ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷ: ಸೈಬರ್ ಖದೀಮರಿಂದ ಸಾರ್ವಜನಿಕರಿಗೆ ವಂಚನೆ
ಬೆಂಗಳೂರು: ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷವೊಡ್ಡಿ ವಂಚಿಸಿರುವ ಸೈಬರ್ ಖದೀಮರು ಸಾರ್ವಜನಿಕರಿಂದ ಲಕ್ಷಾಂತರ ರೂ. ದೋಚಿದ್ದಾರೆ.
ಈ ಸಂಬಂಧ ನಗರದ ಪಶ್ಚಿಮ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಮೊಬೈಲ್ಗೆ ಮೇಸೆಜ್ ಕಳುಹಿಸಿ ಸಾರ್ವಜನಿಕರಿಗೆ ಗಾಳ ಹಾಕುತ್ತಿದ್ದಾರೆ. ನಾಗರಭಾವಿ ನಿವಾಸಿ ರಮೇಶ್ ಎಂಬುವವರಿಗೆ ಮೇಸೆಜ್ ಕಳುಹಿಸಿ ಟ್ರೇಡಿಂಗ್ ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ್ದಾರೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿದ್ರೆ, ಡಾಲರ್ ರೂಪದಲ್ಲಿ ಹೆಚ್ಚು ಹಣ ಗಳಿಸಬಹುದೆಂದು ಹೇಳಿದ್ದಾರೆ.
ಮೊಬೈಲ್ಗೆ ಲಿಂಕ್ ಕಳಿಸಿ ಎಂದು ಹೇಳಿ ಹಂತ ಹಂತವಾಗಿ 2.87 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಬಳಿಕ ಲಾಭಾಂಶ ಹಾಗೂ ಹೂಡಿಕೆ ಹಣ ಕೊಡದೇ ಆ್ಯಪ್ ಸ್ಥಗಿತಗೊಳಿಸಿ ವಂಚಿಸಿದ್ದಾರೆ.
ಇದೇ ರೀತಿ ಗೋಲ್ಡ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ, ವಿಜಯನಗರದ ಹಾಗೂ ಕೆಂಗೇರಿಯ ನಿವಾಸಿಗೆ ವಂಚಿಸಿದ್ದಾರೆ. ಇಬ್ಬರಿಂದ ಒಟ್ಟು 27 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ಪಶ್ಚಿಮ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