ರಾಜ್ಯದ 1.5 ಕೋಟಿ ಮನೆಗಳು ಇನ್ನೂ ಗ್ರಾಮ ನಕ್ಷೆಯ ಹೊರ ವ್ಯಾಪ್ತಿಯಲ್ಲಿ!

ಗ್ರಾಮ, ಪಟ್ಟಣಗಳು ತಮ್ಮ ಗಡಿಯನ್ನು ವಿಸ್ತರಿಸಿಕೊಂಡು ಬೆಳೆಯುತ್ತಿದೆಯಾದರೂ ರಾಜ್ಯ ಸರ್ಕಾರ ಮಾತ್ರ ಇನ್ನೂ ಹಳೆಯ ನಕ್ಷೆಗಳ ಮೇಲೆ ಅವಲಂಬಿತವಾಗಿದೆ, ಅನೇಕ ಗ್ರಾಮಗಳ ನಕ್ಷೆ ಸ್ವಾತಂತ್ರ್ಯ ಬಂದ ಸಮಯದ್ದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಗ್ರಾಮ, ಪಟ್ಟಣಗಳು ತಮ್ಮ ಗಡಿಯನ್ನು ವಿಸ್ತರಿಸಿಕೊಂಡು ಬೆಳೆಯುತ್ತಿದೆಯಾದರೂ ರಾಜ್ಯ ಸರ್ಕಾರ ಮಾತ್ರ ಇನ್ನೂ ಹಳೆಯ ನಕ್ಷೆಗಳ ಮೇಲೆ ಅವಲಂಬಿತವಾಗಿದೆ, ಅನೇಕ ಗ್ರಾಮಗಳ ನಕ್ಷೆ ಸ್ವಾತಂತ್ರ್ಯ ಬಂದ ಸಮಯದ್ದಾಗಿದೆ. ಇದರಿಂದ ಸುಮಾರು 1.2 ಕೋಟಿ ಆಸ್ತಿಗಳು ಕಾನೂನುಬಾಹಿರವಾಗಿ ಗ್ರಾಮದ ಗಡಿಯಾಚೆಗೆ ಇದೆ. ಅಲ್ಲದೆ ಆದರೆ ಸುಮಾರು 1.5 ಕೋಟಿ ಮನೆಗಳು ಮತ್ತು ವಸತಿ ಸಮುಚ್ಚಯಗಳು "ಕಾನೂನುಬದ್ಧ ಗಡಿ" ಗಳ ಹೊರಗೆ ಇದೆ.

ಇಲ್ಲಿನ ನಿವಾಸಿಗಳು ಗ್ರಾಮದ ನೀರು ಮತ್ತು ವಿದ್ಯುತ್‌ನಂತಹ ಎಲ್ಲಾ ಸೌಲಭ್ಯಗಳನ್ನು ಬಳಸುವುದರಿಂದ, ಈ ಅಪಾರ ಸಂಖ್ಯೆಯ ಆಸ್ತಿಗಳನ್ನು ಕಾನೂನುಬದ್ಧ ನಕ್ಷೆಗಳಿಗೆ ತರಲು ಮತ್ತು ಅವರಿಗೆ ಕಾನೂನು ಮಾನ್ಯತೆ ನೀಡುವ ಜವಾಬ್ದಾರಿ ಆಡಳಿತದ ಮೇಲಿದೆ.ಈ ಸಮಸ್ಯೆಗಳನ್ನು ಪರಿಹರಿಸಲು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಸ್ವಾಮಿತ್ವ ಯೋಜನೆಯನ್ನು ರೂಪಿಸಲಾಗಿದೆ.

ಈ ಯೋಜನೆಯನ್ನು ಜಾರಿಗೆ ತರಲು ಪಂಚಾಯಿತಿಗಳು ಹಣ ಮತ್ತು ಬೆಂಬಲವನ್ನು ಪಡೆಯುತ್ತಾರೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದರೆ, ತಜ್ಞರು ಈ ಸಮಸ್ಯೆಯ ಪ್ರಾಯೋಗಿಕ ಸವಾಲುಗಳನ್ನು ಪರಿಹರಿಸಿಲ್ಲ ಎಂದು ಹೇಳುತ್ತಾರೆ. ಈ ಹೊಸ ಆಸ್ತಿಗಳಲ್ಲಿ  ಹೆಚ್ಚಿನವುಗಳಿಗೆ ತಾತ್ಕಾಲಿಕ ದಾಖಲೆ ಪತ್ರಗಳು ಮತ್ತು ಗುರುತುಗಳನ್ನು ನೀಡಲಾಗುತ್ತದೆ ಮತ್ತು ‘ಫಾರ್ಮ್ 10’ ನಂತಹ ದಾಖಲೆಗಳಲ್ಲಿ ಅವು ಉಳಿದಿದೆ. ಇದೀಗ ಅವುಗಳನ್ನು ಕ್ರಮಬದ್ಧಗೊಳಿಸಬೇಕಾಗಿದೆ ಎಂದು ಸಮೀಕ್ಷಾ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

