ಕೊಡಗು: ಬದಲಾಗುತ್ತಿರುವ ಹವಾಮಾನ, ಮಳೆಯಿಂದ ಅರೇಬಿಕ ಕಾಫಿ ವೈವಿಧ್ಯದ ಮೇಲೆ ಪರಿಣಾಮ

ಬದಲಾಗುತ್ತಿರುವ ಮಳೆ ಹಾಗೂ ಹವಾಮಾನದ ಪರಿಣಾಮ ಕೊಡಗು ಪ್ರದೇಶಗಳಲ್ಲಿ ಬೆಳೆಯುವ ಅರಾಬಿಕ ಕಾಫಿ ವೈವಿಧ್ಯದ ಮೇಲೆ ಉಂಟಾಗಿದೆ.
ಅರೇಬಿಕ ಕಾಫಿ
ಅರೇಬಿಕ ಕಾಫಿ

ಮಡಿಕೇರಿ: ಬದಲಾಗುತ್ತಿರುವ ಮಳೆ ಹಾಗೂ ಹವಾಮಾನದ ಪರಿಣಾಮ ಕೊಡಗು ಪ್ರದೇಶಗಳಲ್ಲಿ ಬೆಳೆಯುವ ಅರೇಬಿಕ ಕಾಫಿ ವೈವಿಧ್ಯದ ಮೇಲೆ ಉಂಟಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅರೇಬಿಕ ಕಾಫಿ ಬಗೆಯ ದರ ಏರಿಕೆಯಾಗಿದ್ದರೆ, ಇತ್ತ ಹವಾಮಾನ ಬದಲಾವಣೆ, ಮಳೆಯ ಬದಲಾವಣೆಗಳಿಂದಾಗಿ ಕೊಡಗಿನಲ್ಲಿರುವ ಈ ವಿಧದ ಕಾಫಿ ಬೆಳೆಗಾರರು ಬೆಳೆಯನ್ನು ನಿಭಾಯಿಸಲು ಹೆಣಗಾಡುವ ಪರಿಸ್ಥಿತಿ ಉಂಟಾಗಿದೆ.

ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ಅತೀವ ನಷ್ಟ ಎದುರಿಸಿದ್ದು, ಅರೇಬಿಕ ವಿಧದ ಕಾಫಿ ಬೆಳೆಯನ್ನು ಸಣ್ಣ ಕಾಫಿ ಬೆಳೆಗಾರರು ಊಹೆ ಮಾಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚೆಟ್ಟಳ್ಳಿಯ ಕಾಫಿ ಬೆಳೆಗಾರ ಕೆ ಸುಬ್ಬಯ್ಯ ಹೇಳಿದ್ದಾರೆ.

8 ಎಕರೆ ಪ್ರದೇಶದಲ್ಲಿ ಅರೇಬಿಕ ವಿಧದ ಕಾಫಿ ಬೆಳೆಯನ್ನು ಬೆಳೆದಿರುವ ಸುಬ್ಬಯ್ಯ, ಪರಿಸ್ಥಿತಿಯ ಬಗ್ಗೆ ವಿವರಿಸಿದ್ದು, "11 ಎಕರೆ ಪ್ರದೇಶದಲ್ಲಿ ಅರೇಬಿಕ ಹಾಗೂ ರೊಬಸ್ಟಾ ವಿಧದ ಕಾಫಿ ಬೆಳೆಯನ್ನು ಬೆಳೆದಿದ್ದೇನೆ, ಅರೇಬಿಕ ಮಾದರಿಯ ಬೆಳೆಯನ್ನು ನಿಭಾಯಿಸುವುದಕ್ಕೆ ಸಾಧ್ಯವಾಗದೇ 8 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ತೆಗೆದುಹಾಕಬೇಕಾಯಿತು" ಎಂದು ಹೇಳಿದ್ದಾರೆ.
 
ಅಕಾಲಿಕ ಮಳೆಯಿಂದ ಕಾಫಿ ಕೊಯ್ಲಿಯ ಅವಧಿಗೂ ಮುನ್ನವೇ ಫಸಲು ಬರುತ್ತಿದೆ. ಈ ಆಗಸ್ಟ್ ತಿಂಗಳಲ್ಲೇ ಕಾಫಿ ಫಸಲು ಬಿಟ್ಟಿದೆ. ಈ ಮಳೆಯಲ್ಲಿ ಅದನ್ನು ಹೇಗೆ ಕಟಾವು ಮಾಡುವುದು ಹೇಗೆ? ಅದನ್ನು ಒಣಗಿಸುವುದು ಎಲ್ಲಿ? ಎಂದು ಸುಬ್ಬಯ್ಯ ಪ್ರಶ್ನಿಸಿದ್ದಾರೆ.

ಅರೇಬಿಕ ಮಾದರಿಯ ಕಾಫಿ ಗಿಡಗಳು ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಫಸಲಿಗೆ ಬರುತ್ತವೆ, ನವೆಂಬರ್ ತಿಂಗಳಲ್ಲಿ ಕಟಾವು ಮಾಡಲಾಗುತ್ತದೆ.  ಆದರೆ ಮಳೆಯ ಕಾಲ ಬದಲಾವಣೆಯಾಗಿರುವುದು ಹಾಗೂ ಹವಾಮಾನ ಬದಲಾವಣೆ ಸುಬ್ಬಯ್ಯ ರೀತಿಯಲ್ಲಿ ಅನೇಕ ಸಣ್ಣ ಕಾಫಿ ಬೆಳೆಗಾರರ ಮೇಲೆ ಪರಿಣಾಮ ಬೀರಿದೆ 

ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ.ಕಾವೇರಪ್ಪ ಮಾತನಾಡಿದ್ದು, ಅರೇಬಿಕ ಮಾದರಿಯ ಕಾಫಿ ಗಿಡಗಳಿಗೆ ಕಪ್ಪು ಕೊಳೆತ ರೋಗ ಹೆಚ್ಚು ಕಾಡಲಿದ್ದು ಕುಸಿತ ಉಂಟಾಗುತ್ತಿದೆ. ಅರೇಬಿಕ ಮಾದರಿಯ ಕಾಫಿ ಬೆಳೆ ಉತ್ತರ ಕೊಡಗಿನಲ್ಲಿ ಹೆಚ್ಚು ಕಂಡುಬರುತ್ತದೆ. ಅಕಾಲಿಕ ಮಳೆ ಹಾಗೂ ಪ್ರವಾಹದ ಪರಿಣಾಮ ಬೆಳೆಗಳು ಬೆಳಗಾರರ ಕೈಗೆ ಸಿಗದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡರೂ ಸಹ ಅದರ ಪ್ರಯೋಜನ ಪಡೆಯಲು ಸಾಧ್ಯವಾಗದೇ ಕಾಫಿ ಬೆಳೆಗಾರರು ಕೈ ಚೆಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ. "ಕಾಫಿ ಬೆಳೆಗಳ ಕ್ಷೇತ್ರವನ್ನು ಉತ್ತೇಜಿಸಲ್ಪು ಸರ್ಕಾರ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ ಹಾಗೂ ವಿಮೆಯ ನೀತಿಗಳನ್ನು ಜಾರಿಗೊಳಿಸಬೇಕಿದೆ" ಎಂದು ಅವರು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com