ಕೋವಿಡ್ ಲಸಿಕೆ ಕೊರತೆ: ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವ ಹಿರಿಯ ನಾಗರಿಕರು

ಮೇ 9 2021ರವರೆಗೆ ರಾಜ್ಯದಲ್ಲಿ ಸುಮಾರು 1.05 ಕೋಟಿ ಮಂದಿ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ, ಅದರಲ್ಲಿ 9.77 ಲಕ್ಷ ಹಿರಿಯ ನಾಗರಿಕರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೇ 9 2021ರವರೆಗೆ ರಾಜ್ಯದಲ್ಲಿ ಸುಮಾರು 1.05 ಕೋಟಿ ಮಂದಿ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ, ಅದರಲ್ಲಿ 9.77 ಲಕ್ಷ ಹಿರಿಯ ನಾಗರಿಕರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ.

35.90 ಲಕ್ಷ ಮಂದಿ ಮೊದಲ ಲಸಿಕೆ ಪಡೆದಿದ್ದಾರೆ, ಕೊರೋನಾ ಲಾಕ್ ಡೌನ್ ಬಿಗಿ ನಿಯಮಗಳ ನಡುವೆ ಹಲವು ಹಿರಿಯ ನಾಗರಿಕರು ತಮ್ಮ 2ನೇ ಡೋಸ್ ಲಸಿಕೆ ತೆಗೆದುಕೊಳ್ಳಲು ಮುಂದಾಗಿದ್ದು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಅಂತಿಮವಾಗಿ ಎಲ್ಲೂ ಸಿಗದೇ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೀಮಿತ ಸಂಖ್ಯೆಯ ಉಚಿತ ಲಸಿಕೆಗಳು ಲಭ್ಯವಿರುವುದರಿಂದ ಎರಡನೇ ಡೋಸ್‌ಗೆ 600 ರಿಂದ 850 ರೂಗಳನ್ನು ಪಾವತಿಸಲು ನಮಗೆ ತೊಂದರೆಯಿಲ್ಲ, ಪ್ರತಿದಿನ ಕೇವಲ 5-10 ಬಾಟಲುಗಳನ್ನು ಮಾತ್ರ ಸಿಗುತ್ತಿದೆ. ಹಿರಿಯ ನಾಗರಿಕರು ಲಸಿಕೆ ಪಡೆಯಲು ಡಜನ್ಗಟ್ಟಲೆ ಆಸ್ಪತ್ರೆಗಳು ಅಥವಾ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡಬೇಕಾಗಿತ್ತು ಎಂದು ದೂರಿದ್ದಾರೆ.

ಆದಾಗ್ಯೂ, ಅವರಲ್ಲಿ ಹಲವರು ತಮ್ಮ ಎರಡನೇ ಲಸಿಕೆಯನ್ನು ನಿಗದಿತ ಸಮಯದೊಳಗೆ ಪಡೆಯುವಲ್ಲಿ ಯಶಸ್ವಿಯಾದರು. ಬೆಂಗಳೂರಿನಲ್ಲಿ ಮತ್ತು ಸುತ್ತಮುತ್ತ 140 ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಉತ್ತರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚಿನವರೆಗೂ ಸುಮಾರು 100 ಜನರಿಗೆ ಪ್ರತಿದಿನ ಲಸಿಕೆ ನೀಡಲಾಗುತ್ತಿತ್ತು.

ಹತ್ತಿರದ ಸರ್ಕಾರಿ ಶಾಲೆಯ ಶಿಬಿರದಲ್ಲಿ ಇನ್ನೂ 100 ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಪೂರ್ಣಾ ಪ್ರಜ್ಞಾ ನಿವಾಸ ಕಲ್ಯಾಣ ಸಂಘದ ಕಾರ್ಯದರ್ಶಿ ಎಚ್.ನಿಲೇಶ್  ಹೇಳಿದ್ದಾರೆ. "ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಮೊದಲ ಡೋಸ್ ಪಡೆದಿರುವ ಹಿರಿಯ ನಾಗರಿಕರಿಗೆ ಎರಡನೇ ಡೋಸ್  ನೀಡಲು ಮೊದಲ ಆದ್ಯತೆ ನೀಡಲಾಗುವುದು, ನಂತರ 45 ರಿಂದ 59 ವರ್ಷದವರಿಗೆ ನೀಡಲಾಗುವುದು. ಮೊದಲ ಡೋಸ್ ಅನ್ನು ಮಾರ್ಚ್ 17 ರಂದು ಪಡೆದೆ, ಏಪ್ರಿಲ್ 27 ರಂದು 2ನೇ ಡೋಸ್ ಪಡೆದಿದ್ದೇನೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಸುಧಾರಿಸಲಿದೆ, ಆಗ ವಿಶೇಷ ಕ್ಯಾಂಪ್ ಗಳ ಮೂಲಕ ಬಡಾವಣೆಯ ನಿವಾಸಿಗಳಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.

ಎರಡೂ ಡೋಸ್‌ಗಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಡೆಯುವುದು ತುಂಬಾ ಸುಲಭ ಎಂದು ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ನಿವಾಸಿ ವಿಶ್ವನಾಥ್ ಹೇಳಿದ್ದಾರೆ.  80-100 ಜನರಿಗೆ ಪ್ರತಿದಿನ ಲಸಿಕೆ ನೀಡಲಾಗುತ್ತದೆ ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಹ ಪ್ರಯತ್ನಿಸಲಿಲ್ಲ ಎಂದು ಹೇಳಿದ್ದಾರೆ.

ಎರಡನೇ ಡೋಸ್ ಲಸಿಕೆ ಪಡೆಲು ಖಾಸಗಿ ಆಸ್ಪತ್ರೆಯಲ್ಲಿ 650 ರಿಂದ 800 ರು ನೀಡಲು ತಮಗೆ ಯಾವುದೇ ತೊಂದರೆಯಿಲ್ಲ ಎಂದು ಹಲವು ಹಿರಿಯ ನಾಗರಿಕರು ತಿಳಿಸಿದ್ದಾರೆ. ಆದರೆ ಕೆಲವರಿಗೆ ಇಷ್ಟು ಹಣವನ್ನು ನೀಡಲು ಸಾಧ್ಯವಿರುವುದಿಲ್ಲ, ಅಂತವರಿಗೆ ಅನುಕೂಲ ಇರುವವರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಹಾಕಿಸಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕೆಯನ್ನು ಬಡವರಿಗೆ ನೀಡಬೇಕು ಎಂದು ಹೇಳಿದ್ದಾರೆ.

ಮಾರ್ಚ್ 13 ರಂದು ಪದ್ಮನಾಭ ನಗರದ ಯೋಗಾನಂದ ಆಸ್ಪತ್ರೆಯಲ್ಲಿ ಮೊದಲ ಕೋವಿಶೀಲ್ಡ್ ಡೋಸ್ ಅನ್ನು ಸುಲಭವಾಗಿ ಪಡೆದ ಐದು ಹಿರಿಯ ನಾಗರಿಕರ ಕುಟುಂಬವು ಎರಡನೇ ಡೋಸ್ ಗಾಗಿ ಕಾಯುತ್ತಿದೆ. ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರತಿದಿನ 5-6 ಬಾಟಲ್ ಲಸಿಕೆ ಕಳುಹಿಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com