ಕೊಡಗು: ಅಂತರರಾಜ್ಯ ಪ್ರಯಾಣಕ್ಕಾಗಿ ನಕಲಿ ಆರ್ ಟಿಪಿಸಿಆರ್ ವರದಿ: ಹೆಸರಾಂತ ದಿನಪತ್ರಿಕೆಯ ಪತ್ರಕರ್ತನ ಬಂಧನ

ಅಂತರರಾಜ್ಯ ಪ್ರಯಾಣಕ್ಕಾಗಿ ನಕಲಿ ಕೋವಿಡ್ ಟೆಸ್ಟ್ ವರದಿ ನೀಡುತ್ತಿದ್ದ ಪತ್ರಕರ್ತನನ್ನು ಮಡಿಕೇರಿ ಪೊಲಿಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಡಿಕೇರಿ: ಅಂತರರಾಜ್ಯ ಪ್ರಯಾಣಕ್ಕಾಗಿ ನಕಲಿ ಕೋವಿಡ್ ಟೆಸ್ಟ್ ವರದಿ ನೀಡುತ್ತಿದ್ದ ಪತ್ರಕರ್ತನನ್ನು ಮಡಿಕೇರಿ ಪೊಲಿಸರು ಬಂಧಿಸಿದ್ದಾರೆ.

ವಿಜಯವಾಣಿ ಪಬ್ಲಿಕೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಅಬ್ದಲ್ ಅಜೀಜ್ ಎಂಬ ಪತ್ರಕರ್ತನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 420, 471ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕರ್ನಾಟಕದಿಂದ ಕೇರಳಕ್ಕೆ ಹೋಗುವವರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯವಾಗಿದೆ. ಹೀಗಾಗಿ ಕೊಡಗಿನಿಂದ ಕೇರಳಕ್ಕೆ ತೆರಳುವವರಿಗೆ ನಕಲಿ ಆರ್ ಟಿಪಿಸಿಆರ್ ವರದಿ ನೀಡುತ್ತಿದ್ದ,  ಕೇರಳಕ್ಕೆ ಪ್ರಯಾಣಿಸುವವರಿಗೆ ತನ್ನ ಸ್ಟುಡಿಯೋದಲ್ಲಿಯೇ ನಕಲಿ ವರದಿ ತಯಾರಿಸಿ ಕೊಡುತ್ತಿದ್ದ.

ಯಾವುದೇ ಟೆಸ್ಟ್ ಮಾಡಿಸದೇ ಹಣವನ್ನು ಪಡೆದು ನಕಲಿ ವರದಿ ಕೊಡುತ್ತಿದ್ದ ಅಬ್ದುಲ್ ಅಜೀಜ್ ಕೊಡಗಿನಿಂದ ಕೇರಳಕ್ಕೆ ತೆರಳುವ ವಾಹನಗಳನ್ನು ಗಡಿಯಲ್ಲಿ ತಪಾಸಣೆ ಮಾಡುವಾಗ ನಕಲಿ ನೆಗೆಟಿವ್‌ ವರದಿ ಪತ್ತೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ನಕಲಿ ವರದಿ ತಯಾರು ಮಾಡುವವ ಸಿಕ್ಕಿಬಿದ್ದಿದ್ದಾನೆ.

ನೆಲ್ಲಿಹುಡಿಕೇರಿಯಿಂದ ಕೇರಳಕ್ಕೆ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರ ಕ್ಯೂಆರ್ ಕೋಡ್ ಅನ್ನು ಕುಟ್ಟಾ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಸ್ಕ್ಯಾನ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೊಡಗು ಎಸ್ಪಿ ಕ್ಷಮಾ ಮಿಶ್ರಾ, ಈ ವಿಷಯದ ಬಗ್ಗೆ ತಕ್ಷಣವೇ ಎಚ್ಚರಿಕೆ ನೀಡಿದರು ಮತ್ತು ಸಿದ್ದಾಪುರ ಪೊಲೀಸರು ಕೂಡಲೇ ತನಿಖೆಯನ್ನು ಕೈಗೆತ್ತಿಕೊಂಡಾಗ ಅಜೀಜ್ ಹೆಸರುಬಹಿರಂಗವಾಗಿದೆ

ಇದುವರೆಗೂ ಹಲವಾರು ಜನರಿಗೆ ನಕಲಿ ವರದಿ ತಯಾರಿಸಿಕೊಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ ಎಷ್ಟು ಜನರಿಗೆ ಈ ರೀತಿ ನಕಲಿ ವರದಿ ನೀಡಿದ್ದಾನೆ ಎಂದು ಖಚಿತವಾಗಿ ತಿಳಿದು ಬಂದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com