ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಫಲಸ್ಥಡ್ಕದಲ್ಲಿ ಮಂಗಳವಾರ ಎಮ್ಮೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಮಹದೇವ ಭಟ್ ಎಂಬುವರಿಗೆ ಸೇರಿದ 10 ವರ್ಷದ ಎಮ್ಮೆ ಹತ್ತಿರದ ಹೊಲದಲ್ಲಿ ಮೇಯುತ್ತಿತ್ತು. ರಾತ್ರಿ ವಾಪಸ್ ಎಮ್ಮೆ ಬಾರದಿದ್ದಾಗ ಮನೆಯವರು ಹುಡುಕಲು ಹೊರಟಾಗ ಮಂಗಳವಾರ ಬೆಳಿಗ್ಗೆ ಫಲಸ್ಥಡ್ಕದಲ್ಲಿ ಅದರ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಮೇಲೆ ಬುಲೆಟ್ ಗುರುತುಗಳಿದ್ದು, ಇದು ಬೇಟೆಗಾರರಿಗೆ ಬಲಿಯಾಗಿರಬಹುದು ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ. ಈ ಮಧ್ಯೆ ಧರ್ಮಸ್ಥಳ ಪೊಲೀಸರಿಗೆ ದೂರು ದಾಖಲಾಗಿದೆ. ಸ್ಥಳೀಯ ಪೊಲೀಸರೊಂದಿಗೆ ಉಪ್ಪಿನಂಗಡಿ ಅರಣ್ಯ ಅಧಿಕಾರಿಗಳು ಮತ್ತು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement