ಬಿಗ್ FM ರೇಡಿಯೊ ಜಾಕಿ ಪಟ್ ಪಟ್ ಪಟಾಕಿ ಶ್ರುತಿ ಗೆ ಲೀಡ್ ಇಂಡಿಯಾ ಫೌಂಡೇಶನ್‌ ಗೌರವ

ಲೀಡ್ ಇಂಡಿಯಾ ಫೌಂಡೇಶನ್, ಭಾರತ ರತ್ನ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕನಸಿನ ಕೂಸು. ಈ ಫೌಂಡೇಷನ್ ಶ್ರೀಲಂಕಾದ SUNFO ಗ್ಲೋಬಲ್ ಫೆಡರೇಶನ್ ಸಹಯೋಗದೊಂದಿಗೆ ವಿಷನ್ ಡಿಜಿಟಲ್ ಇಂಡಿಯಾ ಅಡಿ ಈ ಪ್ರಶಸ್ತಿ ನೀಡಿದೆ.
ಬಿಗ್ FM ರೇಡಿಯೊ ಜಾಕಿ ಪಟ್ ಪಟ್ ಪಟಾಕಿ ಶ್ರುತಿ ಗೆ ಲೀಡ್ ಇಂಡಿಯಾ ಫೌಂಡೇಶನ್‌ ಗೌರವ

ಬೆಂಗಳೂರು: ಬೆಂಗಳೂರಿನ ಬಿಗ್ ಎಫ್ ಎಂ ನ ಪ್ರತಿಭಾನ್ವಿತ ಕನ್ನಡ ರೇಡಿಯೊ ಜಾಕಿ, ಪಟ್ ಪಟ್ ಪಟಾಕಿ ಎಂದೇ ಹೆಸರಾದ ಶ್ರುತಿ ಅವರಿಗೆ ಪ್ರತಿಷ್ಟಿತ ಲೀಡ್ ಇಂಡಿಯಾ ಫೌಂಡೇಶನ್ ಕೊಡಮಾಡುವ ನೊಬೆಲ್ ಪ್ರಶಸ್ತಿ ದೊರೆತಿದೆ. ಭಾರತದಾದ್ಯಂತ ವಿವಿಧ ಕ್ಷೇತ್ರಗಳ 11 ವ್ಯಕ್ತಿಗಳನ್ನು ಸಂಸ್ಥೆ ಗುರುತಿಸಿದೆ.

ಸುಸ್ಥಿರ ಜಗತ್ತನ್ನು ಸೃಷ್ಟಿಸಲು ಮತ್ತು ಉದ್ಯೋಗಾವಕಾಶಗಳನ್ನು ನಿರ್ಮಿಸಲು ಮತ್ತು ಕೌಶಲ್ಯ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಈ ಮನ್ನಣೆ ಪ್ರಾಪ್ತವಾಗಿದೆ. ಇದೇ ಮೊದಲ ಬಾರಿಗೆ ಸಾಧಕರ ಸಾಲಿನಲ್ಲಿ ರೇಡಿಯೋ ಜಾಕಿಯನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ ಎನ್ನುವುದು ವಿಶೇಷ.

ಲೀಡ್ ಇಂಡಿಯಾ ಫೌಂಡೇಶನ್, ಭಾರತ ರತ್ನ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕನಸಿನ ಕೂಸು. ಈ ಫೌಂಡೇಷನ್ ಶ್ರೀಲಂಕಾದ SUNFO ಗ್ಲೋಬಲ್ ಫೆಡರೇಶನ್ ಸಹಯೋಗದೊಂದಿಗೆ ವಿಷನ್ ಡಿಜಿಟಲ್ ಇಂಡಿಯಾ ಅಡಿ ಈ ಪ್ರಶಸ್ತಿ ನೀಡುತ್ತಿದೆ. ಗೌರವ ಸ್ವೀಕರಿಸುವ ಸಂದರ್ಭ ಶ್ರೀಲಂಕಾದ ಕೈಗಾರಿಕಾ ಸಚಿವರು, ಉನ್ನತ ಶಿಕ್ಷನ ಸಚಿವರು ಸೇರಿದಂತೆ ಮತ್ತಿತರ ಗಣ್ಯರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com