋಂಕು ವ್ಯಾಪಕವಾಗಿದೆ. ಇದು ಅತ್ಯಂತ ಕ್ಲಿಷ್ಟಕರವಾದ ಸಂದರ್ಭ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮ ಜೊತೆಗೆ ನಿಂತಿದೆ. ಆದರೆ ಕೆಲ ಅಧಿಕಾರಿಗಳು ರೆಮಿಡಿಸಿವಿರ್ ಡೋಸ್‌ಗಳನ್ನು ಅನ್ಯ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೇನೆ. ಇದರಲ್ಲಿ ಯಾರನ್ನು ಕಾಪಾಡುವ ಮಾತಿಲ್ಲ. ನಾನು ಇದನ್ನು ತನಿಖೆಗೆ ವಹಿಸಿದರೇ, ಸತ್ಯ ಹೊರ ಬರುತ್ತದೆ.ಯಾವುದೇ ಅಧಿಕಾರಿಗಳು ಇದರಲ್ಲಿ ಭಾಗಿಯಾದ್ರೆ ಪರಿಣಾಮ ಭೀಕರವಾಗಿರಲಿದೆ. ಇದನ್ನೇ ಎಚ್ಚರಿಕೆ ಎಂದು ಭಾವಿಸಬೇಕು. ಮುಂದೆ ಜನರ ಸೇವೆ ಬದ್ಧರಾಗಿರಬೇಕು ಎಂದು ಯಡಿಯೂರಪ್ಪ ಹೇಳಿದರು.

ಇಲ್ಲವಾದರೆ ತನಿಖೆ ಮಾಡಿಸಿ ಎಲ್ಲವನ್ನೂ ಬಯಲಿಗೆಳೆಯುತ್ತೇನೆ‌. ಯಾವುದೇ ಅಧಿಕಾರಿಗಳನ್ನು ಕಾಪಾಡುವುದಿಲ್ಲ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com