ಬೆಂಗಳೂರು ಆಸ್ಪತ್ರೆಗಳಲ್ಲಿ ಬ್ರಾಂಕೈಟಿಸ್ ಪ್ರಕರಣಗಳು ಹೆಚ್ಚಳ; ಮುನ್ನೆಚ್ಚರಿಕೆ ವಹಿಸುವುದು ಹೇಗೆ?: ಇಲ್ಲಿದೆ ಮಾಹಿತಿ

ನಾವು ಕೋವಿಡ್-19 ಮೂರನೇ ಅಲೆ ಬಾರದಂತೆ ಎಚ್ಚರ ವಹಿಸುತ್ತಿದ್ದರೆ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬ್ರಾಂಕೈಟಿಸ್ ಪ್ರಕರಣಗಳ ವರದಿ ಹೆಚ್ಚಳವಾಗಿದೆ.
ಬ್ರಾಂಕೈಟಿಸ್
ಬ್ರಾಂಕೈಟಿಸ್

ಬೆಂಗಳೂರು: ನಾವು ಕೋವಿಡ್-19 ಮೂರನೇ ಅಲೆ ಬಾರದಂತೆ ಎಚ್ಚರ ವಹಿಸುತ್ತಿದ್ದರೆ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬ್ರಾಂಕೈಟಿಸ್ ಪ್ರಕರಣಗಳ ವರದಿ ಹೆಚ್ಚಳವಾಗಿದೆ.

ಎರಡು ತಿಂಗಳಿನಿಂದ 2 ವರ್ಷಗಳವರೆಗಿನ ಮಕ್ಕಳಲ್ಲಿ ಬ್ರಾಂಕೈಟಿಸ್ ಪ್ರಕರಣಗಳು ಕಂಡುಬರುತ್ತಿದ್ದು, ಐಸಿಯುಗಳು ಭರ್ತಿಯಾಗಿವೆ. ವೈರಾಣುಗಳ ಸೋಂಕಿನಿಂದ ಮಕ್ಕಳಲ್ಲಿ ವೇಗ ಗತಿಯ ಉಸಿರಾಟ, ನ್ಯುಮೋನಿಯಾದಂತಹ ಲಕ್ಷಣಗಳು ಕಂಡುಬರುತ್ತಿದ್ದು,  ನಿರ್ದಿಷ್ಟ ಚಿಕಿತ್ಸೆ ಇಲ್ಲ ಆದರೆ ವೆಂಟಿಲೇಟರ್ ಅಥವಾ ಐಸಿಯುಗೆ ದಾಖಲಿಸಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.

ಈ ವಯಸ್ಸಿನ ಮಕ್ಕಳಿಗೆ ಪರಿಣಾಮಕಾರಿಯಾಗಿ ಮಾಸ್ಕ್ ಧರಿಸುವುದು ಕಷ್ಟಸಾಧ್ಯವಾಗಿದ್ದು, ತತ್ಪರಿಣಾಮವಾಗಿ ಕೋವಿಡ್-19 ಅಷ್ಟೇ ಅಲ್ಲದೇ ಇತರ ಸೋಂಕುಗಳನ್ನು ತಡೆಗಟ್ಟುವುದೂ ಕಷ್ಟವಾಗುತ್ತಿದೆ. ನಾನ್-ಇನ್ವಾಸೀವ್ ವೆಂಟಿಲೇಟರ್ ಅಥವಾ ಹೆಚ್ ಎಫ್ ಎನ್ ಸಿ ಗಳ ಅಗತ್ಯ ಎದುರಿಸುತ್ತಿರುವ ಮಕ್ಕಳಿಂದ ನಮ್ಮ ಐಸಿಯುಗಳು ತುಂಬಿವೆ. ಪೋಷಕರು ಮಕ್ಕಳಲ್ಲಿ ಕಂಡುಬರುವ, ಸಾಮಾನ್ಯ ಕೆಮ್ಮು-ಶೀತದ ಲಕ್ಷಣಗಳು ಹಾಗೂ ಬ್ರಾಂಕೈಟಿಸ್ ಲಕ್ಷಗಳ ಬಗ್ಗೆ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎಂದು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಡಾ.ಸುಪ್ರಜಾ ಚಂದ್ರಶೇಖರ್ ಹೇಳಿದ್ದಾರೆ.