"ಪ್ರತಿ 15-20 ವರ್ಷಗಳಿಗೊಮ್ಮೆ ಗ್ರಾಮಗಳಲ್ಲಿನ ಮನೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ, ಏಕೆಂದರೆ ಮಕ್ಕಳು ಹೊರಹೋಗಿ ಸ್ವಂತ ಮನೆಗಳನ್ನು ನಿರ್ಮಿಸುತ್ತಾರೆ. ಈ ವಿದ್ಯಮಾನಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಂಡುಬರುತ್ತವೆ. ಆದರೂ, ಕಳೆದ 70 ವರ್ಷಗಳಲ್ಲಿ, ಹೆಚ್ಚಿನ ಪಟ್ಟಣ ಮತ್ತು ಗ್ರಾಮ ನಕ್ಷೆಗಳು ಈ ವಿಸ್ತರಣೆಗಳಲ್ಲಿ 'ಅಕ್ರಮ' ಮನೆಗಳನ್ನು ನ್ಯಾಯಸಮ್ಮತಗೊಳಿಸಲು ಪುನರ್ರಚಿಸಲಾಗಿಲ್ಲ. ತಾಂತ್ರಿಕವಾಗಿ, ಅವರು ಪಟ್ಟಣ ಅಥವಾ ಗ್ರಾಮದ ಹೊರಗೆ ಬರುತ್ತಾರೆ" ಎಂದು ಸಮೀಕ್ಷಾ ವಿಭಾಗದ ತಜ್ಞರು ಹೇಳುತ್ತಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಈ ವಿಷಯವನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿತ್ತು. ಆದರೆ ಕೇಂದ್ರವು ಇದನ್ನು ಸಮಗ್ರವಾಗಿ ಪರಿಹರಿಸಲು ವಿಫಲವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. "ಕೇಂದ್ರ ಸರ್ಕಾರವು ನಕ್ಷೆಯ ಗಡಿಯೊಳಗಿನವರಿಗೆ ಕಾನೂನು ಪತ್ರ  ನೀಡುವುದಾಗಿ ಮಾತ್ರ ಹೇಳಿದೆ, ಆದರೆ ಹೊಸ ಮನೆಗಳ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿದೆ. ರಾಜ್ಯ ಸರ್ಕಾರಗಳು ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಕೇಂದ್ರ ಹೇಳಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಗ್ರಾಮದ ಗಡಿಗಳನ್ನು ವಿಸ್ತರಿಸುವ ಮೊದಲು ಅನೇಕ ಕಾನೂನುಗಳನ್ನು ಗಮನಿಸಬೇಕಾಗಿದೆ'

ಸರ್ವೆ ವಿಭಾಗದ ಹೆಚ್ಚುವರಿ ನಿರ್ದೇಶಕ ಸಿ.ಎನ್.ಶ್ರೀಧರ್ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. "ನಾವು 5,000 ಕ್ಕಿಂತ ಕಡಿಮೆ ಮನೆಗಳನ್ನು ಹೊಂದಿರುವ ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಪ್ರಸ್ತುತ ಮನೆಗಳ ಸಂಖ್ಯೆಯೊಂದಿಗೆ ನಕ್ಷೆಗಳನ್ನು ಸೇರಿಸಿಕೊಳ್ಳುತ್ತೇವೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪ ಸಮಿತಿಯು ಇದನ್ನು ಪರಿಶೀಲಿಸುತ್ತಿದೆ" ಎಂದು ಅವರು ಹೇಳಿದರು. ಆದರೆ ಗಮನಹರಿಸಬೇಕಾದ ಕಾನೂನುಗಳ ಅಂಶಗಳಿರುವುದರಿಂದ ದ ಅದು ಸುಲಭವಲ್ಲ ಎಂದು ಅವರು ಒಪ್ಪಿಕೊಂಡರು.

ಮಾಜಿ ಆರ್‌ಡಿಪಿಆರ್ ಸಚಿವರಾಗಿದ್ದ ಕೃಷ್ಣ ಬೈರೆಗೌಡ ಮಾತನಾಡಿ, "ಪಂಚಾಯತ್ ಅಧಿಕಾರಿಗಳಿಂದ ಕಾನೂನುಬದ್ಧವಾಗಿ ಗುರುತಿಸಲಾಗದ ಗಡಿಗಳನ್ನು ಮೀರಿ ಗ್ರಾಮಗಳು ಬೆಳೆದಿವೆ. ಈಗ ಅವು ಗ್ರೇ ಝೋನ್ ನಲ್ಲಿದೆ.ಗಡಿಯನ್ನು ವಿಸ್ತರಿಸಬೇಕಾಗಿದೆ, ಆದರೆ ಇದು ಪ್ರಾಯೋಗಿಕ ಸವಾಲುಗಳಿಗೆ ಕಾರಣವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ" ಎಂದಿದ್ದಾರೆ.

ಆರ್‌ಡಿಪಿಆರ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, "ನಾವು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಅಕ್ರಮ ಅತಿಕ್ರಮಣಗಳಿದ್ದಲ್ಲಿ ಅವುಗಳನ್ನೂ ಎದುರಿಸಲು ಸಿದ್ದ.. ಒಂದೇ ಸ್ಥಳದಲ್ಲಿ ಒಂದು ಗ್ರಾಮದ ಕಲ್ಯಾಣಿಯನ್ನು ಅತಿಕ್ರಮಣ ಮಾಡಲಾಗಿದೆ ಮತ್ತು ಜನರು ಮನೆಗಳನ್ನು ನಿರ್ಮಿಸಿದ್ದಾರೆ. ಇವೆಲ್ಲವನ್ನೂ ನಾವು ಗುರುತಿಸಿ ತೆರವುಗೊಳಿಸುತ್ತೇವೆ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com