ಮೈಸೂರು ಅತ್ಯಾಚಾರ ಪ್ರಕರಣ: ಆರೋಪಿಗಳ ಕೃತ್ಯ ಇದೇ ಮೊದಲಲ್ಲ, ಟಾರ್ಗೆಟ್ ಆಗಿತ್ತು ಹಲವು ಜೋಡಿ!

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಂಧಿತವಾಗಿರುವ ಆರೋಪಿಗಳು ಲಲಿತಾದ್ರಿಪುರದಲ್ಲಿ ಸಂಚರಿಸುವ ದಂಪತಿ, ಒಂಟಿ ಮಹಿಳೆ ಮತ್ತಿತರರನ್ನು ನಿರಂತರವಾಗಿ ಟಾರ್ಗೆಟ್ ಮಾಡುತ್ತಿದ್ದರು.
ಅತ್ಯಚಾರ ಪ್ರಕರಣಗಳ ಬಗ್ಗೆ ಚಿತ್ರದ ಮೂಲಕ ಎಚ್ಚರಿಕೆ
ಅತ್ಯಚಾರ ಪ್ರಕರಣಗಳ ಬಗ್ಗೆ ಚಿತ್ರದ ಮೂಲಕ ಎಚ್ಚರಿಕೆ

ಮೈಸೂರು: ಆಗಸ್ಟ್ 24ರ ಸಂಜೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಂಧಿತವಾಗಿರುವ ಆರೋಪಿಗಳು ಲಲಿತಾದ್ರಿಪುರದಲ್ಲಿ ಸಂಚರಿಸುವ ದಂಪತಿ, ಒಂಟಿ ಮಹಿಳೆ ಮತ್ತಿತರರನ್ನು ನಿರಂತರವಾಗಿ ಟಾರ್ಗೆಟ್ ಮಾಡುತ್ತಿದ್ದರು ಎಂದು ಪೊಲೀಸರು ಬಹಿರಂಗ ಪಡಿಸಿದ್ದಾರೆ.

ಈ ಆರೋಪಿಗಳು ಈ ಹಿಂದೆ ಹಲವು ಪುರುಷರ ಮೇಲೆ ಹಲ್ಲೆ, ಮಹಿಳೆಯರಿಗೆ ಕಿರುಕುಳ ನೀಡಿ ಅವರಿಂದ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡು ನಿರ್ಭಿತಿಯಿಂದ ಓಡಾಡುತ್ತಿದ್ದರು. ಏಕೆಂದರೆ ಈ ಮೊದಲು ಅವರಿಂದ ತೊಂದರೆಗೊಳಪಟ್ಟ ಯಾರೊಬ್ಬರು ಅವರ ವಿರುದ್ಧ ದೂರು ದಾಖಲಿಸಿರಲಿಲ್ಲ.

ತಮಿಳು ಮಾತನಾಡಬಲ್ಲ ನಾಲ್ಕು ಪೊಲೀಸರನ್ನೊಳಗೊಂಡ ತಂಡ ಸುಮಾರು 11 ಗಂಟೆಗಳ ಕಾಲ ಆರೋಪಿಗಳ ಬಂಧನಕ್ಕೂ ತಮಿಳುನಾಡಿನ ತಾಳವಾಡಿ ಜಿಲ್ಲೆಯ ತಿರುಪ್ಪುರ್ ನಲ್ಲಿ ಕಾರ್ಯಾಚರಣೆ ನಡೆಸಿತ್ತು, ಆರೋಪಿಗಳನ್ನು ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.

ಪ್ರಕರಣದಲ್ಲಿ 7 ಮಂದಿ ಆರೋಪಿಗಳು ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರಪ ತಿರುಪ್ಪುರು ಮತ್ತಿರರ ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ.  ಮೈಸೂರಿನಲ್ಲಿ ನಡೆದ ಶ್ರೀಗಂಧ ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿ ಭಾಗಿಯಾಗಿದ್ದ. ಈರೋಡ್ ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಭಾಗಿಯಾಗಿದ್ದಾನೆ.

ಅಜ್ಞಾತ ಸ್ಥಳದಲ್ಲಿ ಐವರನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು, ಮೈಸೂರಿಗೆ ಜಾಲಿಗಾಗಿ ಬರುತ್ತಿದ್ದವರ ಜೊತೆಗೆ ಚಾಮುಂಡಿ ಬೆಟ್ಟದ ಬಳಿ ಮೋಟಾರ್ ಬೈಕ್‌ ನಲ್ಲಿ ಚಲಿಸುವ ದಂಪತಿಗಳಿಂದ ಸೆಲ್‌ಫೋನ್‌ಗಳು, ಆಭರಣಗಳು ಮತ್ತು ಬೆಲೆಬಾಳುವ ವಸ್ತು ಮತ್ತು ಹಣವನ್ನು ಕಸಿದುಕೊಳ್ಳುತ್ತಿದ್ದರು. ಇವರಲ್ಲಿ ಒಬ್ಬ ಆರೋಪಿಗೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಕಿರುಕುಳ ನೀಡುವ ಚಟ ಹೊಂದಿದ್ದ, ಉಳಿದವರು ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಳ್ಳುತ್ತಿದ್ದರು.

