ಬೆಂಗಳೂರು-ಪಾಟ್ನಾ ಗೋ ಫಸ್ಟ್ ವಿಮಾನ ತುರ್ತು ಭೂಸ್ಪರ್ಶ, 133 ಪ್ರಯಾಣಿಕರು ಸುರಕ್ಷಿತ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ಬೆಳಗ್ಗೆ 9.15ಕ್ಕೆ ಟೇಕಾಫ್ ಆಗಿದ್ದ ಗೋ ಫಸ್ಟ್ ವಿಮಾನದ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ಬೆಳಗ್ಗೆ 9.15ಕ್ಕೆ ಟೇಕಾಫ್ ಆಗಿದ್ದ ಗೋ ಫಸ್ಟ್ ವಿಮಾನದ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಅದೃಷ್ಟವಶಾತ್ ಮಗು ಸೇರಿದಂತೆ 133 ಪ್ರಯಾಣಿಕರು ಆಪಾಯದಿಂದ ಪಾರಾಗಿದ್ದಾರೆ.

G8-873 ವಿಮಾನ ಬೆಂಗಳೂರಿನಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಇಂಜಿನ್ ನಲ್ಲಿ ಬೆಂಕಿಯ ಅಲರ್ಟ್‌ನಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೈಲೆಟ್ ತಕ್ಷಣವೇ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.

ಪ್ರಯಾಣಿಕರಿಗೆ ನಾಗ್ಪುರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 4.45 ಕ್ಕೆ ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಯಿತು ಮತ್ತು ಪ್ರಯಾಣಿಕರು ಐದೂವರೆ ಗಂಟೆ ತಡವಾಗಿ ಪಾಟ್ನಾ ತಲುಪಿದರು.

ಈ ಬಗ್ಗೆ ಗೋ ಫಸ್ಟ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಇಂಜಿನ್‍ನಲ್ಲಿ ದೋಷ ಕಂಡು ಬಂದಿರುವ ಬಗ್ಗೆ ಕಾಕ್‍ಪಿಟ್‍ನಲ್ಲಿ ಎಚ್ಚರಿಕೆ ಗಂಟೆ ಕೇಳಿ ಬಂದಿತ್ತು. ಈ ಹಿನ್ನಲೆ ಪೈಲೆಟ್‌ ನಾಗ್ಪುರ್‌ನಲ್ಲಿ ತುರ್ತು ಲ್ಯಾಂಡ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com