ಒಂದು ವರ್ಷ ಅಥವಾ ಒಂದಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ನಿಮಿಷವೊಂದಕ್ಕೆ 60 ಬಾರಿಗಿಂತಲೂ ಹೆಚ್ಚು ಉಸಿರಾಟ ಕಂಡುಬಂದಲ್ಲಿ ಎಚ್ಚರ ವಹಿಸಬೇಕು. 5 ವರ್ಷಗಳ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ 40 ಕ್ಕಿಂತ ಹೆಚ್ಚು ಬಾರಿ ನಿಮಿಷಕ್ಕೆ ಉಸಿರಾಟ ಕಂಡುಬಂದಲ್ಲಿ ಎಚ್ಚರವಹಿಸಬೇಕು 5 ವರ್ಷಗಳ ಮೇಲ್ಪಟ್ಟ ಮಕ್ಕಳಲ್ಲಿ ನಿಮಿಷವೊಂದಕ್ಕೆ 30 ಕ್ಕಿಂತಲೂ ಹೆಚ್ಚು ಬಾರಿ ಉಸಿರಾಟ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.

ಮಕ್ಕಳಲ್ಲಿ ಮೂರು ದಿನಗಳ ಬಳಿಕವೂ ಜ್ವರ ಮುಂದುವರೆದು, ದ್ರವ ಆಹಾರಗಳನ್ನು ಸೇವಿಸದೇ, ದಿನಕ್ಕೆ ಎರಡು ಬಾರಿ ವಾಂತಿಯಾಗುತ್ತಿದ್ದರೆ ಇವು ಎಚ್ಚರಿಕೆಯ ಗಂಟೆಗಳಾಗಿವೆ, ಈ ಲಕ್ಷಣಗಳಿದ್ದ ಹೊರತಾಗಿಯೂ ಮನೆಯಲ್ಲಿಯೇ ನೆಬುಲೈಸೇಷನ್ ತೆಗೆದುಕೊಳ್ಳುವುದು ಸೂಕ್ತವಲ್ಲ ಎನ್ನುತ್ತಾರೆ ವೈದ್ಯರು

ಮಕ್ಕಳಲ್ಲಿ ಬ್ರಾಂಕೈಟಿಸ್ (ಶ್ವಾಸಕೋಶದ ಉರಿಯೂತ)ದ ಪ್ರಕರಣಗಳಿಂದ ಐಸಿಯುಗಳು ಭರ್ತಿಯಾಗಿವೆ. ಇದು ಸಾಮಾನ್ಯವಾಗಿ ಕಂಡುಬರುವ ವೈರಾಣು ಸೋಂಕಾಗಿದೆ. ಇದು ಚಳಿಗಾಲದ ಋತುವಿನಲ್ಲಿ ಹೆಚ್ಚು ಕಂಡುವರುವ ಸೋಂಕಾಗಿದ್ದು, ಈಗ ಸಾಂಕ್ರಾಮಿಕದ ಕಾರಣದಿಂದಾಗಿ ಮಕ್ಕಳಿಗೆ ನಿಯಮಿತವಾಗಿ ಕೊಡಿಸಲಾಗುವ ಲಸಿಕೆಗಳು ಮುಂದೂಡಲ್ಪಡುತ್ತಿರುವುದೂ ಬ್ರಾಂಕೈಟಿಸ್ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಪೀಡಿಯಾಟ್ರಿಕ್ ಇಂಟರ್ವೆನ್ಶನಲ್ ಪಲ್ಮನಾಲಜಿ ಮತ್ತು ಸ್ಲೀಪ್ ಮೆಡಿಸಿನ್ ವಿಭಾಗದ ಡಾ.ಶ್ರೀಕಾಂತ್ ಜೆ.ಟಿ

ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿಯೂ ಮಧ್ಯರಾತ್ರಿಯಲ್ಲಿ ಮಕ್ಕಳನ್ನು ಚಿಕಿತ್ಸೆಗಾಗಿ ಐಸಿಯುಗಳಿಗೆ ದಾಖಲಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com