![ಪರಿಸರವಾದಿ ಗಿರೀಶ್ ಮೇಲೆ ಹಲ್ಲೆ](http://media.assettype.com/kannadaprabha%2Fimport%2F2021%2F9%2F3%2Foriginal%2Fgirish-new.jpg?w=480&auto=format%2Ccompress&fit=max)
ಚಿಕ್ಕಮಗಳೂರು: ಪರಿಸರವಾದಿ ಡಿ.ವಿ. ಗಿರೀಶ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕಂಬಿ ಹಳ್ಳಿ ಗ್ರಾಮದಲ್ಲಿ ಗಿರೀಶ್ ಮೇಲೆ ಹಲ್ಲೆ ನಡೆಸಲಾಗಿತ್ತು. ಆಗಸ್ಟ್ 30 ರಂದು ಡಿ.ವಿ. ಗಿರೀಶ್ ಮತ್ತು ತಂಡದ ಮೇಲೆ ಹಲ್ಲೆ ನಡೆಸಿದ್ದರು.
ಕಿಡಿಗೇಡಿಗಳು ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ 3 ತಂಡಗಳನ್ನು ರಚನೆ ಮಾಡಿದ್ದರು. ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು ಇದೀಗ ಬಂಧಿಸಿದ್ದಾರೆ. ಈಮಾಹಿತಿಯನ್ನು ಚಿಕ್ಕಮಗಳೂರು ಎಸ್ ಪಿ ಟ್ವೀಟ್ ಮಾಡಿದ್ದಾರೆ.
ಆರೋಪಿಗಳೆಲ್ಲರೂ ಶಾಂತವೇರಿ, ಕಂಬಿ ಹಳ್ಳಿ, ಹಾಗೂ ಹೊಸಪೇಟೆ ನಿವಾಸಿಗಳಾಗಿದ್ದಾರೆ. ಕೇವಲ 48 ಗಂಟೆಗಳಲ್ಲಿ ಈ ಮೂರು ತಂಡದ ಸಿಬ್ಬಂದಿ, ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳು ಮಡಿಕೇರಿ, ಹಾಸನ ಹಾಗೂ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆ ಕಾರ್ಯವನ್ನು ಆದಷ್ಟು ಬೇಗ ಮಾಡಿದ ಎಲ್ಲಾ ಸಿಬ್ಬಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ನಗದು ಬಹುಮಾನವನ್ನು ಸಹ ಘೋಷಣೆ ಮಾಡಿದ್ದಾರೆ.
Advertisement