ಹೈಕೋರ್ಟ್
ರಾಜ್ಯ
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನಾಲ್ವರು ಅಡ್ವೊಕೇಟ್ ಗಳಿಗೆ ಬಡ್ತಿ: ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮತಿ
ನಾಲ್ಕು ಮಂದಿ ಅಡ್ವೊಕೇಟ್ ಗಳನ್ನು ಹೈಕೋರ್ಟ್ ನ ನ್ಯಾಯಾಧೀಶರಾಗಿ ಬಡ್ತಿ ನೀಡಿ ನೇಮಕಾತಿ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆ ನೀಡಿದೆ.
ಬೆಂಗಳೂರು: ನಾಲ್ಕು ಮಂದಿ ಅಡ್ವೊಕೇಟ್ ಗಳನ್ನು ಹೈಕೋರ್ಟ್ ನ ನ್ಯಾಯಾಧೀಶರಾಗಿ ಬಡ್ತಿ ನೀಡಿ ನೇಮಕಾತಿ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆ ನೀಡಿದೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾಗಿ ನೇಮಕಾತಿ ಮಾಡಲು ಪ್ರಸ್ತಾವನೆ ಸಲ್ಲಿಸಿರುವ ಅಡ್ವೊಕೇಟ್ ಗಳ ಹೆಸರು: ಎ ಆರ್ ಹೆಗ್ಡೆ, ಸಿಎಂ ಪೂನಚ, ಎಸ್ ರಾಚಯ್ಯ ಮತ್ತು ಕೆ ಎಸ್ ಹೇಮಲೇಖ. ಮೊನ್ನೆ 6ನೇ ತಾರೀಖಿನಂದು ನಡೆದ ಸಭೆಯಲ್ಲಿ ಈ ಅಡ್ವೊಕೇಟ್ ಗಳನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡಿ ನೇಮಕಾತಿ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಒಪ್ಪಿಗೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