ಕತ್ತಲ ರಾಜ್ಯ: ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಅಪರಾಧ ಹೆಚ್ಚಳ, ಪ್ರತಿದಿನ ಕನಿಷ್ಠ ಒಂದು ರೇಪ್!

ಮೈಸೂರಿನ ಚಾಮುಂಡಿ ತಪ್ಪಲಿನಲ್ಲಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ, ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದ ಸ್ಥಳ ಪರಿಶೀಲಿಸುತ್ತಿರುವ ಪೊಲೀಸರು
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದ ಸ್ಥಳ ಪರಿಶೀಲಿಸುತ್ತಿರುವ ಪೊಲೀಸರು

ಮೈಸೂರು: ಮೈಸೂರಿನ ಚಾಮುಂಡಿ ತಪ್ಪಲಿನಲ್ಲಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ,  ಭೀತಿಯ ಮಾಹಿತಿಯೊಂದು ಹೊರಬಿದ್ದಿದೆ. ರಾಜ್ಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019  ಜನವರಿಯಿಂದ ಮೇ 2021ರವರೆಗೆ ಸುಮಾರು 1, 168  ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಪ್ರತಿದಿನ ಸರಾಸರಿ ಒಂದು ಅತ್ಯಾಚಾರ ಘಟನೆ ನಡೆಯುತ್ತಿದೆ. 22 ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಹೆಚ್ಚು ದಿಗಿಲು ಹುಟ್ಟಿಸಿವೆ.

ರಾಜ್ಯದ ಪೊಲೀಸರಿಂದ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಮಾಹಿತಿಯು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿದ್ದು, ಈ ಅವಧಿಯಲ್ಲಿ 18 ಮಹಿಳೆಯರ ಮೇಲೆ ಅತ್ಯಾಚಾರವಾಗಿದ್ದು, ಕೊಲೆ ಮಾಡಲಾಗಿದೆ. ಈ ವರ್ಷದಿಂದ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗತೊಡಗಿವೆ. ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ನಂತರ ಇಂತಹ ಹೀನ ಕೃತ್ಯಗಳು ಮುಂದೆ ಸಂಭವಿಸದಂತೆ ಅತ್ಯಾಚಾರಿಗಳನ್ನು ಶಿಕ್ಷಿಸಲು ಹೊಸ ಕಾನೂನಿನ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕಳೆದ ಎರಡೂ ವರ್ಷಗಳಲ್ಲಿ ಮಹಿಳೆಯರ ವಿರುದ್ಧ ಅಮಾನವೀಯ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿದೆ. 

ಮಹಿಳೆಯರ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದರೂ ಇಂತಹ ಪ್ರಕರಣಗಳು ರಾಜ್ಯದ ಎಲ್ಲಾ ಕಡೆ ನಡೆಯುತ್ತಲೇ ಇದೆ. ಮಹಿಳೆಯರು ಇಂದಿಗೂ ಲೈಂಗಿಕ ಅಪರಾಧಗಳಿಗೆ ಬಲಿಪಶುಯಾಗುತ್ತಿರುವುದು ಸಾಬೀತಾಗಿದೆ. 2019ರಲ್ಲಿ  ಹಿಂಸೆ, ಅಪಹರಣ, ವರದಕ್ಷಣೆ ಸೇರಿದಂತೆ 10,227 ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ವರದಿಯಾಗಿದ್ದವು. 2020ರಲ್ಲಿ ಈ ಪ್ರಕರಣಗಳ ಸಂಖ್ಯೆ 10, 761ಕ್ಕೆ ಏರಿಕೆಯಾಯಿತು. 2021 ಮೇ ಅಂತ್ಯದವರೆಗೂ ಮಹಿಳೆಯರ ವಿರುದ್ಧ 4,401 ಪ್ರಕರಣಗಳು ವರದಿಯಾಗಿವೆ.

ಕೊರೋನಾ ಲಾಕ್ ಡೌನ್ ನಂತರ ಕಳವು, ಡಕಾಯಿತಿ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳು ನಂತರು ನಿಂತಿಲ್ಲ. ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 400 ರೇಪ್ ಕೇಸ್ ಗಳು ವರದಿಯಾಗಿವೆ.

ಕಾನೂನು ಸುವ್ಯವಸ್ಥೆ ವಿಫಲತೆಯಿಂದಾಗಿ ಇಂತಹ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ನಿರಾಕರಿಸುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ಪೊಲೀಸ್ ಗಸ್ತು ಮತ್ತು ರಾಜ್ಯದಾದ್ಯಂತ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಹೆಚ್ಚಿಸಲು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ವರದಿ ಕಳುಹಿಸುವುದಾಗಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com