ದಾವಣಗೆರೆ: ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತ, ರಸ್ತೆಗಿಳಿದು ಚರಂಡಿ ಕ್ಲೀನ್ ಮಾಡಿದ ಮೇಯರ್

ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ದಾವಣಗೆರೆಯ ಹಲವಾರು ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ.
ಚರಂಡಿ ಸ್ವಚ್ಛಗೊಳಿಸಿದ ಮೇಯರ್
ಚರಂಡಿ ಸ್ವಚ್ಛಗೊಳಿಸಿದ ಮೇಯರ್

ದಾವಣಗೆರೆ: ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ದಾವಣಗೆರೆಯ ಹಲವಾರು ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ.

ದಾವಣಗೆರೆ ನಗರ ಪಾಲಿಕೆ ಮುಂಭಾಗದಲ್ಲಿರುವ ಈರುಳ್ಳಿ ಮಾರುಕಟ್ಟೆ, ರೈಲ್ವೆ ಅಂಡರ್‌ಪಾಸ್ ಜಲಾವೃತಗೊಂಡಿತ್ತು. ಹೀಗಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ನಿರ್ಬಂಧಿಸಲಾಗಿತ್ತು. ಈರುಳ್ಳಿ ಮಾರುಕಟ್ಟೆಯಲ್ಲಿ ಚರಂಡಿಯಲ್ಲಿ ಬೈಕ್ ಬಿದ್ದಿದ್ದು, ಸವಾರನಿಗೆ ಭಾರೀ ನೀರು ತುಂಬಿದ್ದ ಕಾರಣ ರಸ್ತೆ  ಗುರುತು ಪತ್ತೆಯಾಗಲಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ಮೇಯರ್ ಎಸ್.ಟಿ ವಿರೇಶ್ ಚರಂಡಿ ಸ್ವಚ್ಛಗೊಳಿಸಿದ್ದಾರೆ.

ಇದಲ್ಲದೇ, ಶಂಕರ್ ವಿಹಾರ್ ಎಕ್ಸ್ ಟೆನ್ಸನ್ ಮತ್ತು ಎಸ್‌ಎಸ್‌ಎಂ ನಗರದಂತಹ ತಗ್ಗು ಪ್ರದೇಶಗಳಲ್ಲಿ ಮನೆಗಳ ಒಳಗೆ ನೀರು ಹರಿಯಿತು. ಒಳಚರಂಡಿಗಳು ತುಂಬಿ ಹರಿಯುತ್ತಿದ್ದಂತೆ ಕೆಲವು ಐಷಾರಾಮಿ ಕಾಲೋನಿಗಳಲ್ಲಿನ ನೆಲಮಹಡಿ ಮನೆಗಳಿಗೂ ನೀರು ನುಗ್ಗಿತ್ತು.

ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಬೆಳೆಗಳು ಮತ್ತು ಆಸ್ತಿಗಳಿಗೆ ಸಾಕಷ್ಟು ಹಾನಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com