ಜೀವವಿಲ್ಲದ ಕಲ್ಲುಗಳಿಗೆ ಸಂಗೀತ ನೀಡಿದ ಕುಶಲಕರ್ಮಿಗಳಿಗೆ ವಂದನೆ: ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು

ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಶನಿವಾರ ಕುಟುಂಬ ಸಮೇತ ವಿಶ್ವ ವಿಖ್ಯಾತ ಹಂಪಿ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ.
ಕುಟುಂಬಸ್ಥರೊಂದಿಗೆ ವಿರೂಪಾಕ್ಷ ದೇವಾಲಯದಲ್ಲಿ ಆನೆಯ ಆಶೀರ್ವಾದ ಪಡೆದ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು
ಕುಟುಂಬಸ್ಥರೊಂದಿಗೆ ವಿರೂಪಾಕ್ಷ ದೇವಾಲಯದಲ್ಲಿ ಆನೆಯ ಆಶೀರ್ವಾದ ಪಡೆದ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು

ಹಂಪಿ(ಬಳ್ಳಾರಿ): ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಶನಿವಾರ ಕುಟುಂಬ ಸಮೇತ ವಿಶ್ವ ವಿಖ್ಯಾತ ಹಂಪಿ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ.

ಅಲ್ಲಿ ಅವರು ವಿಜಯ ವಿಠಲ ದೇವಾಲಯದಲ್ಲಿರುವ ಸಂಗೀತ ಕಂಬಕ್ಕೆ ಕಿವಿಗೊಟ್ಟು ಬರುವ ಸಂಗೀತ ಧ್ವನಿಗೆ ಕಿವಿಯಾದರು. ಅದನ್ನು ಕಂಡು ಅಬ್ಬಾ ಅದ್ಭುತ, ಜೀವವಿಲ್ಲದ ಕಲ್ಲುಗಳಿಗೆ ಸಂಗೀತ ನೀಡಿದ ನಮ್ಮ ಪೂರ್ವಜರ ಕಲೆಗೆ ವಂದನೆಗಳು! ವಿಜಯನಗರ ಸಾಮ್ರಾಜ್ಯದ ಮಹಾನ್ ಕುಶಲಕರ್ಮಿಗಳಿಗೆ ವಂದನೆಗಳು! ಎಂದು ಪ್ರತಿಕ್ರಿಯಿಸಿದ್ದಾರೆ.

ಅದಕ್ಕೂ ಮುನ್ನ ವಿರೂಪಾಕ್ಷ ದೇವಸ್ಥಾನಕ್ಕೆ ಹೋಗಿ ಲಕ್ಷ್ಮಿ ಆನೆಯಿಂದ ಆಶೀರ್ವಾದ ಪಡೆದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com