
ಮೈಸೂರು: ಕೋವಿಡ್ 19 ಎರಡನೇ ಅಲೆಯಿಂದ ಬೆಡ್, ಆಕ್ಸಿಜನ್ ಸಿಲಿಂಡರ್ ಸಿಗದ ಹಿನ್ನೆಲೆಯಲ್ಲಿ ಮುಂದೆ ತೊಂದರೆ ಎದುರಾಗಬಹುದೆಂಬ ಆತಂಕದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟ್ ಬಾಡಿಗೆ ಪಡೆದ ಜನರು ಅದನ್ನು ವಾಪಸ್ ನೀಡದೇ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಎನ್ ಜಿ ಒಗಳಿಗೆ ಮತ್ತು ವ್ಯಕ್ತಿಗತವಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ ನೀಡದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ, ಹೀಗಾಗಿ ಹೋಮ್ ಐಸೋಲೇಷನ್ ನಲ್ಲಿರುವವರು ಮತ್ತು ಕೋವಿಡ್ ನಿಂದ ಗುಣಮುಖರಾದವರು ಹಾಗೂ ಅಸ್ತಮಾ ಸೇರಿದಂತೆ ಉಳಿದ ಕಾಯಿಲೆಗಳಿಂದ ನರಳುತ್ತಿರುವವರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಲು ಸಾಧ್ಯವಾಗುತ್ತಿಲ್ಲ.
ಆಕ್ಸಿಜನ್ ಕಾನ್ಸಂಟ್ರೇಟರ್ ಳನ್ನು ಪಡೆದ ಹಲವು ಮಂದಿ ಅವನ್ನು ವಾಪಸ್ ನೀಡುತ್ತಿಲ್ಲ, ಬದಲಾಗಿ ಅದಕ್ಕೆ ಬಾಡಿಗೆ ಹಣ ನೀಡಿ ತಮ್ಮ ಬಳಿಯಲ್ಲೇ ಇರಿಸಿಕೊಳ್ಳುತ್ತಿದ್ದಾರೆ ಎಂದು ಬಾಡಿಗೆಗೆ ನೀಡಿರುವ ಮಾರಾಟಗಾರರು ಮತ್ತು ಎನ್ ಜಿಓಗಳು ದೂರುತ್ತಿವೆ.
ಪ್ರತಿದಿನ ಆಕ್ಸಿಜನ್ ಕಾನ್ಸಂಟ್ರೇಟರ್ ಗಳಿಗಾಗಿ ಅನೇಕ ಮನವಿ ಬರುತ್ತಿವೆ, ಆದರೆ ನಮಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ, ಈ ಮೊದಲೇ ಆಕ್ಸಿಜನ್ ಕಾನ್ಸಂಟ್ರೇಟ್ ಗಳನ್ನು ತೆಗೆದುಕೊಂಡು ಹೋದವರು ಎಷ್ಟೇ ಮನವಿ ಮಾಡಿದರೂ ವಾಪಸ್ ನೀಡುತ್ತಿಲ್ಲ ಎಂದು ಸಿಬಿಆರ್ ಸರ್ಜಿಕಲ್ಸ್ ನ ರವಿಕುಮಾರ್ ತಿಳಿಸಿದ್ದಾರೆ.
ಆಕ್ಸಿಜನ್ ಕಾನ್ಸಂಟ್ರೇಟ್ ಗಳನ್ನು ಪ್ರತಿ ತಿಂಗಳಿಗೆ ಮೂರು ಸಾವಿರ ರೂ ನಂತೆ ಬಾಡಿಗೆಗೆ ನೀಡಲಾಗುತ್ತಿದೆ, ಹೀಗಾಗಿ ಅದನ್ನು ಬಾಡಿಗೆಗೆ ತೆಗೆದುಕೊಂಡವರು ಅದನ್ನು ಬಳಸದಿದ್ದರೂ, ಮುಂದೆ ಸಮಸ್ಯೆ ಎದುರಾಗಬಹುದೆಂಬ ಆತಂಕದಲ್ಲಿ ತಮ್ಮ ಬಳಿಯೇ ಇರಿಸಿಕೊಳ್ಳುತ್ತಿದ್ದಾರೆ,
ಸಮಸ್ಯೆ ಎದುರಾದಾಗ ಆಸ್ಪತ್ರೆಗೆ ತೆರೆಳಿ ತೊಂದರೆ ಅನುಭವಿಸುವ ಬದಲು ತಮ್ಮ ಬಳಿಯೇ ಇರಿಸಿಕೊಳ್ಳುವುದು ಉತ್ತಮ ಎಂಬ ಭಾವನೆಯಿಂದ ತೆಗೆದುಕೊಂಡು ಹೋದವರು ವಾಪಸ್ ನೀಡುತ್ತಿಲ್ಲ ಎಂದು ಮತ್ತೊಬ್ಬ ವ್ಯಾಪಾರಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಅನಧಿಕೃತ ಆಕ್ಸಿಮೀಟರ್ ಮಾರಾಟ ಹೆಚ್ಚುತ್ತಿದೆ. ವಿವಿಧ ವೈದ್ಯಕೀಯ ಮಳಿಗೆಗಳಿಗೆ ಭೇಟಿ ನೀಡಿದ ತೂಕ ಮತ್ತು ಅಳತೆ ವಿಭಾಗದ ಸಹಾಯಕ ನಿಯಂತ್ರಕ ಎಚ್.ಎಸ್.ರಾಜು ಅವರು ಅನುಮೋದಿಸದ ಹಲವು ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.
ಆಕ್ಸಿಮೀಟರ್ ಗಳಿಗೆ ಸರಿಯಾದ ಬೆಲೆ ಟ್ಯಾಗ್ ಇಲ್ಲ, ಬಿಐಎಸ್ ಪ್ರಮಾಣ ಪತ್ರ ಮತ್ತು ತಯಾರಿಕಾ ದಿನಾಂಕ ಕೂಡ ಇಲ್ಲ ಎಂದು ರಾಜು ಹೇಳಿದ್ದಾರೆ. ಇದುವರೆಗೂ 16 ಕೇಸ್ ಗಳು ದಾಖಲಾಗಿವೆ ಎಂದು ರಾಜು ಹೇಳಿದ್ದಾರೆ. ಯಾರಾದರೂ ದೂರು ದಾಖಲಿಸಬೇಕೆಂದರೇ 8050024760 ಸಂಖ್ಯೆಗೆ ಕರೆ ಮಾಡಬೇಕೆಂದು ತಿಳಿಸಿದ್ದಾರೆ.
Advertisement