ರಾಜ್ಯ ರಾಜಕಾರಣದಲ್ಲಿ 'ದೇವಸ್ಥಾನ ಧ್ವಂಸ'ದ ಬಿರುಗಾಳಿ: ಕೇವಲ ಒಂದೇ ದೇವಾಲಯ ಹೈಲೈಟ್ ಏಕೆ?

ಕೆಲವು ತಿಂಗಳ ಹಿಂದೆ ಕೋವಿಡ್ ಮುಕ್ತ ಗ್ರಾಮವಾಗಿ ರಾಜ್ಯಾದ್ಯಂತ ಗಮನ ಸೆಳೆದಿದ್ದ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮ, ದೇವಾಲಯ ಧ್ವಂಸ ಪ್ರಕರಣದೊಂದಿಗೆ ಮತ್ತೆ ಸದ್ದು ಮಾಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮೈಸೂರು: ಕೆಲವು ತಿಂಗಳ ಹಿಂದೆ ಕೋವಿಡ್ ಮುಕ್ತ ಗ್ರಾಮವಾಗಿ ರಾಜ್ಯಾದ್ಯಂತ ಗಮನ ಸೆಳೆದಿದ್ದ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮ, ದೇವಾಲಯ ಧ್ವಂಸ ಪ್ರಕರಣದೊಂದಿಗೆ ಮತ್ತೆ ಸದ್ದು ಮಾಡುತ್ತಿದೆ.

ಮೈಸೂರು ನಗರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಹಳ್ಳಿಯ ದೇವಾಲಯವನ್ನು ಕೆಡವಿದ ನಂತರ 'ದೇವಾಸ್ಥಾನ ರಾಜಕೀಯ'ಕ್ಕಾಗಿ ಮತ್ತೆ ಸುದ್ದಿಯಲ್ಲಿದೆ.

ಸೆಪ್ಟಂಬರ್ 8 ರಂದು ಮುಂಜಾನೆ ತಾಲೂಕು ಆಡಳಿತ, ಪೊಲೀಸರ ಸಹಾಯದೊಂದಿಗೆ ಗ್ರಾಮದಲ್ಲಿದ್ದ ಶ್ರೀ ಆದಿಶಕ್ತಿ ಮಹಾದೇವಮ್ಮ ದೇವಾಲಯವನ್ನು ಅರ್ಥ್ ಮೂವರ್ಸ್ ನಿಂದ ಧ್ವಂಸಗೊಳಿಸಿದರು. 

ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಜುಲೈ 1, 2021 ರಂದು ಹೊರಡಿಸಿದ ಪತ್ರದ ಆಧಾರದ ಮೇಲೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿ ತಾಲೂಕಿನಲ್ಲಿರುವ ಅಕ್ರಮ ಧಾರ್ಮಿಕ ಸಂಸ್ಥೆಗಳ ನಿರ್ಮಾಣದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.

ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಧಾರ್ಮಿಕ ಆರಾಧನಾ ಸಂಸ್ಥೆಗಳನ್ನು ಕೆಡವಲು ಸುಪ್ರಿಂಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆದರೆ ದೇವಸ್ಥಾನವನ್ನು ನೆಲಸಮಗೊಳಿಸುವ ವೀಡಿಯೊವನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಇತರ ಹಲವಾರು ಹಿಂದೂ ಪರ ಸಂಘಟನೆಗಳು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ನಂತರ, ಈ ವಿಷಯವು ರಾಜಕೀಯ ವಿವಾದಕ್ಕೆ ಕಾರಣವಾಯಿತು, ಇದು ಬಿಜೆಪಿ ಸರ್ಕಾರಕ್ಕೆ ದೊಡ್ಡ ಮುಜುಗರವಾಗಿ ಪರಿಣಮಿಸಿತು. ವಿರೋಧ
ಪಕ್ಷದ ನಾಯಕ ಸಿದ್ದರಾಮಯ್ಯ ಈ ಘಟನೆಯನ್ನು ಖಂಡಿಸಿದರು. ಇದು ಶೀಘ್ರದಲ್ಲೇ 'ದೇವಸ್ಥಾನ ರಾಜಕಾರಣದ' ವಿಷಯವಾಯಿತು.

