ಮೀಸಲಾತಿ ಬೇಡಿಕೆ ಮರುಪರಿಶೀಲನೆ ಅಧ್ಯಯನ: ತ್ರಿ ಸದಸ್ಯ ಸಮಿತಿಯ ಮೊದಲ ಸಭೆ
ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನು ಪುನರ್ ಪರಿಶೀಲಿಸುವ ಸಂಬಂಧ ರಾಜ್ಯ ಸರ್ಕಾರ, ನಿವೃತ್ತ ಉಪಲೋಕಾಯುಕ್ತ ಸಂತೋಷ್ ಬಿ ಆಡಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ.
Published: 31st August 2021 01:43 PM | Last Updated: 31st August 2021 01:43 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನು ಪುನರ್ ಪರಿಶೀಲಿಸುವ ಸಂಬಂಧ ರಾಜ್ಯ ಸರ್ಕಾರ, ನಿವೃತ್ತ ಉಪಲೋಕಾಯುಕ್ತ ಸಂತೋಷ್ ಬಿ ಆಡಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ.
ತ್ರಿಸದಸ್ಯ ಪೀಠದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂಆರ್ ಕಾಂಬ್ಳೆ ಮತ್ತು ಮೈಸೂರು ಮಹಾರಾಣಿ ಕಾಲೇಜು ಸಹಾಯಕ ಪ್ರಾದ್ಯಾಪಕ ಡಾ.ಬಿವಿ ವಸಂತ್ ಕುಮಾರ್ ಅವರನ್ನೊಳಗೊಂಡಿದೆ. ಈ ತ್ರಿಸದಸ್ಯ ಪೀಠ ನಿಯಮಗಳ ಕುರಿತು ಚರ್ಚಿಸಲು ಶುಕ್ರವಾರ ತನ್ನ ಮೊದಲ ಸಭೆಯನ್ನು ನಡೆಸಿತು.
ಜುಲೈ 1 ರಂದು ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಸಮಿತಿಯ ಉಲ್ಲೇಖದ ನಿಯಮಗಳಲ್ಲಿ ಪ್ರಸ್ತುತ 3 ಬಿ ವರ್ಗದಲ್ಲಿರುವ ಪಂಚಮಸಾಲಿ ಲಿಂಗಾಯತ ಉಪ-ಪಂಗಡವನ್ನು 2 ಎ ವರ್ಗದಲ್ಲಿ ಯಾವ ಸಂದರ್ಭಗಳಲ್ಲಿ. ಸೇರಿಸಬಹುದು ಎಂಬ ಬಗ್ಗೆ ಚರ್ಚಿಸಿದೆ.
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿಯ ಅನುಷ್ಠಾನವನ್ನು ಸಮಿತಿಯು ಸೂಚಿಸಬಹುದು, ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಧಾನಗಳನ್ನು ಶಿಫಾರಸು ಮಾಡಬಹುದು ಮತ್ತು ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸುವ ಸಂಬಂಧ ಶಿಫಾರಸು ಮಾಡುವ ಸಾಧ್ಯತೆಯಿದೆ.
ಮಾರ್ಚ್ 10 ರಂದು, ರಾಜ್ಯ ಸರ್ಕಾರವು ನ್ಯಾಯಮೂರ್ತಿ ಸಂತೋಷ್ ಬಿ ಆಡಿ ನೇತೃತ್ವದಲ್ಲಿ , ಮಾಜಿ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಮತ್ತು ಡಾ ಬಿ ವಿ ವಸಂತಕುಮಾರ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿತು. ಅದೇ ಸಮಿತಿಯನ್ನು ಈಗ ಪುನರ್ ರಚಿಸಲಾಗಿದೆ.
ಪಂಚಮಸಾಲಿಗಳು ಪ್ರಸ್ತುತ 3 ಬಿ ವರ್ಗದಿಂದ 2 ಎ ವರ್ಗಕ್ಕೆ ಸೇರಿಸಲು ಒತ್ತಾಯಿಸುತ್ತಿದ್ದಾರೆ, ಈ ಮನವಿಯನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ರವಾನಿಸಲಾಗಿದೆ. ಕುರುಬರು ತಮ್ಮನ್ನು ಎಸ್ಟಿ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಈ ಸಂಬಂಧ ಜನಾಂಗೀಯ ಅಧ್ಯಯನ ನಡೆಯುತ್ತಿದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಶಿಫಾರಸ್ಸಿನಂತೆ ಎಸ್‌ಸಿ/ ಎಸ್‌ಟಿಗಳು, ವಿಶೇಷವಾಗಿ ವಾಲ್ಮೀಕಿಗಳು ಹೆಚ್ಚಿನ ಮೀಸಲಾತಿಯನ್ನು ಬಯಸಿದ್ದಾರೆ. ಹೀಗಾಗಿ ಮೂವರು ಸದಸ್ಯರ ಸಮಿತಿಯು ಎಲ್ಲಾ ಕೋಟ-ಸಂಬಂಧಿತ ಬೇಡಿಕೆಗಳನ್ನು ಪರಿಶೀಲಿಸುವ ಕೆಲಸ ಮಾಡುತ್ತಿದೆ.