ಮತ್ತೊಬ್ಬ ಯುವಕನ ಜತೆ ಮದುವೆ: ಪ್ರೇಮಿಗಳಿಬ್ಬರು ಕೆಆರ್ ಎಸ್ ಹಿನ್ನೀರಿಗೆ ಹಾರಿ ಆತ್ಮಹತ್ಯೆ
ಮತ್ತೊಬ್ಬ ಯುವಕನ ಜತೆ ಮನೆಯವರು ಮದುವೆ ಮಾಡಿದ್ದರಿಂದ ಬೇಸತ್ತು ಪ್ರೇಮಿಗಳಿಬ್ಬರು(Lovers) ಕೆಆರ್‌ಎಸ್ ಹಿನ್ನೀರಿಗೆ(KRS river) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ.
Published: 03rd December 2021 09:37 AM | Last Updated: 03rd December 2021 02:47 PM | A+A A-

ಸಾಂದರ್ಭಿಕ ಚಿತ್ರ
ಮಂಡ್ಯ: ಮತ್ತೊಬ್ಬ ಯುವಕನ ಜತೆ ಮನೆಯವರು ಮದುವೆ ಮಾಡಿದ್ದರಿಂದ ಬೇಸತ್ತು ಪ್ರೇಮಿಗಳಿಬ್ಬರು(Lovers) ಕೆಆರ್‌ಎಸ್ ಹಿನ್ನೀರಿಗೆ(KRS river) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ. ಮೈಸೂರಿನ ಮೇಟಗಳ್ಳಿಯ ನವೀನ್ ಹಾಗೂ ನಿಸರ್ಗ ಆತ್ಮಹತ್ಯೆ(Suicide) ಮಾಡಿಕೊಂಡ ಯುವ ಪ್ರೇಮಿಗಳಾಗಿದ್ದಾರೆ.
ಸಂಬಂಧಿಕರಾಗಿದ್ದ ನವೀನ್ ಮತ್ತು ನಿಸರ್ಗ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ನವೆಂಬರ್ 20ರಂದು ಯುವತಿ ನಿಸರ್ಗಳಿಗೆ ಬಲವಂತವಾಗಿ ಬೇರೆ ಯುವಕನ ಜೊತೆ ಮದುವೆ ಮಾಡಲಾಗಿತ್ತು. ಹೀಗಾಗಿ ನವೀನ್ ಮತ್ತು ನಿಸರ್ಗ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಮೊನ್ನೆ ಡಿಸೆಂಬರ್ 1ರಂದು ಮನೆಯಿಂದ ಹೇಳದೆ ಹೊರಬಂದಿದ್ದಾರೆ.
ಆತಂಕಗೊಂಡ ಕುಟುಂಬಸ್ಥರು ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಕೆಆರ್‌ಎಸ್ ನಾರ್ತ್ ಬ್ಯಾಂಕ್ ಮಿಲ್ಟ್ರಿ ಕ್ಯಾಂಪ್ ಬಳಿ ಹಿನ್ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ನಿಸರ್ಗ ಧರಿಸಿದ್ದ ಚೂಡಿದಾರದ ಶಾಲಿನಿಂದ ಇಬ್ಬರೂ ಸೊಂಟಕ್ಕೆ ಕಟ್ಟಿಕೊಂಡು ಹಿನ್ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಕೆಆರ್‌ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.