ರಾಷ್ಟ್ರೀಯ ಶಿಕ್ಷಣ ನೀತಿ-2020: ಕರ್ನಾಟಕದಲ್ಲಿ ಜಾರಿಗೆ ತರುತ್ತಿರುವ ಮೊದಲ ಕಾಲೇಜು 'ಮಲ್ಟಿಡಿಸಿಪ್ಲಿನರಿ ಕಾನ್ಸ್ಟಿಟ್ಯುಂಟ್ ಕಾಲೇಜ್ ಆಫ್ ವುಮನ್' 

ರಾಷ್ಟ್ರೀಯ ಶೈಕ್ಷಣಿಕ ನೀತಿ -2020ರ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರುತ್ತಿರುವ ಮೊದಲ ಕಾಲೇಜು 'ಮಲ್ಟಿಡಿಸಿಪ್ಲಿನರಿ ಕಾನ್ಸ್ಟಿಟ್ಯುಂಟ್ ಕಾಲೇಜ್ ಆಫ್ ವುಮನ್' ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಷ್ಟ್ರೀಯ ಶೈಕ್ಷಣಿಕ ನೀತಿ -2020ರ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರುತ್ತಿರುವ ಮೊದಲ ಕಾಲೇಜು 'ಮಲ್ಟಿಡಿಸಿಪ್ಲಿನರಿ ಕಾನ್ಸ್ಟಿಟ್ಯುಂಟ್ ಕಾಲೇಜ್ ಆಫ್ ವುಮನ್' ಆಗಿದೆ.

ಈ ಕಾಲೇಜು ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ 4ನೇ ಕ್ರಾಸ್ ನಲ್ಲಿದ್ದು ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಅಡಿಯಲ್ಲಿ ಇದೆ. ಈ ಸಂಸ್ಥೆಯ ಮೂಲಕ ತನ್ನ ಮೊದಲ ಘಟಕ ಕಾಲೇಜನ್ನು ಪ್ರಾರಂಭಿಸುತ್ತದೆ.

4 ಮಹಡಿಯನ್ನು ಹೊಂದಿರುವ ಕಾಲೇಜು ಕಟ್ಟಡ ಮೂರು ಎಕರೆಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು ಪ್ರಾಥಮಿಕ, ಹೈಸ್ಕೂಲ್ ಮತ್ತು ಪಿಯು ಕಾಲೇಜನ್ನು ಒಳಗೊಂಡಿದೆ. 

ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಉಪ ಕುಲಪತಿ ಲಿಂಗರಾಜು ಗಾಂಧಿ, ಹೊಸ ಶಿಕ್ಷಣ ನೀತಿಯಡಿ ಸಂಪೂರ್ಣವಾಗಿ ನಡೆದುಕೊಂಡು ಹೋಗುವುದು ಮಾತ್ರವಲ್ಲದೆ ಈ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿಯವರೆಗೆ ಓದುವ, ಗ್ರಾಮೀಣ ಮತ್ತು ಹಿಂದುಳಿದ ಹಿನ್ನೆಲೆಯಿಂದ ಬಂದ ಎರಡೂವರೆ ಸಾವಿರ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸುತ್ತದೆ.

ಪ್ರತಿಯೊಂದು ವಿಷಯಕ್ಕೆ ಸುಮಾರು 60 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಮುಖ್ಯ ಮತ್ತು ಮೈನರ್ ವಿಷಯಗಳಿಗೆ ವಿದ್ಯಾರ್ಥಿಗಳು ತಮ್ಮಿಷ್ಟದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರಸ್ತುತ ವಿದ್ಯಾರ್ಥಿಗಳು ಬಿ.ಎ, ಬಿ.ಎಸ್ಸಿ ಅಥವಾ ಬಿ.ಕಾಂ ಪದವಿಗೆ ದಾಖಲಾತಿ ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ಕಾಂಬಿನೇಷನ್ ಗಳನ್ನು ಆರಿಸಿಕೊಳ್ಳಲು ಕಾಲೇಜಿನ ಬೋಧಕ ಸಿಬ್ಬಂದಿ ಸಹಾಯ ಮಾಡುತ್ತಾರೆ ಎಂದು ಕೂಡ ಗಾಂಧಿ ವಿವರಿಸಿದರು.

ಕಾಲೇಜಿನಲ್ಲಿ 11 ಜಾಗತಿಕ ವಿಷಯಗಳನ್ನು ಬೋಧಿಸಲಾಗುತ್ತದೆ. ಆನಿಮೇಷನ್, ಗ್ರಾಫಿಕ್ ಡಿಸೈನ್ ಮತ್ತು ಸ್ಪೋರ್ಟ್ಸ್ ಡಿಸೈನಿಂಗ್ ನಂತರ ವಿಷುವಲ್ ಆರ್ಟ್ಸ್ ಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ನೀಡುತ್ತದೆ. ಮೇಜರ್ ಮತ್ತು ಮೈನರ್ ಒಂದು ವಿಭಾಗದಿಂದ ಮತ್ತು ಐಚ್ಛಿಕಗಳು ಬೇರೆ ಯಾವುದಾದರಿಂದಲೂ ಆಗಿರಬಹುದು.

ಪ್ರಸ್ತುತ ಕಾಲೇಜಿನಲ್ಲಿ ಉಪನ್ಯಾಸಕರನ್ನು ನೇಮಕಾತಿ ಮಾಡುವುದಿಲ್ಲ, ಹೀಗಾಗಿ ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿ ಸ್ನಾತಕೋತ್ತರ ಕೋರ್ಸ್ ಗಳಿಗೆ ಅನುಮೋದನಾ ಹುದ್ದೆಗಳಿಗೆ ಬದಲಿಯಾಗಿ ತಾತ್ಕಾಲಿಕ ಬೋಧಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ.

ಕಾಲೇಜುಗಳ ನಿರ್ವಹಣೆಗೆ ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುತ್ತದೆ. ಮೂಲಭೂತ ಸೌಕರ್ಯ ಮತ್ತು ಸಿಬ್ಬಂದಿಗೆ ಸರ್ಕಾರದಿಂದ ಧನಸಹಾಯ ಕೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com