ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಸಿಎಂ ಬೊಮ್ಮಾಯಿ!

ಗರದ ಅರಮನೆ ಮೈದಾನದಲ್ಲಿ ಸೋಮವಾರ ನಡೆಯಲಿರುವ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರ ಮತ್ತು ಮಂಗಳವಾರ ನಡೆಯಲಿರುವ ಕೈಗಾರಿಕಾ ಅದಾಲತ್‌ನ ಸಿದ್ಧತೆಗಳನ್ನು ಭಾನುವಾರ ಪರಿಶೀಲಿಸಿದರು.
ಪರಿಶೀಲನೆ ನಡೆಸುತ್ತಿರುವ ಮುರುಗೇಶ್ ನಿರಾಣಿ
ಪರಿಶೀಲನೆ ನಡೆಸುತ್ತಿರುವ ಮುರುಗೇಶ್ ನಿರಾಣಿ
Updated on

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಸೋಮವಾರ ನಡೆಯಲಿರುವ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರ ಮತ್ತು ಮಂಗಳವಾರ ನಡೆಯಲಿರುವ ಕೈಗಾರಿಕಾ ಅದಾಲತ್‌ನ ಸಿದ್ಧತೆಗಳನ್ನು ಭಾನುವಾರ ಪರಿಶೀಲಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಾಗಾರ ಉದ್ಘಾಟಿಸುವರು. ಕಾರ್ಯಾಗಾರದಲ್ಲಿ 10,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ 4,800 ಮಂದಿ ನೋಂದಣಿ ಮಾಡಿಸಿದ್ದಾರೆ.

ಯಶಸ್ವಿ ಉದ್ಯಮಿಗಳು ತಮ್ಮಅನುಭವವನ್ನು ವಿದ್ಯಾರ್ಥಿಗಳು ಹಾಗೂ ಉದಯೋನ್ಮುಖ ಉದ್ಯಮಿಗಳೊಂದಿಗೆ ಬೆಂಗಳೂರು ಅರಮನೆಯಲ್ಲಿ ನಾಳೆ ಹಂಚಿಕೊಳ್ಳಲಿದ್ದಾರೆ. ದೇಶದಲ್ಲಿ ಮುಂಚೂಣಿಯಲ್ಲಿರುವ ಯುವ ಉದ್ಯಮಿಗಳು ತಮ್ಮಉದ್ಯಮದಲ್ಲಿ ಉತ್ತಮ ಯಶಸ್ಸನ್ನು ಸಾಸಿದ್ದಾರೆ. ಅವರ ಯಶಸ್ವಿ ಯಶೋಗಾಧೆಯನ್ನು ಯುವ ಉದ್ಯಮಿಗಳಿಗೆ ಧಾರೆ ಎರೆಯಲಿದ್ದಾರೆ.

ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರಾದ ಜೆರೋಧಾ ಕಂಪನಿಯ ಸಂಸ್ಥಾಪಕರು ಮತ್ತು ಸಿಇಒ, ನಿತಿನ್ ಕಾಮತ್, ಕೂ ಆಪ್, ಸಹ ಸ್ಥಾಪಕರು ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ, ನೋಪೋ ನ್ಯಾನೊ ತಂತ್ರಜ್ಞಾನ ಸಿಇಒ ಗಧಾದರ್ ರೆಡ್ಡಿ, ಕ್ರೆಡಿಟ್ ಉಡಾನ್ ಕ್ಯಾಪಿಟಲ್ ಮುಖ್ಯಸ್ಥ ಚೈತನ್ಯ ಅಡಪ, ಬೌನ್ಸ್ ಸಹ ಸಂಸ್ಥಾಪಕ ಸಿಇಒ ವಿವೇಕಾನಂದ ಹಳ್ಳೇಕೆರೆ, ಗೀತಾ ಮಂಜುನಾಥ್, ನಿರಾಮೈ ಹೆಲ್ತ್ ಅನಾಲಿಟಿಕ್ಸ್, ಸಹ-ಸಂಸ್ಥಾಪಕರು, ಸಾಮೂಹಿಕ ಉದ್ಯಮಶೀಲತೆಗಾಗಿ ಜಾಗತಿಕ ಒಕ್ಕೂಟದ ಮದನ್ ಪದಕಿ, ಫಿಸ್ಡಮ್, ಸಹ-ಸಂಸ್ಥಾಪಕ ಮತ್ತು ಸಿಇಒಸುಬ್ರಹ್ಮಣ್ಯ ಎಸ್‍ವಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಎಂಡಿ ಮತ್ತು ಸಿಇಒ, ರಾಜಕಿರಣ್ ರೈ, ಸೇರಿದಂತೆ ಇತರರು ನಾಳೆ ಉದ್ಯಮಿಯಾಗು, ಉದ್ಯೋಗ ನೀಡು ಒಂದು ದಿನದ ಉದ್ದಿಮೆದಾರರ ಕಾರ್ಯಾಗಾರದಲ್ಲಿ ಭಾಗವಹಿಸುತ್ತಾರೆ.

ಇವರೆಲ್ಲರೂ ಸುಮಾರು 5000 ಯುವಕರು ಮತ್ತು ಉದಯೋನ್ಮುಖ ಉದ್ಯಮಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಮೂಲಕ ಉದ್ಯಮದಲ್ಲಿರುವ ಅವಕಾಶ ಬಗ್ಗೆ ಬೆಳಕು ಚೆಲ್ಲುವರು ಎಂದು ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com