ಕೋವಿಡ್ ನಿಂದ ಅನಾಥವಾದ ಮಕ್ಕಳಿಗೆ ಆಸರೆಯಾದ ಧಾರ್ಮಿಕ ಸಂಸ್ಥೆಗಳು

ಕೋವಿಡ್ ಸೋಂಕಿನಿಂದ ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹಲವು ಧಾರ್ಮಿಕ ಸಂಸ್ಥೆಗಳು ಮುಂದೆ ಬಂದಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೋವಿಡ್ ಸೋಂಕಿನಿಂದ ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹಲವು ಧಾರ್ಮಿಕ ಸಂಸ್ಥೆಗಳು ಮುಂದೆ ಬಂದಿವೆ.

ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮತ್ತು ತುಮಕೂರಿನ ಸಿದ್ದಗಂಗಾ ಮಠ, ಭಾಲ್ಕಿಯ ಹೀರೆಮಠ ಸಂಸ್ಥಾನ ಮತ್ತು ಮೈಸೂರು ಜಿಲ್ಲೆಯ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರೀಶ್ವರ ಸಂಸ್ಥಾನಗಳು ಕೋವಿಡ್ 19 ನಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಆಸರೆ ನೀಡಲು ಮುಂದಾಗಿವೆ.

ನಾವು ಈಗಾಗಲೇ 800 ಹೆಣ್ಣು ಮಕ್ಕಳನ್ನು ಒಳಗೊಂಡಂತೆ 3,000 ಮಕ್ಕಳನ್ನು ಹೊಂದಿದ್ದೇವೆ, ಐದು ವರ್ಷದಿಂದ ಹಿಡಿದು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ನಮ್ಮ ಮಠದಲ್ಲಿದ್ದಾರೆ. ನಾವು  ಅವರು ಪದವಿ ಪಡೆಯುವವರೆಗೂ ಉಚಿತ ಶಿಕ್ಷಣದೊಂದಿಗೆ ಉಚಿತ ಆಹಾರ, ವಸತಿ ಮತ್ತು ಬೋರ್ಡಿಂಗ್ ಒದಗಿಸುತ್ತೇವೆ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಈ ಸಂಬಂಧ ಗುರುವಾರದಿಂದ ಸುಮಾರು 150 ಕರೆಗಳು ಬಂದಿವೆ, ಇದರಲ್ಲಿ ಒಬ್ಬ ಪೋಷಕರನ್ನು ಮತ್ತು ಇಬ್ಬರು ಪೋಷಕರನ್ನು ಕಳೆದುಕೊಂಡವರು ಸೇರಿದ್ದಾರೆ. ಮಕ್ಕಳನ್ನು ದತ್ತು ಪಡೆಯಲು ಉತ್ಸುಕರಾಗಿರುವ ಜನರಿಂದಲೂ ನಮಗೆ ಕರೆಗಳು ಬರುತ್ತಿವೆ. ಆದರೆ ಇದನ್ನು ಕಾನೂನುಬದ್ಧವಾಗಿ ಮಾಡಬೇಕಾಗಿದೆ ಎಂದು ಮಠದ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಕೊರಟಗೆರೆ ತಾಲ್ಲೂಕಿನ ಎಲೆರಾಮಪುರ ಕುಂಚಟಿಗ ಮಠದ ಶ್ರೀ ಹನುಮಂತನಾಥ ಅವರು ಅನಾಥ ಮಕ್ಕಳನ್ನು ದತ್ತು ಪಡೆಯಲು ಮತ್ತು 10 ನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ನೀಡಲು ಮುಂದಾಗಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿರುವ ಹಿರೇಮಠ ಸಂಸ್ಥಾನ ಮಠವು ಅಂತಹ ಮಕ್ಕಳಿಗೆ ಬಾಗಿಲು ತೆರೆದಿದೆ. ಮಠದ ಆಡಳಿತಾಧಿಕಾರಿ ಮೋಹನ್ ರೆಡ್ಡಿ ಅವರಿಗೆ ಹಲವಾರು ಕರೆಗಳು ಬರುತ್ತಿವೆ. ವಿಶೇಷವಾಗಿ ಬೀದರ್, ಕಲಬುರಗಿ ರಾಯಚೂರು, ಯಾದಗಿರಿ ಮತ್ತು ಹುಬ್ಬಳ್ಳಿ-ಧಾರವಾಡದಿಂದಲೂ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ, ಸುಮಾರು 10 ಮಕ್ಕಳನ್ನು ದೃಢೀಕರಿಸಲಾಗಿದೆ, ಆದರೆ ನಾವು ಅವರನ್ನು ಇನ್ನೂ ಒಳಗೆ ಕರೆದೊಯ್ದಿಲ್ಲ. ನಾವು ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಗೆ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಅವರು ಅನುಮೋದಿಸಿದ ನಂತರ, ನಾವು ಈ ಮಕ್ಕಳನ್ನು ಮಠಕ್ಕೆ ಕರೆದೊಯ್ಯುತ್ತೇವೆ, ಅವರನ್ನು 15 ದಿನಗಳ ಕಾಲ ಪ್ರತ್ಯೇಕವಾಗಿರಿಸುತ್ತೇವೆ ಮತ್ತು ನಂತರ ಅವರನ್ನು ಮಠಕ್ಕೆ ಕರೆದೊಯ್ಯುತ್ತೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com