
ಗದಗ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಬಂದ ನಂತರ ಶಿರಹಟ್ಟಿ ತಾಲ್ಲೂಕಿನ ಕೊಕ್ಕರಗುಂಡಿ ಗ್ರಾಮಕ್ಕೆ ಬಸ್ ಸಂಚಾರ ಸೇವೆ ಆರಂಭವಾಗಿದ್ದು ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೊಕ್ಕರಗುಂಡಿ ಗ್ರಾಮಕ್ಕೆ ಬಸ್ ಸಂಚಾರ ಸೇವೆ ಸಾಕಷ್ಟು ಇಲ್ಲ ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ವಿಪರೀತ ಕಷ್ಟವಾಗುತ್ತಿದೆ. ಎರಡೆರಡು ಹೊಳೆಗಳನ್ನು ದಾಟಿಕೊಂಡು ನಾಲ್ಕೈದು ಕಿಲೋ ಮೀಟರ್ ನಡೆದುಕೊಂಡು ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾಗುತ್ತದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರರು ವರದಿ ಮಾಡಿದ್ದರು.
ವರದಿ ಹಿನ್ನೆಲೆಯಲ್ಲಿ ಈಶಾನ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ಸಂಚಾರ ಸೇವೆ ಆರಂಭಿಸಿದ್ದು ನಿನ್ನೆ ಬಸ್ಸು ಬಂದು ವಿದ್ಯಾರ್ಥಿಗಳು ಅದರಲ್ಲಿ ಶಾಲೆಗೆ ಹೋಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಪಡಿಪಾಟಿಲು ತಪ್ಪಿದೆ.
ನಡೆದುಕೊಂಡು ಹೋಗಲು ಒಂದು ಗಂಟೆ ಹಿಡಿಯುತ್ತಿತ್ತು, ಕಷ್ಟವಾಗುತ್ತಿತ್ತು, ಇದೀಗ ಬಸ್ ಆರಂಭವಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಬಹುದು ಎಂದು ಖುಷಿಯಾಗುತ್ತಿದೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳುತ್ತಾರೆ.
Advertisement