3ನೇ ಅಲೆ ತೀವ್ರತೆ ಕಡಿಮೆಯಿರಬಹುದು, ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗಿಸುವುದು ಅತ್ಯಗತ್ಯ: ತಜ್ಞರು

ಸೆಪ್ಟೆಂಬರ್ 11ರಿಂದ ಅಕ್ಟೋಬರ್ 13ರವರೆಗೆ 30 ದಿನಗಳ ವಿಶ್ಲೇಷಣೆಯನ್ನು ತೆಗೆದುಕೊಂಡರೆ ಕೋವಿಡ್ -19 ಕರ್ನಾಟಕದಲ್ಲಿ 24 ಸಾವಿರದ 869 ಸೋಂಕಿತ ಪ್ರಕರಣಗಳು ಮತ್ತು 228 ಸಾವು ಸಂಭವಿಸಬಹುದು ಎಂದು ತೋರಿಸುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸೆಪ್ಟೆಂಬರ್ 11ರಿಂದ ಅಕ್ಟೋಬರ್ 13ರವರೆಗೆ 30 ದಿನಗಳ ವಿಶ್ಲೇಷಣೆಯನ್ನು ತೆಗೆದುಕೊಂಡರೆ ಕೋವಿಡ್-19 ಕರ್ನಾಟಕದಲ್ಲಿ 24 ಸಾವಿರದ 869 ಸೋಂಕಿತ ಪ್ರಕರಣಗಳು ಮತ್ತು 228 ಸಾವು ಸಂಭವಿಸಬಹುದು ಎಂದು ತೋರಿಸುತ್ತದೆ.

ಕೊರೋನಾ ಸೋಂಕಿನ ಗರಿಷ್ಠ ಏರಿಕೆ ಅವಧಿಗೆ ಹೋಲಿಸಿದರೆ ಈ ಸಂಖ್ಯೆ ಅಷ್ಟು ಹೆಚ್ಚಿಲ್ಲವೆಂದು ತೋರುತ್ತದೆಯಾದರೂ, ಅಕ್ಟೋಬರ್ ಅಂತ್ಯದ ಮೊದಲು ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ 10 ಸಾವಿರಕ್ಕಿಂತ ಕಡಿಮೆ ಮಾಡುವತ್ತ ಗಮನ ಹರಿಸಬೇಕಾಗಿದೆ ಎಂದು ಹೇಳುತ್ತದೆ.

ಜೀವನ್ ರಕ್ಷಾ ಸಂಸ್ಥೆ ನಡೆಸಿದ ಈ ವಿಶ್ಲೇಷಣೆಯು ಸೆಪ್ಟೆಂಬರ್ 11 ರ ಹೊತ್ತಿಗೆ ರಾಜ್ಯದಲ್ಲಿ ಸಕ್ರಿಯ ಕೊರೋನಾ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ 29 ಲಕ್ಷದ 60 ಸಾವಿರದ 131ರಷ್ಟಿದ್ದರೆ ಅಕ್ಟೋಬರ್ 13 ರ ವೇಳೆಗೆ 29 ಲಕ್ಷದ 85 ಸಾವಿರಕ್ಕೆ ಏರಿಕೆಯಾಗಲಿದೆ, ಇದೇ ಅವಧಿಯಲ್ಲಿ ಸಾವುಗಳು 37 ಸಾವಿರದ 472 ರಿಂದ 37 ಸಾವಿರದ 700 ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ.

ರಾಜ್ಯದ ಸಕ್ರಿಯ ಪ್ರಕರಣಗಳು ಇತ್ತೀಚೆಗೆ ಗಣನೀಯವಾಗಿ ಇಳಿದಿವೆ. ಜೂನ್ 13 ರಂದು, ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ 1 ಲಕ್ಷದ 80 ಸಾವಿರದ 835 ಆಗಿದ್ದರೆ, ಜುಲೈ 13ರ ಹೊತ್ತಿಗೆ, 34 ಸಾವಿರದ 234 ಪ್ರಕರಣಗಳಿಗೆ ಇಳಿಕೆಯಾಗಿದೆ, ಆಗಸ್ಟ್ 13 ರಂದು 22 ಸಾವಿರದ 703 ಸಕ್ರಿಯ ಪ್ರಕರಣಗಳು ಮತ್ತು ಸೆಪ್ಟೆಂಬರ್ 13 ರಂದು ಇದು 16 ಸಾವಿರದ 341 ಸಕ್ರಿಯ ಪ್ರಕರಣಗಳಿಗೆ ಇಳಿದಿದೆ. ಆದಾಗ್ಯೂ, ಇನ್ನೊಂದು ತಿಂಗಳಲ್ಲಿ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ 10 ಸಾವಿರಕ್ಕಿಂತ ಕಡಿಮೆಗೆ ಬರಬೇಕೆಂದು ತೋರಿಸುತ್ತದೆ.

