ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ರಾಜ್ಯಾದ್ಯಂತ ಸುಗಮವಾಗಿ ಸಾಗಿದ ಮತದಾನ

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಸುಗಮವಾಗಿ ಸಾಗಿದ್ದು ರಾಜ್ಯದಾದ್ಯಂತ ಪರಿಷತ್ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು. 
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಮತದಾರರು ಬಂದು ಹಕ್ಕು ಚಲಾಯಿಸಿದ ಸಂದರ್ಭ
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಮತದಾರರು ಬಂದು ಹಕ್ಕು ಚಲಾಯಿಸಿದ ಸಂದರ್ಭ

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಸುಗಮವಾಗಿ ಸಾಗಿದ್ದು ರಾಜ್ಯದಾದ್ಯಂತ ಪರಿಷತ್ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು. 

ಚುನಾವಣೆ ವಿಜೇತರು: ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ (ಕಲಬುರಗಿ), ಅಲ್ಲುಂಡಿ ರಂಗಣ್ಣ ಪಾಟೀಲ (ರಾಯಚೂರು), ಸುರೇಶ ಚೆನ್ನಶೆಟ್ಟಿ (ಬೀದರ್), ಸಿದ್ದಪ್ಪ ಹೊಟ್ಟಿ (ಯಾದಗಿರಿ), ಡಿ.ಮಂಜುನಾಥ್ (ಶಿವಮೊಗ್ಗ), ವಾಮದೇವಪ್ಪ (ದಾವಣಗೆರೆ), ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ (ಚತ್ತರದಹಟ್ಟಿ) 

ಹಾಸನದಲ್ಲಿ ಮತ ಚಲಾಯಿಸಲು ದುಬೈಯಿಂದ ಬಂದು ಹಕ್ಕು ಚಲಾವಣೆ: ಹಾಸನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಮತ ಚಲಾಯಿಸಲು ದುಬೈಯಿಂದ ಮೊನಿಕಾ ದೀಪಕ್ ಬಂದಿದ್ದರು. ಬೇಲೂರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. 

ಕನ್ನಡ ಭಾಷೆಯ ಮೇಲಿನ ಪ್ರೀತಿಗೆ ನಾನು ದುಬೈಯಿಂದ ಬಂದು ಹಕ್ಕು ಚಲಾಯಿಸಿದ್ದೇನೆ, ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು. ಇಲ್ಲಿ ಮತ್ತೊಂದು ಪ್ರಮುಖ ವಿಷಯವೆಂದರೆ ಮೊನಿಕಾ ಅವರಿಗೆ ಒಂದೂವರೆ ವರ್ಷದ ಮಗುವಿದ್ದು ಮಗುವನ್ನು ಕರೆದುಕೊಂಡು ದುಬೈಯಿಂದ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com