ಮೈಸೂರು, ಕೋಲಾರದಲ್ಲಿ ಲಸಿಕೆ ತೆಗೆದುಕೊಳ್ಳಲು ಬೆಂಗಳೂರಿಗರಿಂದ ಸ್ಲಾಟ್ ಬ್ಲಾಕ್!

ಈಗ ಬೆಂಗಳೂರಿಗರು ಮೈಸೂರು ಮತ್ತು ಕೋಲಾರದಲ್ಲಿ ಲಸಿಕೆ ತೆಗೆದುಕೊಳ್ಳಲು ಸ್ಲಾಟ್ ಬ್ಲಾಕ್ ಮಾಡುತ್ತಿರುವುದು ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ. 18 ರಿಂದ 44 ವರ್ಷದವರೆಗೆ ಉಚಿತ ಲಸಿಕೆ ಕಾರ್ಯಕ್ರಮಕ್ಕಾಗಿ ಮೈಸೂರಿನ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ ಮೇ 17ರ ವರೆಗೆ ಲಸಿಕೆ ಸ್ಲಾಟ್ ಬುಕ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು, ಕೋಲಾರ: ಹಾಸಿಗೆ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೋವಿಡ್ ರೋಗಿಗಳು ಮೈಸೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ತೆರಳಿ ದಾಖಲಾಗಿದ್ದರು. 

ಈಗ ಬೆಂಗಳೂರಿಗರು ಮೈಸೂರು ಮತ್ತು ಕೋಲಾರದಲ್ಲಿ ಲಸಿಕೆ ತೆಗೆದುಕೊಳ್ಳಲು ಸ್ಲಾಟ್ ಬ್ಲಾಕ್ ಮಾಡುತ್ತಿರುವುದು ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ. 18 ರಿಂದ 44 ವರ್ಷದವರೆಗೆ ಉಚಿತ ಲಸಿಕೆ ಕಾರ್ಯಕ್ರಮಕ್ಕಾಗಿ ಮೈಸೂರಿನ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ ಮೇ 17ರ ವರೆಗೆ ಲಸಿಕೆ ಸ್ಲಾಟ್ ಬುಕ್ ಆಗಿದೆ.

ಬೆಂಗಳೂರಿನಿಂದ ಅನೇಕರು ಮೈಸೂರಿನ ಆಸ್ಪತ್ರೆಗಳನ್ನು ಆರಿಸಿಕೊಂಡರು ಮತ್ತು ಇಲ್ಲಿ ಸ್ಲಾಟ್‌ಗಳನ್ನು ಕಾಯ್ದಿರಿಸುವಲ್ಲಿ ಯಶಸ್ವಿಯಾಗಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ನಾನು ಸೋಮವಾರ ಲಸಿಕೆ ತೆಗೆದುಕೊಳ್ಳಲು ಹೋದಾಗ ಬೆಂಗಳೂರಿನ ಹಲವರು  ಲಸಿಕೆ ತೆಗೆದುಕೊಳ್ಳಲು ಬಂದಿದ್ದರು. ನಾನು ಇದನ್ನು ವಿರೋಧಿಸುವುದಿಲ್ಲ, ಆದರೆ ಸ್ಥಳೀಯರ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ, ಅಲ್ಲದೆ ಅಂತರ ಜಿಲ್ಲಾ ಪ್ರಯಾಣ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಜೊತೆಗೆ ಹಲವರನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ಮೈಸೂರು ನಿವಾಸಿ ಭರತ್ ಹೇಳಿದ್ದಾರೆ.

ಕೋಲಾರದಲ್ಲಿಯೂ ಕೂಡ ಇದೇ ಪ್ರಸಂಗ ನಡೆದಿದೆ. ಬೆಂಗಳೂರಿನಿಂದ ಬಂದವನ್ನು ಸರತಿ ಸಾಲಿನಲ್ಲಿ ಬಂದು ಲಸಿಕೆ ತೆಗೆದುಕೊಳ್ಳಲು ಸ್ಥಳೀಯರು ಹೇಳಿದ್ದಾರೆ. ಆದರೆ ತಾವು ಈಗಾಗಲೇ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದು, ಬೆಂಗಳೂರಿಗೆ ಶೀಘ್ರವೇ ವಾಪಾಸಾಗಬೇಕಾಗಿರುವುದಾಗಿ ತಿಳಿಸಿದ್ದಾರೆ.

ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿನ ವಾಗ್ವಾದಗಳ ಬಗ್ಗೆ ತಿಳಿದ ನಂತರ ಜಿಲ್ಲಾಧಿಕಾರಿ ಸೆಲ್ವಮಣಿ, ಕೋಲಾರದ ಸ್ಲಾಟ್‌ಗಳನ್ನು ನಾಲ್ಕು ದಿನಗಳ ಕಾಲ ಮುಚ್ಚುವಂತೆ ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

ಕೋಲಾರ, ಕೆಜಿಎಫ್, ಮಾಲೂರು, ಮುಳಬಾಗಿಲು, ಬಂಗಾರಪೇಟೆ ಮತ್ತು ಶ್ರೀನಿವಾಸ ಪುರಗಳಲ್ಲಿ ಮಂಗಳವಾರ ಸುಮಾರು 700 ಮಂದಿ ಬೆಂಗಳೂರಿಗರು ಲಸಿಕೆ ತೆಗೆದುಕೊಂಡಿದ್ದಾರೆ. 

ಬೆಂಗಳೂರು ನೋಂದಾಯಿತ ವಾಹನಗಳು ಎಲ್ಲಾ ಆಸ್ಪತ್ರೆಗಳ ಮುಂದೆ ನಿಂತಿದ್ದವು, ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಪಟ್ಟಣಗಳ ಲಸಿಕ ಕೇಂದ್ರಗಳಲ್ಲಿ ಬೆಂಗಳೂರಿಗರು  ಲಸಿಕೆ ಪಡೆಯಲು ಬರುತ್ತಿದ್ದಾರೆ. ಈ ವಿಷಯವನ್ನು ಆರೋಗ್ಯ ಸಚಿವ ಸುಧಾಕರ್ ಅವರಿಗೆ ಸೂಚಿಸಲಾಗಿದೆ.

ಲಸಿಕೆ ಪಡೆಯಲು ಸುಮಾರು 200 ಮಂದಿ ಬೆಂಗಳೂರಿನಿಂದ ದಾವಣಗೆರೆ ಮತ್ತು ರಾಮನಗರಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ, ಈ ಸಂಬಂಧ ಸೋಷಿಯಲ್ ಮೀಡಿಯಾಗಳಲ್ಲಿ ಅಸಮಾಧಾನ ವ್ಯಕ್ತ ವಾಗಿದೆ.

ಲಸಿಕೆ ತೆಗೆದುಕೊಳ್ಳುವ ಜನರ ತುರ್ತು ಮತ್ತು ಕಾಳಜಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವ ಮೂಲಕ ಅವರು ವೈರಸ್ ಹರಡಲು ಅವಕಾಶ ನೀಡುತ್ತಿದ್ದಾರೆ. ಇದರಿಂದ ದೂರವಿರಲು ನಾವು ಅವರನ್ನು ವಿನಂತಿಸುತ್ತೇವೆ ಎಂದು ಮೈಸೂರು ಮೀಮಿಸ್ ಅಡ್ಮಿನ್ ರವಿ ಕೀರ್ತಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com