ಹೊನ್ನಾಳಿ: ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಕೊರೋನಾ ವಿಚಾರದಲ್ಲಿ ಬಹಳ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಗಳ ವಿತರಣೆ, ಕೊರೋನಾ ರೋಗಿಗಳಿಗೆ ಆಹಾರ ವಿತರಣೆ, ಮಾಸ್ಕ್, ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಆಹಾರ ಕಿಟ್ ವಿತರಣೆ ಹೀಗೆ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಮಧ್ಯೆ ಹೊನ್ನಾಳಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೋನಾ ಲಕ್ಷಣ ರಹಿತ ಸೋಂಕಿತರು ಕ್ವಾರಂಟೈನ್ ನಲ್ಲಿರುವಲ್ಲಿ ಸಂಗೀತ ರಸಸಂಜೆಯನ್ನು ಏರ್ಪಡಿಸಿದ್ದರು. ಅಲ್ಲಿ ಕ್ವಾರಂಟೈನ್ ನಲ್ಲಿರುವವರ ಮನಸ್ಸಿಗೆ ಮುದ ನೀಡಿ ಅವರಿಗೆ ಖುಷಿಪಡಿಸುವುದು ಉದ್ದೇಶವಾಗಿತ್ತು.
ಇಲ್ಲಿ ಸ್ವತಃ ರೇಣುಕಾಚಾರ್ಯ ಅವರೇ ಕನ್ನಡದ ಹಳೆಯ ಚಿತ್ರಗೀತೆಗಳಿಗೆ ಸೋಂಕಿತರ ಜೊತೆ ಕುಣಿದು ಸಂತೋಷಪಡುವುದಲ್ಲದೆ ಬೇರೆಯವರನ್ನು ಕೂಡ ಖುಷಿಪಡಿಸಿದ್ದಾರೆ.
Advertisement