ಕೊಡಗಿನಲ್ಲಿ 14 ಮಂದಿಗೆ ಇಲಿ ಜ್ವರ, ಆತಂಕಪಡುವ ಅಗತ್ಯವಿಲ್ಲ ಎಂದ ಅಧಿಕಾರಿಗಳು

ಜಿಲ್ಲೆಯು ಕೋವಿಡ್ -19 ವಿರುದ್ಧ ಹೋರಾಡುತ್ತಿರುವುದರ ನಡುವೆಯೇ 14 ಲೆಪ್ಟೊಸ್ಪೈರೋಸಿಸ್(ಇಲಿ ಜ್ವರ) ಪ್ರಕರಣಗಳು ವರದಿಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಡಿಕೇರಿ: ಜಿಲ್ಲೆಯು ಕೋವಿಡ್ -19 ವಿರುದ್ಧ ಹೋರಾಡುತ್ತಿರುವುದರ ನಡುವೆ 14 ಲೆಪ್ಟೊಸ್ಪೈರೋಸಿಸ್(ಇಲಿ ಜ್ವರ) ಪ್ರಕರಣಗಳು ವರದಿಯಾಗಿವೆ.

ಮೊದಲ ಪ್ರಕರಣವು ಸುಮಾರು 15 ದಿನಗಳ ಹಿಂದೆ ಪತ್ತೆಯಾಯಿತು ಮತ್ತು ಬಹುಪಾಲು ರೋಗಿಗಳು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.

ಲೆಪ್ಟೊಸ್ಪೈರೋಸಿಸ್ ಅಥವಾ ಇಲಿ ಜ್ವರವು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ, ಇದು ಮೂತ್ರ ಅಥವಾ ಲೋಳೆಯ ಸ್ರವಿಸುವಿಕೆಯಿಂದ ಮನುಷ್ಯರಿಗೆ ಹರಡುತ್ತದೆ. "ರಕ್ತ ಪರೀಕ್ಷೆಗಳ ಮೂಲಕ ರೋಗವನ್ನು ಪತ್ತೆ ಮಾಡಬಹುದು. ಒಬ್ಬ ವ್ಯಕ್ತಿಯು ಕಾಮಾಲೆ, ಕೆಮ್ಮು ಅಥವಾ ಇತರ ತೀವ್ರವಾದ ಉಸಿರಾಟದ ತೊಂದರೆಯ ಲಕ್ಷಣಗಳನ್ನು ಹೊಂದಿದ್ದರೆ, ತಕ್ಷಣವೇ ರಕ್ತ ಪರೀಕ್ಷೆ ಮಾಡಿಸಲು ಸೂಚಿಸಲಾಗುತ್ತದೆ.

ಲೆಪ್ಟೊಸ್ಪೈರೋಸಿಸ್ ಅನ್ನು ಗುಣಪಡಿಸಬಹುದು ಮತ್ತು ಇದು ಸಾಂಕ್ರಾಮಿಕ ರೋಗ ಅಲ್ಲ ಎಂದು ಡಿಎಚ್‌ಒ ಡಾ.ವೆಂಕಟೇಶ್ ಅವರು ತಿಳಿಸಿದ್ದಾರೆ.

14 ಪ್ರಕರಣಗಳಲ್ಲಿ ಹೆಚ್ಚಿನವರು ಚೇತರಿಸಿಕೊಂಡಿದ್ದಾರೆ ಮತ್ತು ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಇಲಿ ಜ್ವರಕ್ಕೆ ಅಗತ್ಯವಿರುವ ಎಲ್ಲ ಚಿಕಿತ್ಸೆ ಮತ್ತು ಔಷಧಗಳು ಲಭ್ಯವಿವೆ ಮತ್ತು ಜ್ವರದ ಲಕ್ಷಣಗಳಿಂದ ಬಳಲುತ್ತಿರುವ ನಿವಾಸಿಗಳು ಹತ್ತಿರದ ಪಿಎಚ್‌ಸಿಗೆ ವರದಿ ಮಾಡುವಂತೆ ಸೂಚಿಸಿದ್ದಾರೆ.

ಇಲಿ ಜ್ವರಕ್ಕೆ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಮತ್ತು ಪರಿಣಾಮಕಾರಿ ಚಿಕಿತ್ಸೆ ಲಭ್ಯವಿರುವುದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ. "ನಿವಾಸಿಗಳು ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ಜಿಲ್ಲಾಧಿಕಾರಿ ಚಾರುವಾಲಾ ಸೋಮಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com