ಈ ದೇವಸ್ಥಾನವು 15 ಧಾರ್ಮಿಕ ಆರಾಧನಾ ಕೇಂದ್ರಗಳಲ್ಲಿ ಒಂದಾಗಿದೆ,  ನಂಜನಗೂಡಿನ  ಸಾರ್ವಜನಿಕ ಆಸ್ತಿಯ ಅತಿಕ್ರಮಣವೆಂದು ಗುರುತಿಸಲಾಗಿದೆ. ಗ್ರಾಮಸ್ಥರು ದೇವಾಲಯದೊಂದಿಗೆ "ಭಾವನಾತ್ಮಕ ಸಂಪರ್ಕ" ಹೊಂದಿದ್ದರು. ಏಕೆಂದರೆ ಇದನ್ನು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ನಿರ್ಮಿಸಲಾಗಿದೆ. ದೇವಾಲಯವನ್ನು ಯಾವಾಗ ನಿರ್ಮಿಸಲಾಗಿದೆ ಎಂಬುದರ ಬಗ್ಗೆ ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ಖಚಿತವಾಗಿ ತಿಳಿದಿಲ್ಲವಾದರೂ, ಸಂಗಮ ಕ್ಷೇತ್ರದ ಸದ್ಗುರು ಮಹಾದೇವ ತಾತಾ ಅವರು ಪ್ರಧಾನ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ,  ಕೆಲವು ದಶಕಗಳ ಹಿಂದೆ ಅವರು ಸಾರ್ವಜನಿಕ ದೇಣಿಗೆಯನ್ನು ಬಳಸಿ ದೇವಾಲಯ ಮತ್ತು ಗೋಪುರ ರಚಿಸಿದ್ದರು ಎನ್ನಲಾಗಿದೆ.

ಆದರೆ ಇದು ಶತಮಾನಗಳಷ್ಟು ಹಳೇಯದಾದ ದೇವಾಸ್ಥಾನ ಎಂದು ಹಿಂದೂಪರ ಸಂಘಟನೆಗಳು ಹೇಳಿಕೊಂಡಿವೆ, ದೇವಾಸ್ಥಾನ ಧ್ವಂಸ ವೇಳೆ ಸರಿಯಾದ ರೀತಿಯ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಹಲವು ಗ್ರಾಮಸ್ಥರು ಮತ್ತು ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಅಧಿಕಾರಿಗಳು ರಾತ್ರೋರಾತ್ರಿ ಕಳ್ಳರಂತೆ ಬಂದು ದೇವಸ್ಥಾನವನ್ನು ನೆಲಸಮ ಮಾಡಿದರು "ಎಂದು ಸಿಂಹ ಹೇಳಿದರು. ದೇವಾಲಯವು ಕನಿಷ್ಠ 250 ವರ್ಷಗಳಷ್ಟು ಹಳೆಯದು ಎಂದು ತೋರಿಸುವ ದಾಖಲೆಗಳಿವೆ ಎಂದು ಸಿಂಹ ಹೇಳಿಕೊಂಡಿದ್ದಾರೆ.

ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ನಂಜನಗೂಡು ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಹೇಳಿದ್ದಾರೆ. ಗ್ರಾಮದ ಕೆಲ ಯುವಕರು ಈ ಹಿಂದೆ ದೇವಸ್ಥಾನ ಧ್ವಂಸದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ, ಗ್ರಾಮಸ್ಥರ ವಿರೋಧದ ಭಯದಿಂದ ಅಧಿಕಾರಿಗಳು ಅದನ್ನು ನಸುಕಿನಲ್ಲೇ ಕೆಡವಿದ್ದಾರೆ ಎಂದು ಅವರು ಹೇಳಿದರು.

ಯಾವ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಅರಿತುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ ಸುಮಾರು 15 ದೇವಸ್ಥಾನಗಳನ್ನು ಗುರುತಿಸಲಾಗಿದೆ. ಅದರಲ್ಲಿ 13 ದೇವಾಲಯಗಳನ್ನು ರಕ್ಷಿಸಲಾಗಿದೆ, 

ನೆರೆಯ ತಾಲೂಕುಗಳಲ್ಲಿಯೂ ಇದೇ ರೀತಿ ಕೆಡವುವ ಕಾರ್ಯ ನಡೆಯುತ್ತಿವೆ, ಆದರೆ ಈ ದೇವಸ್ಥಾನವನ್ನು ಮಾತ್ರ ಹೈಲೈಟ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ, ಮೈಸೂರು ಜಿಲ್ಲಾಧಿಕಾರಿ ಮತ್ತು ನಂಜನಗೂಡು ತಹಶೀಲ್ದಾರ್ ರಿಂದ ಸರ್ಕಾರ ವಿವರಣೆ ಕೋರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com