855 ಮೀಟರ್ ಸುರಂಗ ಮಾರ್ಗ ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹೊರಬಂದ 'ಊರ್ಜಾ ಯಂತ್ರ': ಕಾರ್ಮಿಕರು ಹರ್ಷ, ಸಿಎಂ ಬೊಮ್ಮಾಯಿ ವೀಕ್ಷಣೆ 

ನಮ್ಮ ಮೆಟ್ರೊ' ಹಂತ-2ರ ಕಾಳೇನ ಅಗ್ರಹಾರ-ನಾಗವಾರ ಮಾರ್ಗದ ಯೋಜನೆಯಲ್ಲಿ, ಕಂಟೋನ್ ಮೆಂಟ್ ನಿಲ್ದಾಣದಿಂದ ಶಿವಾಜಿನಗರವರೆಗೆ 855 ಮೀಟರ್ ಸುರಂಗವನ್ನು ಕೊರೆದು ಹೊರಬಂದ ಸುರಂಗ ಯಂತ್ರ 'ಊರ್ಜಾ'ವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಸುರಂಗ ಕೊರೆದು ಬಂದ ಊರ್ಜಾ ಯಂತ್ರವನ್ನು ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇತರರು
ಸುರಂಗ ಕೊರೆದು ಬಂದ ಊರ್ಜಾ ಯಂತ್ರವನ್ನು ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇತರರು

ಬೆಂಗಳೂರು: ನಮ್ಮ ಮೆಟ್ರೊ' ಹಂತ-2ರ ಕಾಳೇನ ಅಗ್ರಹಾರ-ನಾಗವಾರ ಮಾರ್ಗದ ಯೋಜನೆಯಲ್ಲಿ, ಕಂಟೋನ್ ಮೆಂಟ್ ನಿಲ್ದಾಣದಿಂದ ಶಿವಾಜಿನಗರವರೆಗೆ 855 ಮೀಟರ್ ಸುರಂಗವನ್ನು ಕೊರೆದು ಹೊರಬಂದ ಸುರಂಗ ಯಂತ್ರ 'ಊರ್ಜಾ'ವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಜನಪ್ರತಿನಿಧಿಗಳು, ಸುರಂಗ ಕೊರೆಯುವ ಊರ್ಜ ಯಂತ್ರವು ಬೆಂಗಳೂರಿನ ಕಂಟೋನ್ಮೆಂಟ್ ನಿಂದ ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹೊರಬರುವುದನ್ನು ಇಂದು ವೀಕ್ಷಿಸಿದರು.

ಕಳೆದ ವರ್ಷ ಜುಲೈ 30ರಂದು ಶಿವಾಜಿನಗರ ಕಂಟೋನ್ಮೆಂಟ್ ನಿಲ್ದಾಣದಿಂದ ಸುರಂಗ ಕೊರೆಯಲು ಆರಂಭಿಸಿ 850 ಮೀಟರ್ ಸುರಂಗ ಕೊರೆತು 13 ತಿಂಗಳ ನಂತರ ಇಂದು ಬೆಳಗ್ಗೆ 10.15ಕ್ಕೆ ಶಿವಾಜಿನಗರ ಮೆಟ್ರೊ ನಿಲ್ದಾಣಕ್ಕೆ ಆಗಮಿಸಿತು. ಊರ್ಜಾ ಸುರಂಗ ಯಂತ್ರ ಇಷ್ಟು ಸಮಯ ಸುರಂಗ ಕೊರೆದು ಇಂದು ಹೊರಬಂದ ವೇಳೆ ಮೆಟ್ರೊ ಕಾಮಗಾರಿ ಕಾರ್ಮಿಕರು ಹರ್ಷದಿಂದ ಕುಣಿದರು.

ಯಂತ್ರ ಹೊರಬರುವ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದು, ಊರ್ಜಾ ಬ್ರೇಕ್ ಥ್ರೂ ವೀಕ್ಷಿಸಿದರು. ಉರ್ಜಾ ಯಂತ್ರ ಕಂಟೋನ್ಮೆಂಟ್​ನಿಂದ ಶಿವಾಜಿನಗರ ಮಾರ್ಗವಾಗಿ ಸುರಂಗ ಕೊರೆದಿದೆ. 855 ಮೀಟರ್ ಸುರಂಗ ಕೊರೆದು ಟಿಬಿಎಂ ಹೊರ ಬಂದಿದೆ. ಎರಡನೇ ಹಂತದಲ್ಲಿ ಒಟ್ಟು 9 ಟಿಬಿಎಂ ಮಿಷನ್​ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಸುರಂಗ ಮಾರ್ಗ ಕೆಲಸ ಪೂರ್ಣಗೊಳಿಸಿ ಮೊದಲ ಟಿಬಿಎಂ ಉರ್ಜಾ ಹೊರಬಂದಿದೆ.

ಸುರಂಗ ಮಾರ್ಗ ಕೊರೆಯುವುದು ದೊಡ್ಡ ಸವಾಲಾಗಿತ್ತು. ಸಡಿಲ ಮಣ್ಣು ಹಾಗೂ ಸಾಕಷ್ಟು ಬೋರ್​ವೆಲ್​ಗಳು ಸಿಕ್ಕಿದ್ದವು. ಇದನ್ನೆಲ್ಲಾ ಬೇಧಿಸಿ ಊರ್ಜಾ ಯಶಸ್ವಿಯಾಗಿ ತನ್ನ ಕೆಲಸ ಮುಗಿಸಿ ಸುರಂಗ ಮಾರ್ಗದಿಂದ ಹೊರಬಂದಿದೆ. ಮೆಟ್ರೋ ಫೇಸ್ 2 ನಲ್ಲಿ, ಗೊಟ್ಟಿಗೆರೆಯಿಂದ ನಾಗಾವರವರೆಗೆ 21 ಕಿ.ಮೀ ಉದ್ದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಸುಮಾರು 13 ಕಿ.ಮೀ ನಷ್ಟು ಸುರಂಗ ಮಾರ್ಗ ಕಾಮಗಾರಿ ಮಾಡಲಾಗುತ್ತಿದೆ. ಇದಕ್ಕಾಗಿ 9 ಟಿಬಿಮ್ (ಟನಲ್ ಬೋರಿಂಗ್ ಮಿಷನ್)ಗಳು ಕೆಲಸ ನಿರ್ವಹಿಸುತ್ತಿವೆ. ಈ 9 ಮಿಷನ್ ಗಳ ಪೈಕಿ ಊರ್ಜಾ ಸುರಂಗ ಮಾರ್ಗ ಕೆಲಸ ಮುಗಿಸಿ ಹೊರ ಬರುತ್ತಿರುವ ಮೊದಲ ಯಂತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com