ಜಿಲ್ಲಾಧಿಕಾರಿಗಳ ಜತೆ ಪಿಎಂ ಸಭೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಲಸಿಕೆ, ಆಮ್ಲಜನಕ ನೀಡಲು ಮನವಿ

ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಸಂವಾದದಲ್ಲಿ  ಮಂಗಳವಾರ ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಮುಖ್ಯಸ್ಥರು ಭಾಗವಹಿಸಿದ್ದರು.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಸಂವಾದದಲ್ಲಿ  ಮಂಗಳವಾರ ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಮುಖ್ಯಸ್ಥರು ಭಾಗವಹಿಸಿದ್ದರು. ಕೋವಿಡ್ 19 ನಿರ್ವಹಣೆಯಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿರುವ ಸ್ಥಳೀಯ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವಂತೆ ಪ್ರಧಾನಿ ಜಿಲ್ಲಾ ಆಯುಕ್ತರಿಗೆ ಕರೆ ನೀಡಿದರೆ, ಕರ್ನಾಟಕದ ಪರ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಗಳಲ್ಲಿ ನಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಎಂದು ತೋರಿಸಿದ್ದಾರೆ.

"ಕೋವಿಡ್ 19 ಪರಿಹಾರಕ್ಕಾಗಿ ಸಹಾಯ ಮಾಡಿದ ಸ್ಥಳೀಯ ಅನ್ವೇಷಣೆಯನ್ನು ಪ್ರಧಾನಿ ಕೇಳಿದರು. ನಾವು ಹೆಚ್ಚುವರಿ ಆಮ್ಲಜನಕ ಮತ್ತು ಲಸಿಕೆ ಸರಬರಾಜುಗಳನ್ನು ಕೋರಿದ್ದೇವೆ ಮತ್ತು ಶೀಘ್ರದಲ್ಲೇ ಲಭ್ಯತೆ ಹೆಚ್ಚಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಲಸಿಕೆ ಪೂರೈಕೆ ಮತ್ತು ನಿರ್ವಹಣೆ ಕುರಿತು ಚರ್ಚೆ ನಡೆಸಲಾಯಿತು, ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆಗಳನ್ನು ಸಾಗಿಸುವುದು ಮತ್ತು ನಿರ್ವಹಿಸುವುದರ ಬಗ್ಗೆ ಚರ್ಚಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಅಗತ್ಯವಿರುವ ಜಾಗೃತಿ ಮೂಡಿಸುವ ಕಾರ್ಯಕ್ರಮದ ಬಗ್ಗೆ ಹೇಳಲಾಗಿದೆ. ”ಗೌರವ್ ಗುಪ್ತಾ ಸಭೆಯ ನಂತರ ಮಾಧ್ಯಮದವರೊಂದಿಗೆ ಗೆ ಮಾತನಾಡುತ್ತಾ ಹೇಳಿದರು.

ಸಭೆಯಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರೂ, ಪ್ರಧಾನಮಂತ್ರಿ ತಮ್ಮ ಸಲಹೆಯನ್ನು ಜಿಲ್ಲಾಧಿಕಾರಿಗಳಿಗೆ ಸೀಮಿತಗೊಳಿಸಿದರು, ಸಂವಾದದ ಮೂಲ ಆಲೋಚನೆ ನೇರವಾಗಿ ಜಿಲ್ಲಾಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗಿದೆ. ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಮತ್ತು ಉಪಮುಖ್ಯಮಂತ್ರಿ ಡಾ.ಎನ್.ಎನ್.ಅಶ್ವತ್ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಆರ್ ಅಶೋಕ್ ಉಪಸ್ಥಿತರಿದ್ದರು.

"ಸಾಂಕ್ರಾಮಿಕವನ್ನು ಒಳಗೊಂಡಿರುವ ಪ್ರಮುಖ ಅಂಶವೆಂದರೆ ಸ್ಥಳೀಯ ಕಂಟೈನ್ಮೆಂಟ್ ಝೋನ್ ಗಳು , ಆಕ್ರಮಣಕಾರಿ ಪರೀಕ್ಷೆ ಮತ್ತು ಜನರಿಗೆ ಸರಿಯಾದ, ಸಂಪೂರ್ಣ ಮಾಹಿತಿಯನ್ನು ನೀಡುವುದು ಮುಖ್ಯ. ಕೋವಿಡ್ 19 ರ ಎರಡನೇ ಅಲೆಯಲ್ಲಿ ನಾವು ಗ್ರಾಮೀಣ ಭಾಗದ ದೂರ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ನೀವು ಯಾವುದೇ ಸುಧಾರಣೆಯನ್ನು ಬೇಕಿದ್ದರೆ ಹೇಳಬಹುದು. "ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು, ಆದರೆ ಲಸಿಕೆ ಶೆಡ್ಯೂಲ್ ಗಳನ್ನು ರಾಜ್ಯಗಳಿಗೆ 15 ದಿನಗಳ ಮುಂಗಡ ನೋಟಿಸ್ ನೀಡಲು ಪ್ರಯತ್ನಿಸಲಾಗುತ್ತಿದೆ, ಇದರಿಂದಾಗಿ ಸಿದ್ಧತೆಗಳನ್ನು ಮಾಡಲು ಅನುಕೂಲವಾಗಲಿದೆ.

ಹೆಚ್ಚಿನ ಸಂಖ್ಯೆಯ ಕೊರೋನಾ ಪರೀಕ್ಷೆಗೆ ಪ್ರಧಾನಮಂತ್ರಿಯ ಒತ್ತಡವು ರಾಜ್ಯದಲ್ಲಿ ಪರೀಕ್ಷಾ ದರಗಳು ತೀರಾ ಕಡಿಮೆ ಇರುವ ಸಮಯದಲ್ಲಿ ಬಂದಿದೆ. ಅಲ್ಲದೆ ಇದು ಕಳೆದ ಎರಡು ವಾರಗಳಲ್ಲಿ ಪಾಸಿಟಿವಿಟಿ  ಏರಿಕೆಗೆ ಕಾರಣವಾಗುತ್ತದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com