ಬೊಮ್ಮಾಯಿ ಸಿಎಂ ಆಗಿರುವುದು 7 ತಿಂಗಳು ಮಾತ್ರ, ಮುಂದೆ ಗಡ್ಡಧಾರಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ: ಮೈಲಾರ ಶ್ರೀ ಭವಿಷ್ಯವಾಣಿ

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಪೂರ್ಣಾವಧಿ ಮುಗಿಸುವುದಿಲ್ಲ ಎಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಲಿಂಗೇಶ್ವರ ದೇವಸ್ಥಾನದ ಸ್ವಾಮೀಜಿಯೊಬ್ಬರು ಹೇಳಿರುವುದು ಇದೀಗ ಭಾರೀ ಸದ್ದು ಮಾಡುತ್ತಿದೆ. ರಾಜಕೀಯ ವಲಯದಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಮೈಲಾರ ಶ್ರೀಗಳು
ಮೈಲಾರ ಶ್ರೀಗಳು

ಹುಬ್ಬಳ್ಳಿ: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಪೂರ್ಣಾವಧಿ ಮುಗಿಸುವುದಿಲ್ಲ ಎಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಲಿಂಗೇಶ್ವರ ದೇವಸ್ಥಾನದ ಸ್ವಾಮೀಜಿಯೊಬ್ಬರು ಹೇಳಿರುವುದು ಇದೀಗ ಭಾರೀ ಸದ್ದು ಮಾಡುತ್ತಿದೆ. ರಾಜಕೀಯ ವಲಯದಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ವೆಂಕಪ್ಪಯ್ಯ ಒಡೆಯರ್ ಎಂಬ ಶ್ರೀಗಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊವನ್ನು ಅಪ್ ಲೋಡ್ ಮಾಡಿದ್ದು ಅದರಲ್ಲಿ ಕರ್ನಾಟಕದ ರಾಜಕೀಯ ಭವಿಷ್ಯ ಬಗ್ಗೆ ಮಾತನಾಡಿದ್ದಾರೆ. ಹವಾಮಾನ ಮತ್ತು ರೈತರ ಬೆಳೆ ಸ್ಥಿತಿಯ ಬಗ್ಗೆ ಮೈಲಾರ ಭವಿಷ್ಯವಾಣಿಯನ್ನು ಶ್ರೀಗಳು ಹೇಳುತ್ತಾರೆ. ಪ್ರತಿ ವರ್ಷ ಗೊತ್ತುಪಡಿಸಿದ ದಿನದಂದು, ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭವಿಷ್ಯವನ್ನು ಕೇಳಲು ಇಲ್ಲಿ ಸೇರುತ್ತಾರೆ. 

ಈ ಬಾರಿ ಕರ್ನಾಟಕ ರಾಜ್ಯದ ರಾಜಕೀಯ ಭವಿಷ್ಯ ಬಗ್ಗೆ ಕೂಡ ಮೈಲಾರ ಶ್ರೀಗಳು ಮಾತನಾಡಿದ್ದಾರೆ. ಪ್ರಸಕ್ತ ಬಿಜೆಪಿ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳಾಗಲಿದ್ದಾರೆ. ಬೊಮ್ಮಾಯಿಯವರು ಇನ್ನು ಆರೇಳು ತಿಂಗಳು ಮಾತ್ರ ಸಿಎಂ ಆಗಿ ಇರಬಹುದಷ್ಟೆ. ಗಡ್ಡಧಾರಿ ರಾಜಕೀಯ ನಾಯಕರೊಬ್ಬರು ಮುಖ್ಯಮಂತ್ರಿಯಾಗುತ್ತಾರೆ. ಮೈಲಾರ ದೇವರ ಭವಿಷ್ಯವಾಣಿ ಇದುವರೆಗೆ ನಿಜವಾಗಿದೆ ಎಂದು ಹೇಳಿದ್ದು ಇದೀಗ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ ಎಂದು ಕೂಡ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ಸೋಂಕು ಇನ್ನಷ್ಟು ಹೆಚ್ಚಲಿದ್ದು ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.

ಬೊಮ್ಮಾಯಿ ಸಿಎಂ ಭವಿಷ್ಯಕ್ಕೆ ವ್ಯಾಪಕ ಟೀಕೆ: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಇನ್ನು ಕೆಲ ತಿಂಗಳು ಮಾತ್ರ ಇರುತ್ತಾರೆ, ಪೂರ್ಣಾವಧಿ ಮುಗಿಸುವುದಿಲ್ಲ ಎಂದು ಹೇಳಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.ಶ್ರೀಗಳು ಅನಗತ್ಯ ಹೇಳಿಕೆ ನೀಡುವುದನ್ನು ಬಿಟ್ಟುಬಿಡಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಜನರು ಒತ್ತಾಯಿಸುತ್ತಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com