ಉಪ ಚುನಾವಣೆ ನಂತರ ಬಿಜೆಪಿಯಿಂದ ಡಿಜಿಟಲ್ ಮಾಸ ಪತ್ರಿಕೆ 'ಕಮಲ ಕಲ್ಪ' ಆರಂಭ

ಎಲ್ಲಾ ಜಿಲ್ಲೆಗಳಲ್ಲು ತನ್ನ ಹೆಜ್ಜೆಗುರುತನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮಾಸಿಕ ಡಿಜಿಟಲ್ ನಿಯತಕಾಲಿಕೆಯನ್ನು ನವೆಂಬರ್ ಮೊದಲ ವಾರದಲ್ಲಿ ಆರಂಭಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಲ್ಲಾ ಜಿಲ್ಲೆಗಳಲ್ಲು ತನ್ನ ಹೆಜ್ಜೆಗುರುತನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮಾಸಿಕ ಡಿಜಿಟಲ್ ನಿಯತಕಾಲಿಕೆಯನ್ನು ನವೆಂಬರ್ ಮೊದಲ ವಾರದಲ್ಲಿ ಆರಂಭಿಸಲಿದೆ.

ಉಪಚುನಾವಣೆಯ ನಂತರ ತುಮಕೂರಿನ ಮೂಲಕ ‘ಕಮಲ ಕಲ್ಪ’ ಎಂಬ ಆವೃತ್ತಿಯನ್ನು ಆರಂಭಿಸಲಿದೆ. ಪಕ್ಷವು ಈಗಾಗಲೇ ಮಾಸಿಕ ನಿಯತಕಾಲಿಕೆಯನ್ನು ಹೊಂದಿದೆ, ಡಿಜಿಟಲ್ ಮತ್ತು ಮುದ್ರಣ ಸ್ವರೂಪಗಳಲ್ಲಿ, ಚಟುವಟಿಕೆಗಳಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ಹೊಸ ಕ್ರಮವನ್ನು ಕೈಗೊಂಡಿದೆ. ನಮ್ಮ ಕೆಲಸಗಾರರು ಹಗಲಿರುಳೂ ಕೆಲಸ ಮಾಡುತ್ತಾರೆ ಮತ್ತು ಸರಣಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಜಿಲ್ಲೆಗೆ ಮೀಸಲಾಗಿರುವ 24 ಪುಟಗಳ ವೆಬ್ ಪೋರ್ಟಲ್ ಈ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ ಎಂದು ಬಿಜೆಪಿಯ ಪ್ರಕಾಶನ ವಿಭಾಗದ ಸಂಚಾಲಕ ಮತ್ತು ರಾಜ್ಯಮಟ್ಟದ ಪಕ್ಷದ ನಿಯತಕಾಲಿಕ 'ಧ್ಯೇಯ ಕಮಲ'ದ ಸಂಪಾದಕ ಬಿದಾರೆ ಪ್ರಕಾಶ್ ಮಾಹಿತಿ ನೀಡಿದರು.

ಸರ್ಕಾರದ ವಿವಿಧ ಯೋಜನೆಗಳ ಕುರಿತು ಹಾಗೂ ಸರ್ಕಾರವು ಮಾಡಿರುವ ಪ್ರಗತಿಯ ಬಗ್ಗೆ ಈ ಪೋರ್ಟಲ್ ಮಾಹಿತಿಯನ್ನು ಒದಗಿಸುತ್ತದೆ. ಈ ಕ್ರಮವು ಅವರ ಚಟುವಟಿಕೆಗಳನ್ನು ಏಕೀಕೃತ ರೀತಿಯಲ್ಲಿ ದಾಖಲಿಸಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದರು. ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರು  ಇದಕ್ಕೆ ಗೌರವ ಸಂಪಾದಕರಾಗಿರುತ್ತಾರೆ.

ಮಾಜಿ ಶಾಸಕ ಬಿ ಸುರೇಶ್ ಗೌಡ ರಾಜೀನಾಮೆ ನಂತರ ಖಾಲಿಯಾದ ಸ್ಥಾನದಲ್ಲಿ ಹೆಬ್ಬಾಕ ರವಿಶಂಕರ್ ಅವರನ್ನು ಗೌರವ ಸಂಪಾದಕರನ್ನಾಗಿ ಮಾಡಲಾಗಿದೆ. ತುಮಕೂರು ನಂತರ, ಇದೇ ರೀತಿಯ ನಿಯತಕಾಲಿಕೆಗಳನ್ನು ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡಕ್ಕೆ ಯೋಜಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com