ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

24 ವಾರಗಳ ಕಡ್ಡಾಯ ಇಂಟರ್ನ್ ಶಿಪ್ ಸಮಯದಲ್ಲಿ ವಿಟಿಯು ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳಲು ಅವಕಾಶ

ಇಂಜಿನಿಯರಿಂಗ್ ಕೋರ್ಸ್‌ಗಳಿಗೆ 24 ವಾರಗಳ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗಲು ಅವಕಾಶವಿರುತ್ತದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ, ಪ್ರಾಧ್ಯಾಪಕ ಬಿ ಕರಿಸಿದ್ದಪ್ಪ ಹೇಳಿದ್ದಾರೆ.
Published on

ಬೆಂಗಳೂರು: ಇಂಜಿನಿಯರಿಂಗ್ ಕೋರ್ಸ್‌ಗಳಿಗೆ 24 ವಾರಗಳ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗಲು ಅವಕಾಶವಿರುತ್ತದೆ. ಜೊತೆಗೆ ಬಹುಕ್ರಮ ಇಂಟರ್ನ್‌ಶಿಪ್‌ಗಳನ್ನು ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹಿಸಲಾಗುತ್ತದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ, ಪ್ರಾಧ್ಯಾಪಕ ಬಿ ಕರಿಸಿದ್ದಪ್ಪ ಹೇಳಿದ್ದಾರೆ.

ಸಂಪೂರ್ಣ ಏಕೀಕರಣಕ್ಕಾಗಿ ಕೈಗಾರಿಕೆಗಳು, ಶೈಕ್ಷಣಿಕ, ವಿದ್ಯಾರ್ಥಿಗಳು ಮತ್ತು ಬೋಧಕ ವಲಯದ ನಕ್ಷೆ ಮಾಡಲಾಗುತ್ತಿದ್ದು, ಅಂತರಶಿಕ್ಷಣ ಯೋಜನೆಯ ಕೆಲಸಗಳನ್ನು, 'ಸ್ವಯಂ ಅಧ್ಯಯನ ಘಟಕ'ವನ್ನೂ ಪರಿಚಯಿಸಲಾಗುವುದು ಎಂದು ಕರಿಸಿದ್ದಪ್ಪ ವಿವರಿಸಿದ್ದಾರೆ.

ಹೊಸ ಪಠ್ಯಕ್ರಮವನ್ನು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿಗೆ ಜೋಡಿಸಲಾಗಿದೆ ಮತ್ತು ಸಂಕ್ಷಿಪ್ತ ಮೌಲ್ಯಮಾಪನದ ಹಿಂದಿನ ಅಭ್ಯಾಸವನ್ನು ಬದಲಿಸಲು ರಚನಾತ್ಮಕ ಮೌಲ್ಯಮಾಪನವನ್ನು ಅನುಸರಿಸಲಾಗುತ್ತದೆ, ಮುಖ್ಯ ಮತ್ತು ಸಣ್ಣ ವಿಷಯಗಳ ಮೇಲೆ ಪದವಿಯನ್ನು ಕಲಿಸಲಾಗುತ್ತದೆ ಎಂದು ಹೇಳಿದ್ದಾರೆ.

"ನಾಲ್ಕು ಕಾಲೇಜುಗಳು ಪ್ರಾದೇಶಿಕ ಭಾಷಾ ಮಾಧ್ಯಮ ಕನ್ನಡದಲ್ಲಿ ಬಿ.ಇ. ಕೋರ್ಸುಗಳನ್ನು ಕಲಿಸಲು ಮುಂದೆ ಬಂದಿವೆ ಮತ್ತು ಉನ್ನತ ಶಿಕ್ಷಣ ಇಲಾಖೆಯಿಂದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದಿದ್ದಾರೆ. ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಶೀಘ್ರದಲ್ಲಿಯೇ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com