ಆರೋಪಿಗಳ ತಂಡವು ನಿಯಮಿತವಾಗಿ ಬಂಡಿಪಾಳ್ಯದ ಎಪಿಎಂಸಿ ಯಾರ್ಡ್ ನಲ್ಲಿ ಮದ್ಯ ಖರೀದಿಸಿ ನಂತರ ಚಾಮುಂಡಿ ಬೆಟ್ಟದ ತಪ್ಪಲಿಗೆ ತಲುಪಿ ಬಲಿಪಶುಗಳಿಗಾಗಿ ಕಾಯುತ್ತಿತ್ತು. ರಿಂಗ್ ರೋಡ್ ನಲ್ಲಿ ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿತ್ತು. 

ಈ ಹಿಂದೆ ಹಲವು ಪ್ರಕರಣಗಳಂತೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಯುವತಿ ಕೂಡ ದೂರು ದಾಖಲಿಸುವುದಿಲ್ಲ ಎಂದು ಆರೋಪಿಗಳು ನಂಬಿದ್ದಾಗಿ ತಿಳಿಸಿದ್ದಾರೆ. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಆರೋಪಿಗಳ ಮಾದರಿಗಳನ್ನು ಸಂಗ್ರಹಿಸಲು ತಜ್ಞರ ತಂಡ ಮೈಸೂರಿಗೆ ಆಗಮಿಸಿದೆ. 

ತನ್ನ ಹೆತ್ತವರೊಂದಿಗೆ ಮುಂಬೈಗೆ ವಾಪಸ್ ಹೋಗಿರುವ ಸಂತ್ರಸ್ತೆ ಇನ್ನೂ ಆಘಾತದಿಂದ ಹೊರಬಂದು ಪೊಲೀಸರಿಗೆ ಹೇಳಿಕೆ ನೀಡಬೇಕಾಗಿದೆ. ನಂತರ ಆಕೆಯ ಹೇಳಿಕೆಯನ್ನು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಆಕೆಯ ಸ್ನೇಹಿತ ನೀಡಿದ ಹೇಳಿಕೆಯ ಆಧಾರದ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರು, ಆಕೆ ಸಹಜ ಸ್ಥಿತಿಗೆ ಮರಳಿದ ನಂತರ ತನಿಖೆಗೆ ಸಹಕರಿಸಬಹುದು ಎಂದು ಆಶಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ ಎಫ್ಎಸ್ಎಲ್ ತಂಡವು ಡಿಎನ್ ಎ ಮಾದರಿಗಳನ್ನು ಕೂಡ ಸಂಗ್ರಹಿಸಿದೆ.

ತನಿಖಾ ತಂಡವು ಸೋಮವಾರ ಆರೋಪಿಯನ್ನು ಆಲನಹಳ್ಳಿ ಪೊಲೀಸ್ ವ್ಯಾಪ್ತಿಯ ಲಲಿತಾದ್ರಿಪುರದ ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ. ಸಾಮೂಹಿಕ ಅತ್ಯಾಚಾರ ನಡೆದ ಸ್ಥಳಕ್ಕೆ ಬಹಳಷ್ಟು ಜನರು, ವಿಶೇಷವಾಗಿ ಹುಡುಗಿಯರು ಭೇಟಿ ನೀಡುತ್ತಿದ್ದಾರೆ, ಪೊಲೀಸರು ಸ್ಥಳದಲ್ಲಿ ಜನಸಂದಣಿಯನ್ನು ತಪ್ಪಿಸಲು ಯತ್ನಿಸುತ್ತಿದ್ದಾರೆ.

ಮೈಸೂರು ಮೂಲದ ಕಲಾವಿದರಾದ ರಾಹುಲ್ ಮತ್ತು ಸುಮಂತ್ ಗೌಡ ಭಾನುವಾರ ದೇವರಾಜ ಮೊಹಲ್ಲಾದ ದಿವಾನ್ ರಸ್ತೆಯಲ್ಲಿ ಚಿತ್ರ ಬರೆದು ಅತ್ಯಾಚಾರದಂತಹ ಘೋರ ಅಪರಾಧಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದರು. ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com