ಬೆಂಗಳೂರು: ಇನ್ಮುಮುಂದೆ ಸಾರಿಗೆ ಇಲಾಖೆ ಕಡಿಮೆ ಖರ್ಚಿನಲ್ಲಿ ಹಾಗೂ ಅಲ್ಪ ಸಮಯದಲ್ಲಿ ಭಾರೀ ಗಾತ್ರದ ಬಸ್ಸುಗಳನ್ನು
ಹಿಡಿದು ನಿಗಮದ ಎಲ್ಲಾ ಬಸ್ಸುಗಳನ್ನು ಸಹ ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸಲಿದೆ.
ಎಟಿಎಸ್ ಇಎಲ್ ಜಿಐ ಕಂಪೆನಿ ಸಹಯೋಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ ಆರ್ ಟಿಸಿ) ಸ್ವಯಂಚಾಲಿತ ನೂತನ ಸುಧಾರಿತ ವಾಹನ ತೊಳೆಯುವ ಯಂತ್ರವನ್ನು ಬಳಸಲು ಮುಂದಾಗಿದ್ದು, ಸಾರಿಗೆ ನಿಗಮದಲ್ಲಿ ಪ್ರಾಯೋಗಿಕವಾಗಿ ವೈಶಿಷ್ಯತೆಗಳನ್ನೊಳಗೊಂಡಿರುವ ಸ್ವಯಂಚಾಲಿತ ಯಂತ್ರವನ್ನು ಸ್ಥಾಪಿಸಿದೆ.
ಒಂದು ಬಸ್ಸನ್ನು ತೊಳೆಯಲು 5 ನಿಮಿಷ ತಗಲಲಿದ್ದು, 250 ಲೀಟರ್ ನೀರಿನ ಪ್ರಮಾಣ ಹಾಗೂ 30 ಗ್ರಾಂ ಡಿಟರ್ಜೆಂಟ್ ಬೇಕಾಗಿರುತ್ತದೆ. ಸದರಿ ಯಂತ್ರದಿಂದ ಸಂಪೂರ್ಣವಾಗಿ ಮಾನವ ಶಕ್ತಿ ಉಳಿತಾಯವಾಗಲಿದ್ದು, ಶೇಕಡ 50% ರಷ್ಟು ವಿದ್ಯುತ್ ಶಕ್ತಿ ಹಾಗೂ ನೀರಿನ ಬಳಕೆ ಕಡಿಮೆಯಾಗುತ್ತದೆ. ಈ ಯಂತ್ರದ ಕವಚವು ಸ್ಟೈನ್‍ಲೆಸ್ ಸ್ಟೀಲ್‍ನಿಂದ ನಿರ್ಮಾಣವಾಗಿದ್ದು, ತುಕ್ಕು ಹಿಡಿಯದಾಗಿದೆ.
ಕಂಪನಿ ನಿರ್ಮಿತ 17 ಲಕ್ಷ ರೂ. ವೆಚ್ಚದ ಯಂತ್ರ ಇದಾಗಿದ್ದು, ಇದನ್ನು ಎಲ್ಲಾ ಬಸ್ಸಿಗೆ ತಕ್ಕಂತೆ ಆಟೋಮೆಟಿಕ್ ಆಗಿ ವಾಷ್ ಮಾಡಲು,
ಬ್ರಷ್‍ಗಳ ಚಲನೆಗಳನ್ನು ಸೆನ್ಸಾರ್ ಹಾಗೂ ಪ್ರೋಗ್ರಾಮ್ ಮೂಲಕ ನಿಯಂತ್ರಿಸಬಹುದಾಗಿದೆ. ಅಲ್ಲದೇ ವಾಹನವನ್ನು ನಿಗಧಿತ ಸ್ಥಳದಲ್ಲಿ ನಿಲ್ಲಿಸಿಕೊಂಡು ಯಂತ್ರದ ಬ್ರಷ್‍ಗಳನ್ನು ಚಲಿಸಿ ವಾಷಿಂಗ್ ಮಾಡುವ ಸೌಲಭ್ಯವನ್ನೂ ಇದು ಹೊಂದಿದೆ. ಈ ಯಂತ್ರ 3 ಪಾಲಿಥಿನ್ ಬ್ರಷ್‍ಗಳನ್ನು ಹೊಂದಿದ್ದು, ವಾಹನದ ಹೊರ ಭಾಗದ ಕವಚ, ಮುಂಭಾಗದ ಕವಚ, ದೊಡ್ಡ ಗಾಳಿತಡೆ ಗಾಜು, ಸೈಡ್ ಮಿರರ್ ಕೊಂಬುಗಳು, ಹಿಂಭಾಗದ ಕವಚ ಮತ್ತು ರೂಫ್ ಎ.ಸಿ ಯುನಿಟ್‍ಗಳನ್ನು ವಾಷ್ ಮಾಡಬಹುದಾಗಿರುತ್ತದೆ. ನಳಿಕೆಗಳಿಂದ ನಿಖರವಾಗಿ ಶ್ಯಾಂಪೂ ಸ್ಪ್ರೇಮಾಡಲು ನಿಗಧಿತ ಡೋಸಿಂಗ್ ಪಂಪ್ ಅಳವಡಿಸಲಾಗಿದ್ದು, ಪ್ರತ್ಯೇಕವಾದ ಶ್ಯಾಂಪೂ ವಾಷಿಂಗ್ ಸೈಕಲ್ ವ್ಯವಸ್ಥೆ ಅಳವಡಿಸಲಾಗಿದೆ.
Advertisement