ಅರಬ್ಬೀ ಸಮುದ್ರದಲ್ಲಿ ಟೌಕ್ಟೆ ಚಂಡಮಾರುತ ಸಾಧ್ಯತೆ: ಕರಾವಳಿ ಮೀನುಗಾರರಿಗೆ ಮುನ್ನೆಚ್ಚರಿಕೆ

ಅರಬ್ಬೀ ಸಮುದ್ರದಲ್ಲಿ ಟೌಕ್ಟೆ ಚಂಡಮಾರುತ ಗುರುವಾರ(ಮೇ 13)ದಂದು ಏಳುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ಈಗಾಗಲೇ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ಹೋಗಿರುವವರು ದಡ ಸೇರುವಂತೆ ಕರಾವಳಿ ಭದ್ರತಾ ಪಡೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರಾವಳಿ ಭದ್ರತಾ ಪೊಲೀಸರು ಮೀನುಗಾರರಿಗೆ ಎಚ್ಚರಿಕೆ ಸಂದೇಶ ನೀಡುತ್ತಿರುವುದು
ಕರಾವಳಿ ಭದ್ರತಾ ಪೊಲೀಸರು ಮೀನುಗಾರರಿಗೆ ಎಚ್ಚರಿಕೆ ಸಂದೇಶ ನೀಡುತ್ತಿರುವುದು

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಟೌಕ್ಟೆ ಚಂಡಮಾರುತ ಗುರುವಾರ(ಮೇ 13)ದಂದು ಏಳುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ಈಗಾಗಲೇ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ಹೋಗಿರುವವರು ದಡ ಸೇರುವಂತೆ ಕರಾವಳಿ ಭದ್ರತಾ ಪಡೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಅರಬ್ಬೀ ಸಮುದ್ರ ಮೂಲಕ ಟೌಕ್ಟೆ ಚಂಡಮಾರುತ ಇಂದು ಎದ್ದು ಮೇ 16ರ ಹೊತ್ತಿಗೆ ತೀವ್ರವಾಗುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಮುನ್ನೆಚ್ಚರಿಕೆ ವಹಿಸಬೇಕೆಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. 

ಅರಬ್ಬಿ ಸಮುದ್ರದ ಆಗ್ನೇಯ ಭಾಗ, ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶ, ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದಲ್ಲಿ ಇಂದು ಪ್ರತಿ ತಾಸಿಗೆ 40ರಿಂದ 50 ಕಿಲೋ ಮೀಟರ್ ವೇಗದ ಬಿರುಗಾಳಿ ಬೀಸಲಿದ್ದು, ಅದು 60 ಕಿಲೋಮೀಟರ್ ವೇಗದ ತೀವ್ರತೆ ಪಡೆದು ಕೇರಳ ಕರಾವಳಿಯತ್ತ ಮುನ್ನುಗ್ಗಲಿದೆ. ಹಾಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com