ದೇವಾಲಯ ಧ್ವಂಸ ಟೂಲ್ ಕಿಟ್ ಷಡ್ಯಂತ್ರದ ವ್ಯವಸ್ಥಿತ ಸಂಚು: ಗಣೇಶ್ ಕಾರ್ಣಿಕ್

ದೇವಾಲಯ ಧ್ವಂಸ ಟೂಲ್​ ಕಿಟ್​ ಷಡ್ಯಂತ್ರದ ಭಾಗವಾಗಿದೆ ಎನ್ನುವ ಸಂಶಯ ಬರುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ  ಕ್ಯಾ. ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.
ಗಣೇಶ್ ಕಾರ್ಣಿಕ್
ಗಣೇಶ್ ಕಾರ್ಣಿಕ್

ಮಂಗಳೂರು: ದೇವಾಲಯ ಧ್ವಂಸ ಟೂಲ್​ ಕಿಟ್​ ಷಡ್ಯಂತ್ರದ ಭಾಗವಾಗಿದೆ ಎನ್ನುವ ಸಂಶಯ ಬರುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ  ಕ್ಯಾ. ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿರುವಾಗ ಬಹುಸಂಖ್ಯಾತರ ಭಾವನೆಗಳನ್ನು ಧಕ್ಕೆ ಮಾಡುವುದಕ್ಕಾಗಿ ಮಾಡಿರುವ ವ್ಯವಸ್ಥಿತ ಸಂಚಿನ ಭಾಗ ಇದು. ಆದ್ದರಿಂದ ಸರ್ಕಾರದ ಪರವಾಗಿ ಏನು ಮಾಡಬೇಕೋ‌ ಅದನ್ನು ಮಾಡುತ್ತೇವೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ 2009ರ ಬಳಿಕ‌ ನಿರ್ಮಾಣವಾದ ದೇವಸ್ಥಾನಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇರೆ ವ್ಯವಸ್ಥೆಗಳನ್ನು ಮಾಡಿ ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕೆಂಬ ಸ್ಪಷ್ಟ ಆದೇಶ ಇದೆ. ಎಲ್ಲೂ ದೇವಸ್ಥಾನ ಕೆಡವಲು ಆದೇಶ ನೀಡಿಲ್ಲ. ಸ್ಪಷ್ಟ ದಾಖಲೆಗಳು ಇರುವ ದೇವಾಲಯಗಳನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಇದು ಷಡ್ಯಂತರದ ಭಾಗವೇನೋ ಎಂಬ ಅನುಮಾನ ಮೂಡುತ್ತಿದೆ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com