ರಾಜ್ಯದ 29 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತ ಹೆಚ್ಚು: ಸರ್ಕಾರ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಶೇಕಡಾ 10 ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವಿಟಿ ಪ್ರಮಾಣ ಹೊಂದಿರುವ ಜಿಲ್ಲೆಗಳು ಇನ್ನೂ ಆರರಿಂದ ಎಂಟು ವಾರಗಳವರೆಗೆ ಲಾಕ್ ಡೌನ್ ಆಗಿರಬೇಕು ಎಂದು ಎಚ್ಚರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಶೇಕಡಾ 10 ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವಿಟಿ ಪ್ರಮಾಣ ಹೊಂದಿರುವ ಜಿಲ್ಲೆಗಳು ಇನ್ನೂ ಆರರಿಂದ ಎಂಟು ವಾರಗಳವರೆಗೆ ಲಾಕ್ ಡೌನ್ ಆಗಿರಬೇಕು ಎಂದು ಎಚ್ಚರಿಸಿದ್ದಾರೆ. ಕರ್ನಾಟಕದ 31 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಶೇಕಡಾ 10 ಕ್ಕಿಂತ ಹೆಚ್ಚಾಗಿದೆ.

ಆಘಾತಕಾರಿ ಸಂಗತಿಯೆಂದರೆ, 25 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಇಲ್ಲದೆ ಶೇಕಡಾ 20 ರಷ್ಟು ಪಾಸಿಟಿವ್ ರೇಟ್ ಇದೆ. ಅಲ್ಲದೆ ಕೋವಿಡ್  ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆ ಶೇ. 46.6 ರಷ್ಟು ಪಾಸಿಟಿವ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿದೆ, ಇದು ರಾಷ್ಟ್ರೀಯ ಸರಾಸರಿಯಲ್ಲಿ ಶೇ. 21 ರಷ್ಟಿದೆ. ಇದರ ನಂತರ ಬಳ್ಳಾರಿ(45.2), , ಹಾಸನ (43.2), ಮೈಸೂರು (42.2), ಶಿವಮೊಗ್ಗ (39.5), ತುಮಕೂರು (38.1), ಮತ್ತು ಬೆಂಗಳೂರು ನಗರ (34.7)  ಜಿಲ್ಲೆಗಳಿದೆ. ಕರ್ನಾಟಕದ ಹದಿನೆಂಟು ಜಿಲ್ಲೆಗಳು ಶೇಕಡಾ 30 ಕ್ಕಿಂತ ಹೆಚ್ಚಿನ ಪಾಸಿಟಿವ್ ರೇಟ್  ಹೊಂದಿವೆ, ಎಂಟು ಜಿಲ್ಲೆಗಳು ಶೇಕಡಾ 20 ಕ್ಕಿಂತ ಹೆಚ್ಚು ಇದ್ದರೆ ಮೂರು ಜಿಲ್ಲೆಗಳು ಶೇಕಡಾ 10 ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿದೆ.

ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ ಆರ್ ಬಾಬು ಹೇಳಿದಂತೆ “ಜಿಲ್ಲೆಗಳಲ್ಲಿನ ಸೋಂಕಿನ ಪ್ರಮಾಣವನ್ನು ಪರೀಕ್ಷೆಯ ಹೆಚ್ಚಳ ಮತ್ತು ಲಾಕ್‌ಡೌನ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದರೊಂದಿಗೆ ಮಾತ್ರ ನಿಯಂತ್ರಿಸಬಹುದು. "ಇಲ್ಲದಿದ್ದರೆ, ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಮತ್ತು ಮರಣ ಪ್ರಮಾಣವೂ ತೀವ್ರವಾಗಿ ಹೆಚ್ಚಾಗಬಹುದು."

ಪರಿಸ್ಥಿತಿಯನ್ನು ಗಮನಿಸಿದರೆ, ಉತ್ತರ ಕನ್ನಡ, ಚಾಮರಾಜನಗರ, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ  ಮುಂತಾದ ಕೆಲವು ಜಿಲ್ಲೆಗಳು ಮದುವೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸುವುದರೊಂದಿಗೆ ಮಂಗಳವಾರದಿಂದ  ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಗೆ ತಂದಿವೆ. ಆದಾಗ್ಯೂ, ಅನೇಕ ಹಳ್ಳಿಗಳಲ್ಲಿ, ವಿಶೇಷವಾಗಿ ತುಮಕೂರು ಜಿಲ್ಲೆಯಲ್ಲಿ 38.1 ರಷ್ಟು ಪಾಸಿಟಿವ್ ರೇಟ್ ಕಂಡು ಬಂದಿದೆ. ಆದರೂ ಅಲ್ಲಿ  ಸ್ಥಳೀಯ ದೇವಾಲಯಗಳಲ್ಲಿ ವಿವಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಬೆಳಿಗ್ಗೆ ಮಾರುಕಟ್ಟೆಗಳು ತೆರೆದಿರುತ್ತವೆ. ಬೆಳಗಾವಿ ಜಿಲ್ಲೆಯ ಕೆಲವು ಸ್ಥಳಗಳಲ್ಲಿ, ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಳಗಿನ ಸಮಯದಲ್ಲಿ ಜನಸಂದಣಿ ಇರುತ್ತದೆ.

ಈ ಜಿಲ್ಲೆಗಳಲ್ಲಿ ಹೆಚ್ಚಿನವು ಆಮ್ಲಜನಕ ಹಾಗೂ ಐಸಿಯು ಬೆಡ್  ಕೊರತೆಯನ್ನು ಎದುರಿಸುತ್ತಿದೆ. ಅಲ್ಲದೆ ಹೋಂ ಐಸೋಲೇಷನ್ ರೋಗಿಗಳ ಬಗ್ಗೆ ಸರಿಯಾದ ಮೇಲ್ವಿಚಾರಣೆ ಇಲ್ಲವಾಗಿದೆ. ವ್ಯಾಕ್ಸಿನೇಷನ್ಗಾಗಿ ಜನರು ಆಸ್ಪತ್ರೆಗಳಿಗೆ ಸೇರುವುದು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. “ಬೆಳಗಾವಿಯಲ್ಲಿ ಆಮ್ಲಜನಕ ಸಹಿತ ಬೆಡ್ ಗಳ ತೀವ್ರ ಕೊರತೆ ಇದೆ. ಹಾಸನದಲ್ಲಿ ಕೋವಿಡ್ ರೋಗಿಗಳಿಗಾಗಿ ಗೊತ್ತುಪಡಿಸಿದ 400 ಆಮ್ಲಜನಕ ಸಹಿತ ಬೆಡ್ ಗಳು ಭರ್ತಿಯಾಗಿದೆ. ತುಮಕೂರಿನಲ್ಲಿ, ಸೀಮಿತ ಸಂಖ್ಯೆಯ ಐಸಿಯುಗಳಿವೆ ಮತ್ತು ಜಿಲ್ಲಾಡಳಿತ  ಗೊತ್ತುಪಡಿಸಿದ ಆಸ್ಪತ್ರೆಯು ಐಸಿಯುಗಳನ್ನು ಹೆಚ್ಚಿಸಿಲ್ಲ. ಸಿಟಿ ಸ್ಕ್ಯಾನ್  ಯಂತ್ರಗಳು ಕ್ರಮಬದ್ಧವಾಗಿಲ್ಲ. ಪರಿಸ್ಥಿತಿಯನ್ನು ನಿರ್ವಹಿಸುವ ವಿಷಯದಲ್ಲಿ ಇಂತಹ ಸಮಸ್ಯೆಗಳು ದೊಡ್ಡ ಅಡಚಣೆಯನ್ನು ಉಂಟುಮಾಡುತ್ತವೆ. ” ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com