ನವೆಂಬರ್‌ 1ಕ್ಕೆ ‘ಶುಗರ್‌ ಡ್ಯಾಡಿ’ ಪುಸ್ತಕ ಬಿಡುಗಡೆ: ಪ್ರಶಾಂತ್‌ ಸಂಬರಗಿ

ನಶೆಯೆಂದರೆ ಎಂಬ ವಿಡಿಯೋ ಹಾಡು ಮತ್ತು ‘ಶುಗರ್‌ ಡ್ಯಾಡಿ’ ಪುಸ್ತಕ ನವೆಂಬರ್‌ 1ರಂದು ಬಿಡುಗಡೆಯಾಗಲಿದ್ದು, ಆ ಕಾರ್ಯಕ್ರಮದಲ್ಲಿ ಮಾದಕ ಜಾಲಕ್ಕೆ ಒಳಗಾಗಿ ತೊಂದರೆ...
ಪ್ರಶಾಂತ್ ಸಂಬರಗಿ
ಪ್ರಶಾಂತ್ ಸಂಬರಗಿ

ಬೆಂಗಳೂರು: ನಶೆಯೆಂದರೆ ಎಂಬ ವಿಡಿಯೋ ಹಾಡು ಮತ್ತು ‘ಶುಗರ್‌ ಡ್ಯಾಡಿ’ ಪುಸ್ತಕ ನವೆಂಬರ್‌ 1ರಂದು ಬಿಡುಗಡೆಯಾಗಲಿದ್ದು, ಆ ಕಾರ್ಯಕ್ರಮದಲ್ಲಿ ಮಾದಕ ಜಾಲಕ್ಕೆ ಒಳಗಾಗಿ ತೊಂದರೆ ಅನುಭವಿಸಿದವರು, ಆ ಜಾಲದಿಂದ ಮುಕ್ತರಾದವರು ಇರಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ಅವರು ಹೇಳಿದ್ದಾರೆ.

ಮಾದಕ ಜಾಲ ಪ್ರಕರಣಗಳನ್ನು ಪೊಲೀಸರು ಮತ್ತೆ ತೆರೆದು ತೀವ್ರ ತನಿಖೆಗೆ ಒಳಪಡಿಸಬೇಕು. ಶೀಘ್ರವೇ ಈ ಪ್ರಕರಣದ ಹಿಂದಿರುವ ಮಾಸ್ಟರ್‌ ಮೈಂಡ್‌ ಒಬ್ಬರು ಹೊರ ಬರಲಿದ್ದಾರೆ. ಅವರು ಸಿನಿಮಾ ನಿರ್ಮಾಪಕ, ವಿತರಕ, ರಾಜಕಾರಣಿಯೂ ಆಗಿದ್ದಾರೆ ಎಂದು ಅವರು ಹೊಸ ಬಾಂಬ್ ಸಿಡಿಸಿದರು.

ಡ್ರಗ್‌ ಸಂಬಂಧಿಸಿ ಯಾವ ಘಟನೆಗಳು ಸಾಕ್ಷಿಗಳಿಲ್ಲದೇ ಕೈತಪ್ಪಿವೆ ಎಂಬುದನ್ನು ಬರೆದಿದ್ದೇನೆ. ಫಾರ್ಮ್‌ಹೌಸ್‌ ಕಥೆಯಿಂದ ಹಿಡಿದು, ಅಪ್ಪನನ್ನು ಅಪಹರಿಸಿದ ಪ್ರಕರಣದವರೆಗೂ ‘ಶುಗರ್‌ ಡ್ಯಾಡಿ’ಯಲ್ಲಿ ಬರೆದಿದ್ದೇನೆ. ಶುಗರ್‌ ಡ್ಯಾಡಿ ಯಾರು ಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ ಎಂದರು.

ನಾಗೇಂದ್ರ ಪ್ರಸಾದ್ ಬರೆದಿರುವ ನಶೆ ನಶೆ ಹಾಡನ್ನು ಬಿಡುಗಡೆ ಮಾಡಲಾಗುವುದು ಮತ್ತು ಶೀಘ್ರದಲ್ಲೇ 28 ಸೆಕೆಂಡ್​ಗಳ ಆಡಿಯೋ ಬಾಂಬ್​ ಬಿಡುಗಡೆ ಮಾಡಿ, ರಾಜಕೀಯ ವ್ಯಕ್ತಿಯ ಪ್ರಭಾವ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಡ್ರಕ್ಸ್ ಪ್ರಕರಣವನ್ನು ಸಾಕ್ಷಿ ಸಮೇತ ದಾಖಲೆ ರಿಲೀಸ್​ ಮಾಡಲಾಗುವುದು. ಅನುಶ್ರೀಗೆ ಬೆಂಗಳೂರಿನ ಮನೆ, ಮಂಗಳೂರಿನ ಮನೆ ಹೇಗೆ ಬಂತು? 12 ಕೋಟಿಯ ಮನೆ ಹೇಗೆ ಬಂತು ಎಂದು ಅವರು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com