ಎರಡು ಲಸಿಕೆ ಪಡೆದಿದ್ದರೂ ಕೊರೋನಾ ಸೋಂಕಿನಿಂದ ಸಂಶೋಧಕ ಡಾ. ಎನ್.ಎಸ್. ಮೂರ್ತಿ ಸಾವು

ಕೋವಿಶೀಲ್ಡ್ ನ ಎರಡು ಲಸಿಕೆ ತೆಗೆದುಕೊಂಡ ನಂತರವೂ ಎಂ.ಎಸ್ ರಾಮಯ್ಯ ಮೆಡಿಕಲ್ ಕಾಲೇಜಿನ ಸಂಶೋಧನಾ ನಿರ್ದೇಶಕ ಡಾ.ಎನ್ ಎಸ್ ಮೂರ್ತಿ ಕೋವಿಡ್ ನಿಂದ ನಿಧನರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಶೀಲ್ಡ್ ನ ಎರಡು ಲಸಿಕೆ ತೆಗೆದುಕೊಂಡ ನಂತರವೂ ಎಂ.ಎಸ್ ರಾಮಯ್ಯ ಮೆಡಿಕಲ್ ಕಾಲೇಜಿನ ಸಂಶೋಧನಾ ನಿರ್ದೇಶಕ ಡಾ.ಎನ್ ಎಸ್ ಮೂರ್ತಿ ಕೋವಿಡ್ ನಿಂದ ನಿಧನರಾಗಿದ್ದಾರೆ.

ಜನವರಿ 21 ರಂದು ಮೊದಲ ಡೋಸ್ ಮತ್ತು ಅದಾದ ನಾಲ್ಕು ವಾರಗಳ ನಂತರ ಎರಡನೇ ಲಸಿಕೆ ಪಡೆದುಕೊಂಡಿದ್ದರು. ಏಪ್ರಿಲ್ 8 ರಂದು ಸೋಂಕು ಕಾಣಿಸಿಕೊಂಡಿತ್ತು. ಏಪ್ರಿಲ್ 15 ರಂದು ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರಂಭದಲ್ಲಿ ಅವರ ಶ್ವಾಸಕೋಶಗಳು ಸರಿಯಾಗಿದ್ದವು, ಆದರೆ ನಂತರ ಊರಿಯೂತ ಕಾಣಿಸಿಕೊಂಡಿತು, ಏಪ್ರಿಲ್ 25 ರಂದು ಆಕ್ಸಿಜನ್ ಮಟ್ಟ ಕಡಿಮೆಯಾದ್ದರಿಂದ ಅವರನ್ನು ಐಸಿಯು ಗೆ ಶಿಫ್ಟ್ ಮಾಡಲಾಯಿತು.

ಅವರನ್ನು ಸಾಮಾನ್ಯ ವೆಂಟಿಲೇಟರ್ ನಲ್ಲಿರಿಸಲಾಗಿತ್ತು, ಒಂದು ವಾರದ ಕಾಲ ಅವರು ಸರಿಯಾಗಿದ್ದರು. ಆದರೆ ಶ್ವಾಸಕೋಶಕ್ಕೆ ಎಫೆಕ್ಟ್ ಆದ ಕಾರಣ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು ಎಂದು  ಡಾ. ರೂಪಾರಾಣಿ ತಿಳಿಸಿದ್ದಾರೆ. 

ಅವರು ಒಂದು ವಾರದವರೆಗೆ ಇಂಟ್ಯೂಬೇಟ್ ಆಗಿದ್ದರು ಮತ್ತು ಮೇ 7 ರಂದು ಅವರು ವೈರಸ್‌ಗೆ ಬಲಿಯಾದರು. ಲಸಿಕೆಗಳು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತವೆ ಆದರೆ ಈ ಲಸಿಕೆಯ ಪರಿಣಾಮಕಾರಿತ್ವವು ಸುಮಾರು 70% ನಷ್ಟಿದೆ ಎಂದು ಡಾ. ರೂಪಾರಣಿ ಹೇಳಿದರು. ಅವರ ವಯಸ್ಸು ಮತ್ತು ಅಧಿಕ ರಕ್ತದೊತ್ತಡ ಇದಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು. ನಮ್ಮ ಕೋವಿಡ್- ಐಸಿಯುನಲ್ಲಿ ಲಸಿಕೆಯ ಮೊದಲ ಅಥವಾ ಎರಡೂ ಪ್ರಮಾಣವನ್ನು ತೆಗೆದುಕೊಂಡ ಬಹಳಷ್ಟು ಜನರಿದ್ದಾರೆ. ಇನಾಕ್ಯುಲೇಷನ್ ಹೊರತಾಗಿಯೂ ಪ್ರತಿಕಾಯದ ಪ್ರತಿಕ್ರಿಯೆ ಕಡಿಮೆ ಇರುವ ಸಾಧ್ಯತೆಯಿದೆ, ಎಂದು ಅವರು ಹೇಳಿದರು.

ವ್ಯಾಕ್ಸಿನೇಷನ್ ಹೊರತಾಗಿಯೂ ಅಪರೂಪದ ಸಂದರ್ಭಗಳಲ್ಲಿ ಜನರು ಸಾವನ್ನಪ್ಪುತ್ತಾರೆ, ಕೆಲವು ಜನರಲ್ಲಿ, ಅವರು ಯಾವ ಲಸಿಕೆ ತೆಗೆದುಕೊಂಡರೂ, ಇಮ್ಯುನೊಜೆನಿಕ್ ಪ್ರತಿಕ್ರಿಯೆ ಕಳಪೆಯಾಗಿರುವ ಕಾರಣ ಲಿಸಿಕೆ ಕೆಲಸ ಮಾಡುವುದಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ  ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com