ಸ್ಫೋಟದ ಪರಿಣಾಮ: ಮಂಗಳೂರು ಎಸ್ಇಝೆಡ್ ನಲ್ಲಿರುವ ಕಂಪನಿಯಲ್ಲಿ ಅಗ್ನಿ ಅವಘಡ

ಮಂಗಳೂರಿನ ಎಸ್ಇಝೆಡ್ ನಲ್ಲಿರುವ ಕಂಪನಿಯಲ್ಲಿ ಏ.24 ರಂದು ಅಗ್ನಿ ಅವಘಡ ಸಂಭವಿಸಿದೆ. 
ಸ್ಫೋಟದ ಪರಿಣಾಮ: ಮಂಗಳೂರು ಎಸ್ಇಝೆಡ್ ನಲ್ಲಿರುವ ಕಂಪನಿಯಲ್ಲಿ ಅಗ್ನಿ ಅವಘಡ
ಸ್ಫೋಟದ ಪರಿಣಾಮ: ಮಂಗಳೂರು ಎಸ್ಇಝೆಡ್ ನಲ್ಲಿರುವ ಕಂಪನಿಯಲ್ಲಿ ಅಗ್ನಿ ಅವಘಡ

ಮಂಗಳೂರು: ಮಂಗಳೂರಿನ ಎಸ್ಇಝೆಡ್ ನಲ್ಲಿರುವ ಕಂಪನಿಯಲ್ಲಿ ಏ.24 ರಂದು ಅಗ್ನಿ ಅವಘಡ ಸಂಭವಿಸಿದೆ. 

ಬಜ್ಪೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, ಸ್ಫೋಟದ ಪರಿಣಾಮವಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಸ್ಫೋಟದ ಪರಿಣಾಮವಾಗಿ ದಟ್ಟ ಹೊಗೆ ಪ್ರದೇಶದಲ್ಲಿ ಆವರಿಸಿದ್ದು, ಕ್ಯಾಟಸಿಂತ್ ವಿಶೇಷ ರಾಸಾಯನಿಕಗಳ ಕಂಪನಿಯಲ್ಲಿ ಈ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಜೀವ ಹಾನಿ ಸಂಭವಿಸಿಲ್ಲ. 

ಡಿಸಿಪಿ ಹರಿರಾಮ್ ಶಂಕರ್ ಕಂಪನಿಯ ಬಗ್ಗೆ ಮಾಹಿತಿ ನೀಡಿದ್ದು ಪೆಟ್ರೋಲಿಯಂ ಉಪ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಯಾಗಿತ್ತು ಎಂದು ಹೇಳಿದ್ದಾರೆ. ಕದ್ರಿ ಅಗ್ನಿಶಾಮಕ ಸೇವೆ, ಹೆಚ್ ಪಿಸಿಎಲ್, ಎಂಸಿಎಫ್ ಅಗ್ನಿ ಶಾಮಕಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಲಾಕ್ ಡೌನ್ ಕಾರಣದಿಂದಾಗಿ ಹಲವು ಉದ್ಯೋಗಿಗಳು ಮನೆಯಲ್ಲಿದ್ದರು. ಆದ್ದರಿಂದ ಜೀವ ಹಾನಿ ಸಂಭವಿಸಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com