ವಿಜ್ಞಾನಿ ಕಸ್ತೂರಿ ರಂಗನ್ -ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಬಸವ ಶ್ರೀ ಪ್ರಶಸ್ತಿ

ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಹಾಗೂ ಸರೋದ್ ವಾದಕ ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿ ಒಲಿದಿದೆ.
ಕಸ್ತೂರಿ ರಂಗನ್ ಮತ್ತು ರಾಜೀವ್ ತಾರಾನಾಥ್
ಕಸ್ತೂರಿ ರಂಗನ್ ಮತ್ತು ರಾಜೀವ್ ತಾರಾನಾಥ್
Updated on

ಚಿತ್ರದುರ್ಗ:  ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಹಾಗೂ ಸರೋದ್ ವಾದಕ ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿ ಒಲಿದಿದೆ.

ಚಿತ್ರದುರ್ಗದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮುರುಘಾಮಠದ ಶಿವಮೂರ್ತಿ ಮುರುಘಾಶರಣರು ಪ್ರಶಸ್ತಿ ಘೋಷಣೆ ಮಾಡಿದರು. ಪ್ರಶಸ್ತಿ ಮೊತ್ತ ಐದು ಲಕ್ಷ ರುಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರಲಿದೆ. 

ಅಕ್ಟೊಬರ್ 17 ರಂದು ನಡೆಯುವ ಸಮಾರಂಭದಲ್ಲಿ ಬಸವಕೇಂದ್ರ ಮುರುಘಾಮಠದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಸಾಂಪ್ರದಾಯಿಕ ಹಿಂದೂಸ್ತಾನಿ ಸಂಗೀತದಲ್ಲಿ ಅಗ್ರಗಣ್ಯರು. 1932ರಲ್ಲಿ ಜನಿಸಿ ತಾರಾನಾಥ್  ತಮ್ಮ 9ನೇ ವಯಸ್ಸಿನಿಂದಲೇ ಸಂಗೀತ ಕಚೇರಿ ಆರಂಭ ಮಾಡಿದರು. ಬಳಿಕ ಚಿಕ್ಕ ವಯಸ್ಸಿನಲ್ಲೇ ಆಕಾಶವಾಣಿಗೆ ತಮ್ಮ ಹಾಡುಗಾರಿಕೆ ಶುರು ಮಾಡಿದರು.

ತಾರಾನಾಥರು ಸಾಹಿತ್ಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದು ತಮಗಿದ್ದ ಇಂಗ್ಲಿಷ್ ಪ್ರಾಧ್ಯಪಕತನವನ್ನು ತ್ಯಜಿಸಿ ಸಂಗೀತವನ್ನು  ಅಭ್ಯಸಿಸಲು ಆರಂಭಿಸಿದರು.  ಅಲಿ ಅಕ್ಬರ್ ಖಾನ್ ಶಿಷ್ಯರಾದರು. ಬಳಿಕ  ಪಂಡಿತ್ ರವಿಶಂಕರ್, ಶ್ರೀಮತಿ ಅನ್ನಪೂರ್ಣಾದೇವಿ, ಪಂಡಿತ್ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನರ ಮಾರ್ಗದರ್ಶನವನ್ನು ಸಹಾ ರಾಜೀವ್ ತಾರಾನಾಥರು ಪಡೆದರು. 

ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್   ಅವರು ಕರ್ನಾಟಕದ  ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, ಇವರು 2003 ರವರೆಗೆ 9 ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com