ಆತ್ಮವಿಶ್ವಾಸ ಕಳೆದುಕೊಂಡು ಸಾಯುವವರಿಗೆ ಪಂಪ್ ಹೊಡೆದು ಧೈರ್ಯ ತುಂಬಲು ಸಾಧ್ಯವೇ: ಕತ್ತಿ ಬೇಜವಾಬ್ದಾರಿ ಹೇಳಿಕೆ
ಬಾಗಲಕೋಟೆ: ಧೈರ್ಯ ಕಳೆದುಕೊಂಡು ಸಾಯುವವರಿಗೆ ಏನು ಮಾಡೋಕಾಗಲ್ಲ. ಪಂಪ್ ಹೊಡೆದು ಧೈರ್ಯ ತುಂಬಬೇಕಾ?. ಧೈರ್ಯದಿಂದ ಎಲ್ಲರೂ ಚಿಕಿತ್ಸೆ ಪಡೆದು ಬದುಕುವಂತಾಗಬೇಕು ಎಂದು ಸಚಿವ ಉಮೇಶ್ ಕತ್ತಿ ಬೇಜವಾಬ್ದಾರಿಯಾಗಿ ಹೇಳಿದ್ದಾರೆ.
ಬೀಳಗಿಯಲ್ಲಿ ಕೋವಿಡ್ ಪರಿಶೀಲನಾ ಸಭೆಯ ನಂತರ ಮಾತನಾಡಿದ ಸಚಿವ ಉಮೇಶ್ ಕತ್ತಿ, ಸಾಯೋರು ಸಾಯುವವರೇ, ಬೇರೆ ಬೇರೆ ಕಾರಣಗಳಿಗೂ ಸಾಯುತ್ತಾರೆ. ರೆಮ್ಡಿಸಿವರ್ 6 ಬಾರಿ ಕೊಟ್ಟವರು ಸಾಯುತ್ತಾರೆ, ರೆಮ್ಡಿಸಿವರ್ ರಾಮಬಾಣವಲ್ಲ ಎಂದು ಹೇಳಿದ್ದಾರೆ.
ಧೈರ್ಯ ಕಳೆದುಕೊಂಡವರಿಗೆ ಏನು ಮಾಡೋಕಾಗಲ್ಲ. ಧೈರ್ಯ ತುಂಬೋದು ಪಂಪ್ ಹಾಕಿ ಮಾಡೋಕಾಗಲ್ಲ. ಕೊರೋನಾದಿಂದ ಧೈರ್ಯ ಕಳೆದುಕೊಂಡು ಸಾಯುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ. ಮೆಡಿಸಿನ್ ಕೊಟ್ಟರೂ ಧೈರ್ಯ ಕಳೆದುಕೊಂಡು ಸಾಯೋರಿದ್ದಾರೆ. ಅದಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ. ಆದರ ಜನ ಸಾಯಬಾರದೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ.
ಸೋಂಕಿತ ಕೆಲವರಿಗೆ ಹಾರ್ಟ್ ಪ್ರಾಬ್ಲಮ್, ಶುಗರ್ ಇರುತ್ತದೆ. ಅಂತವರು ಸತ್ತರೆ ಏನು ಮಾಡೊಕಾಗುತ್ತೆ. ಧೈರ್ಯ ಕಳೆದುಕೊಂಡವರು ಸಾಯುತ್ತಿದ್ದಾರೆ. ಮಾಧ್ಯಮದಲ್ಲಿ ಹೆಣ, ಆಂಬುಲೆನ್ಸ್, ಅಂತ್ಯ ಸಂಸ್ಕಾರ ತೋರಿಸಿ ಭಯ ಹುಟ್ಟಿಸಲಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