ದೊಡ್ಮನೆ ಕುಡಿ ಅಪ್ಪುವಿನ ಅಕಾಲಿಕ ಮರಣದ ನೋವು: ಪುನೀತ್ ಕುಟುಂಬದ ವೈದ್ಯರಿಗೆ ಭದ್ರತೆ

ಇತ್ತೀಚೆಗೆ ಅಗಲಿರುವ ಕನ್ನಡ ಚಿತ್ರರಂಗ ಸ್ಯಾಂಡಲ್ ವುಡ್ ನಟ ಪುನೀತ್ ರಾಜಕುಮಾರ್ ಕುಟುಂಬದ ವೈದ್ಯ ಡಾ.ರಮಣ್ ರಾವ್ ಗೆ ಸರ್ಕಾರ ಪೊಲೀಸ್ ಭದ್ರತೆ ನಿಯೋಜಿಸಿದೆ.
ಪುನೀತ್ ರಾಜಕುಮಾರ್-ರಮಣ ರಾವ್
ಪುನೀತ್ ರಾಜಕುಮಾರ್-ರಮಣ ರಾವ್
Updated on

ಬೆಂಗಳೂರು: ಇತ್ತೀಚೆಗೆ ಅಗಲಿರುವ ಕನ್ನಡ ಚಿತ್ರರಂಗ ಸ್ಯಾಂಡಲ್ ವುಡ್ ನಟ ಪುನೀತ್ ರಾಜಕುಮಾರ್ ಕುಟುಂಬದ ವೈದ್ಯ ಡಾ.ರಮಣ್ ರಾವ್ ಗೆ ಸರ್ಕಾರ ಪೊಲೀಸ್ ಭದ್ರತೆ ನಿಯೋಜಿಸಿದೆ.

ಪುನೀತ್ ರಾಜಕುಮಾರ್ ಕಳೆದ ಅ. 29ರಂದು ತಮ್ನ 46ನೇ ವಯಸ್ಸಿಗೆ ಜಗತ್ತಿಗೆ ವಿದಾಯ ಹೇಳಿದ್ದಾರೆ.  ಹೀಗಿರುವಾಗ ಅವರ ಸಾವಿನಿಂದಾಗಿ ಬೇಸರಗೊಂಡಿರುವ ಅಭಿಮಾನಿಗಳು ಪುನೀತ್ ಕುಟುಂಬ ವೈದ್ಯ ರಮಣ್ ರಾವ್  ಮೇಲೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೀಗಾಗಿ ಅವರಿಗೆ ಪೊಲೀಸ್ ರಕ್ಷಣೆಯನ್ನೂ ನೀಡಲಾಗಿದೆ. 

ತಮಗೆ ರಕ್ಷಣೆ ನೀಡುವಂತೆ ರಮಣ್ ರಾವ್ ಪೊಲೀಸ್ ರಕ್ಷಣೆ ಕೋರಿದ್ದರಿಂದ ಅವರ ಮನೆಗೆ ಬಿಗಿ ಭದ್ರತೆ ನಿಯೋಜಿಸಲಾಗಿದೆ. ರಮಣ್ ರಾವ್ ನಿವಾಸದ ಹೊರಗೆ  ಕೆಎಸ್ ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ ಮತ್ತು ಪೊಲೀಸರು ನಾಲ್ವರೂ ಗಸ್ತು ತಿರುಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪುನೀತ್ ರಾಜಕುಮಾರ್ ಅವರ ಕುಟುಂಬ ವೈದ್ಯ ರಮಣ್ ರಾವ್ ಅವರನ್ನು ಭೇಟಿಯಾದಾಗ ವೈದ್ಯರು ಆಸ್ಪತ್ರೆಗೆ ದಾಖಿಲಿಸುವಂತೆ ಸೂಚಿಸಿದ್ದರು. ಇದೀಗ ಪುನೀತ್ ಅಭಿಮಾನಿಗಳ ಕಾರ್ಯವೈಖರಿ ಮತ್ತು ಅಸಮಾಧಾನದಿಂದ ಕರ್ನಾಟಕದ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ ಆತಂಕಕ್ಕೆ ಒಳಗಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com