ಹಳೆಯ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ ಮನೋಹರ್ ಕೆ ಎನ್, ದೇಶದಲ್ಲಿ ಹೆಚ್ಚುತ್ತಿರುವ ಲಸಿಕೆ ಅಭಿಯಾನದಿಂದಾಗಿ, ಕೊರೋನಾ ಮೂರನೇ ಅಲೆಯು ಮೊದಲ ಅಲೆಗಿಂತ ಕಡಿಮೆ ತೀವ್ರತೆಯನ್ನು ಹೊಂದಿರುವ ಸಾಧ್ಯತೆಯಿದೆ. 3ನೇ ಅಲೆಯು ತುಂಬಾ ನಿಧಾನವಾಗಿ ಮತ್ತು ಕಡಿಮೆಯಾಗಿರಬಹುದು, ಅದರ ಪರಿಣಾಮ ಜನರ ಮೇಲೆ ಕಡಿಮೆಯಾಗಬಹುದು. ಆರೋಗ್ಯ ಮೂಲಸೌಲಭ್ಯ ಹೆಚ್ಚಾಗಿ ಜನರಿಗೆ ಕೊರೋನಾಗೆ ಚಿಕಿತ್ಸೆ ಸೌಲಭ್ಯ ವೇಗವಾಗಿ ಸಿಗುವಂತಾಗಬಹುದು. ಆದರೆ ದೊಡ್ಡ ದೊಡ್ಡ ಸಭೆ-ಸಮಾರಂಭಗಳನ್ನು ನಡೆಸುವ ಬಗ್ಗೆ ಇನ್ನೂ ಕೆಲ ಸಮಯ ಎಚ್ಚರಿಕೆ ಇರಬೇಕು ಎಂದು ಸಂಸ್ಥೆಯ ವಿಶ್ಲೇಷಣೆ ಹೇಳುತ್ತದೆ.

ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ (ಸಿಸಿಎಸ್‌ಟಿ)ನ ಸದಸ್ಯ ಡಾ. ಅನೂಪ್ ಅಮರನಾಥ್, ಸಾಂಕ್ರಾಮಿಕ ರೋಗಶಾಸ್ತ್ರದ ಮೇಲೆ ನಿಗಾ ಇಡಬೇಕು ಎಂದು ಹೇಳುತ್ತಾರೆ. ಇದೀಗ, ಜಿಲ್ಲೆಗಳಲ್ಲಿ ಕೂಡ ಸೋಂಕಿನ ದರ ಕಡಿಮೆಯಾಗುತ್ತಿದೆ. ಅಂದರೆ ಮೂರನೇ ಅಲೆಯ ತೀವ್ರತೆ ಕಡಿಮೆಯಾಗಿದೆ ಎಂದರ್ಥ. ಮುಂದೆ, ಸೋಂಕನ್ನು ನಿಯಂತ್ರಿಸಲು ಹೊಸ ತಳಿಗಳು ಮತ್ತು ಜಿಯೊಮಿಕ್ ಅಧ್ಯಯನವನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳುತ್ತಾರೆ.

ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮೂರನೇ ಅಲೆಯು ಬರಬಹುದು ಎಂದು ಹೇಳಲಾಗುತ್ತಿದ್ದು,  ಸಕ್ರಿಯ ಪ್ರಕರಣಗಳನ್ನು ತಗ್ಗಿಸುವುದು ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಸಕ್ರಿಯ ಕೇಸ್ ಅಧಿಕವಾಗಿದ್ದರೆ, ಹೊಸ ಪ್ರಕರಣಗಳ ಸೇರ್ಪಡೆಗಳನ್ನು ಇನ್ನೂ ನಿರ್ವಹಿಸಬಹುದು. "ಭಾರತದ ಆರು ರಾಜ್ಯಗಳಲ್ಲಿ 10,000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ, ಇದರಲ್ಲಿ ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಮಿಜೋರಾಂ, ತಮಿಳುನಾಡು ಸೇರಿವೆ.

ಸಕ್ರಿಯ ಪ್ರಕರಣಗಳನ್ನು ಕಡಿಮೆ ಮಾಡಲು ಸೆಪ್ಟೆಂಬರ್ ತಿಂಗಳು ನಿರ್ಣಾಯಕವಾಗಿದೆ, ಅಕ್ಟೋಬರ್‌ನಲ್ಲಿ ದಸರಾ, ದೀಪಾವಳಿಯಂತಹ ಅನೇಕ ಹಬ್ಬಗಳು ಬರುತ್ತವೆ. ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸಕ್ರಿಯ ಪ್ರಕರಣಗಳನ್ನು ಕಡಿಮೆ ಮಾಡಬೇಕು. ಕಂಟೈನ್‌ಮೆಂಟ್ ಮತ್ತು ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಎರಡನ್ನೂ ಅತ್ಯುತ್ತಮವಾಗಿ ನಿರ್ವಹಿಸಬೇಕು ಎಂದು ಜೀವನ್ ರಕ್ಷಾದ ಮೈಸೂರು ಸಂಚಾಲಕ ಸಂಜೀವ್ ಮೈಸೂರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com