ಬಿಸಿಲ ಝಳ, ಕೋವಿಡ್ ಹೆಚ್ಚಳ: ನಗರಕ್ಕೆ ನೀರು ಪೂರೈಕೆಯಲ್ಲಿ ತನ್ನ ದಾಖಲೆಯನ್ನೇ ಮುರಿದ ಜಲಮಂಡಳಿ!

ಬಿಸಿಲಿನ ಝಳ ಹೆಚ್ಚಳವಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕೋವಿಡ್-19 ಹೆಚ್ಚಳದ ಆತಂಕ ನೀರಿನ ಬೇಡಿಕೆಯನ್ನು ಹಿಂದೆಂದಿನ ಬೇಸಿಗೆಗಳಿಗಿಂತ ಹೆಚ್ಚು ಮಾಡಿದೆ.
ಬಿಸಿಲ ಝಳ, ಕೋವಿಡ್ ಹೆಚ್ಚಳ: ನಗರಕ್ಕೆ ನೀರು ಪೂರೈಕೆಯಲ್ಲಿ ತನ್ನ ದಾಖಲೆಯನ್ನೇ ಮುರಿದ ಬಿಡಬ್ಲ್ಯುಎಸ್ಎಸ್ ಬಿ!
ಬಿಸಿಲ ಝಳ, ಕೋವಿಡ್ ಹೆಚ್ಚಳ: ನಗರಕ್ಕೆ ನೀರು ಪೂರೈಕೆಯಲ್ಲಿ ತನ್ನ ದಾಖಲೆಯನ್ನೇ ಮುರಿದ ಬಿಡಬ್ಲ್ಯುಎಸ್ಎಸ್ ಬಿ!

ಬೆಂಗಳೂರು: ಬಿಸಿಲಿನ ಝಳ ಹೆಚ್ಚಳವಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕೋವಿಡ್-19 ಹೆಚ್ಚಳದ ಆತಂಕ ನೀರಿನ ಬೇಡಿಕೆಯನ್ನು ಹಿಂದೆಂದಿನ ಬೇಸಿಗೆಗಳಿಗಿಂತ ಹೆಚ್ಚು ಮಾಡಿದೆ.
 
ಕೋವಿಡ್-19 ಹೆಚ್ಚುತ್ತಿರುವುದರಿಂದ ಪದೇ ಪದೇ ಕೈ ತೊಳೆಯುವುದು, ಹಿಂದೆಂದಿಗಿಂತಲೂ ಹೆಚ್ಚು ಬಾರಿ ಸ್ನಾನ ಮಾಡುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಡಬ್ಲ್ಯುಎಸ್ಎಸ್ ಬಿ ಕಾವೇರಿ ನೀರನ್ನು ನಗರದ ಜನತೆಗೆ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದಿದೆ. 

ಏ.6 ರಿಂದ ಆರಂಭಗೊಂಡು ಪ್ರತಿದಿನ 1,468 ರಿಂದ 1,475 ಮಿಲಿಯನ್ ಲೀಟರ್ ಗಳಷ್ಟು ನೀರನ್ನು ಬಿಡಬ್ಲ್ಯುಎಸ್ಎಸ್ ಬಿ ಪೂರೈಕೆ ಮಾಡಿದೆ. ಈ ಬಗ್ಗೆ ಜಲಮಂಡಳಿಯ ಮುಖ್ಯ ಇಂಜಿನಿಯರ್, ಕಾವೇರಿ, ಎಸ್ ಬಿ ರಮೇಶ್ ಮಾಹಿತಿ ನೀಡಿದ್ದು, "ಹಿಂದಿನ ವರ್ಷಗಳಿಗಿಂತ ಈ ವರ್ಷ ಬಿಸಿಲ ಝಳ ಹೆಚ್ಚಾಗಿದೆ. ಈ ನಡುವೆ ಕೋವಿಡ್-19 ಸೋಂಕು ಪ್ರಸರಣವೂ ಹೆಚ್ಚುತ್ತಿದ್ದು, ಸೋಂಕು ಬಾರದ ರೀತಿಯಲ್ಲಿ ಎಚ್ಚರ ವಹಿಸುವುದಕ್ಕಾಗಿ ಜನತೆ ಹೆಚ್ಚಿನ ನೀರನ್ನು ಬಳಕೆ ಮಾಡುತ್ತಿದ್ದಾರೆ. ಈ ಕಾರಣದಿಂದ ನೀರಿನ ಬೇಡಿಕೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದ್ದು, 6 ನೇ ಪಂಪ್ ನ್ನು ಕಾರ್ಯಾಚರಣೆಗೆ ಒಳಪಡಿಸಿದ್ದೇವೆ ಎಂದು ತಿಳಿಸಿದ್ದಾರೆ. 

ಕಳೆದ ವಾರದವರೆಗೂ ಬಿಡಬ್ಲ್ಯುಎಸ್ಎಸ್ ಬಿ ತೊರೆಕಾಡನಹಳ್ಳಿ ಜಲಾಶಯದಿಂದ 1,140 ರಿಂದ 1,142 ಎಂಎಲ್ ಡಿ ನೀರನ್ನು ಪೂರೈಕೆ ಮಾಡುತ್ತಿತ್ತು.  ಮೂರು ದಿನಗಳಿಂದ ನೀರು ಪೂರೈಕೆ ಪ್ರಮಾಣವನ್ನು 300 ಎಂಎಲ್ ಡಿ ಯಷ್ಟು ಹೆಚ್ಚಿಸಲಾಗಿದೆ. ಈ ವರೆಗೂ ಪೂರೈಕೆಯಾಗಿರುವ ನೀರಿನ ಗರಿಷ್ಠ ಪ್ರಮಾಣ 1,452 ಎಂಎಲ್ ಡಿ ಆಗಿದೆ ಎಂದು ಎಸ್ ಬಿ ರಮೇಶ್ ಮಾಹಿತಿ ನೀಡಿದ್ದಾರೆ. 

ನೀರಿನ ಪೂರೈಕೆ ಪ್ರಮಾಣವನ್ನು ಹೆಚ್ಚಿಸಿ ನಾವು ದೊಡ್ದ ಸವಾಲು ಹಾಗೂ ಅಪಾಯವನ್ನು ತೆಗೆದುಕೊಂಡಿದ್ದೇವೆ. ಈ ವರೆಗೂ ಕೇವಲ 5 ಪಂಪ್ ಗಳನ್ನು ಮಾತ್ರವೇ ಬಳಕೆ ಮಾಡಲಾಗುತ್ತಿತ್ತು. ಪ್ರಾಯೋಗಿಕವಾಗಿ ಈಗ 16-18 ಗಂಟೆಗಳು ಮಾತ್ರವೇ ಪಂಪ್ ಮಾಡುತ್ತಿದ್ದೇವೆ. ಕೆಲವು ದಿನಗಳ ಬಳಿಕ ದಿನಪೂರ್ತಿ ಪಂಪ್ ಗಳು ಕಾರ್ಯಾಚರಣೆ ಮಾಡಲಿದ್ದು 10-15 ಎಂಎಲ್ ಡಿ ನೀರು ಹೆಚ್ಚು ಸಿಗಲಿದೆ, ಏಪ್ರಿಲ್-ಮೇ ತಿಂಗಳಲ್ಲಿ ನೀರಿನ ಪೂರೈಕೆ ಬೇಡಿಕೆಯನ್ನು ತಲುಪಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com